ಕನ್ನಡದಲ್ಲೇ ಉಚಿತ ಮೊಬೈಲ್ ರಿಪೇರಿ! ಶಿವಮೊಗ್ಗ ಯುವಕನಿಂದ ಸ್ವಾವಲಂಬನೆಗೆ ಆನ್‌ಲೈನ್ ದಾರಿ!

Nov 11, 2019, 4:44 PM IST

ಬೆಂಗಳೂರು (ನ.11): ಬರ್ತಾ ಬರ್ತಾ ಇಂಟರ್ನೆಟ್ ಎಲ್ಲಾ ಭಾಷೆಗಳನ್ನು ಮಾತನಾಡಲು ಕಲಿತಿದೆ. ಅದಾಗ್ಯೂ, ಕೆಲವೊಂದು ವಿಚಾರಗಳು ಕನ್ನಡದಲ್ಲಿ ಲಭ್ಯತೆ ಕಡಿಮೆ ಅಥವಾ ಅಲಭ್ಯ.  

ಇದು ಮೊಬೈಲ್ ಜಮಾನ. ಮೊಬೈಲ್ ಬಳಕೆ ಬಗ್ಗೆ ಹೆಚ್ಚೇನು ಹೇಳಬೇಕಾಗಿಲ್ಲ. ಆದರೆ ಮೊಬೈಲ್ ರಿಪೇರಿ ಬಗ್ಗೆ ಹೇಳಲು ಬಹಳಷ್ಟು ವಿಚಾರ ಇದೆ. ಇಂಗ್ಲೀಷ್, ಹಿಂದಿಯಲ್ಲಿ ಆನ್‌ಲೈನ್ ಕಂಟೆಟ್ ಬಹಳ ಇರಬಹುದು, ಕನ್ನಡದಲ್ಲಿ ವಿಜ್ಞಾನ/ತಂತ್ರಜ್ಞಾನಕ್ಕೆ ಸಂಬಂಧಿಸಿದ ವಿಚಾರಗಳಿಗೆ ಬರ ಇದೆ.

ಇಲ್ಲೊಬ್ಬ ಶಿವಮೊಗ್ಗದ ಯುವಕ, ಸೈಯದ್ ತಾಹಿರ್ ಕನ್ನಡದಲ್ಲೇ ಮೊಬೈಲ್ ರಿಪೇರಿ ಬಗ್ಗೆ ಆನ್‌ಲೈನ್ ತರಬೇತಿ ನೀಡಲು ಮುಂದೆ ಬಂದಿದ್ದಾರೆ. ಮೊಬೈಲ್ ರಿಪೇರಿ ಕಲಿತು ಜೀವನ ಕಟ್ಟಿಕೊಳ್ಳಲು ಕನಸು ಕಂಡಿರುವ  ಯುವಕರಿಗೆ ಇದು ನೆರವಾಗಲಿದೆ.. ಇಲ್ಲಿದೆ ವಿವರ..