Jun 4, 2023, 3:01 PM IST
ಈ ಬಾರಿಯ ಮಳೆಗಾಲ ಸಿಲಿಕಾನ್ ಸಿಟಿ ಜನತೆಗೆ ಕಂಟಕವಾಗುವ ಸಾಧ್ಯತೆ ಇದೆ. ಏಕೆಂದರೆ ಮಳೆಗಾಲದಲ್ಲಿ ರಸ್ತೆಯಲ್ಲಿನ ಗುಂಡಿಗಳು ಅವಾಂತರವನ್ನು ಸೃಷ್ಟಿಸುವ ಸಾಧ್ಯತೆ ಇದೆ. ಟ್ರಾಫಿಕ್ ಪೊಲೀಸರು ನೀರು ಸಂಗ್ರಹವಾಗುವ ಜಾಗಗಳನ್ನು ಗುರುತು ಮಾಡಿದ್ದಾರೆ. ಬಹುತೇಕ ಅಂಡರ್ ಪಾಸ್‌ಗಳಲ್ಲಿ ನೀರು ಸಂಗ್ರಹವಾಗಲಿದೆ. ಈ ಪಟ್ಟಿಯನ್ನು ಬಿಬಿಎಂಪಿಗೆ ಪೊಲೀಸ್ ಇಲಾಖೆ ಕಳುಹಿಸಿದೆ. ಅಲ್ಲದೇ ಆದಷ್ಟು ಬೇಗ ಈ ಸಮಸ್ಯೆಯನ್ನು ಬಗೆಹರಿಸುವಂತೆ ಸೂಚಿಸಿದ್ದಾರೆ. ಬೆಂಗಳೂರಿನ 65 ಸ್ಥಳಗಳಲ್ಲಿ ನೀರು ಸಂಗ್ರಹವಾಗಲಿದೆ. ನೀರು ತುಂಬಿದ ತಕ್ಷಣ ಪಂಪಿಂಗ್ ಮಾಡಬೇಕಾಗಿದೆ.
ಇದನ್ನೂ ವೀಕ್ಷಿಸಿ: ಸೋಮೇಶ್ವರ ನೈತಿಕ ಪೊಲೀಸ್ ಗಿರಿ ಹಿಂದಿದ್ಯಾ 'ಕೇರಳ ಸ್ಟೋರಿ' ಕಥೆ?: ಕೇಸ್‌ನ ಸಮಗ್ರ ತನಿಖೆಗೆ ಮಹಿಳಾ ಸಂಘಟನೆ ಒತ್ತಾಯ