2024ರಲ್ಲಿ ಮೋದಿಗೆ ಎದುರಾಗಲಿದ್ಯಾ ಅಸಲಿ ಅಗ್ನಿಪರೀಕ್ಷೆ..?: ಪ್ರಧಾನಿ ವಿರುದ್ಧ ದಶಾಶ್ವಮೇಧ.. ಏನಿದು ಯುದ್ಧವ್ಯೂಹ..?

Jun 24, 2023, 3:54 PM IST

ಇದು ಒಬ್ಬನ ವಿರುದ್ಧದ ಹೋರಾಟ..  ಆ ಒಬ್ಬನನ್ನು ಸೋಲಿಸಲು ತೆರೆಮರೆಯಲ್ಲಿ ನಡೀತಾ ಇರೋ ಕಸರತ್ತು, ಹೆಣೆಯಲಾಗ್ತಿರೋ ರಣವ್ಯೂಹ, ಸಿದ್ಧವಾಗ್ತಿರೋ ಯುದ್ಧವ್ಯೂಹ. ಒಂದೇ ಕಡೆ ಸೇರಿರೋ 15 ಸೇನಾಪತಿಗಳು.. ಆ 15 ಸೇನಾಪತಿಗಳ ಎದುರಲ್ಲಿ ಒಬ್ಬ ಮಹಾವೀರ.  ಇವರೆಲ್ಲರ ವೈರಿ ಒಬ್ಬನೇ, ಎದುರಾಳಿ ಒಬ್ಬನೇ.. ಅದು ಯಾರು ಅನ್ನೋದು ನಿಮ್ಗೆ ಈಗಾಗ್ಲೇ ಗೊತ್ತಾಗಿರತ್ತೆ. ಯಾಕಂದ್ರೆ ಪರಸ್ಪರ ವೈರುಧ್ಯ ದಿಕ್ಕಿನಲ್ಲಿರುವ ವಿರೋಧಿಗಳೆಲ್ಲಾ ಒಂದಾಗ್ತಾರೆ ಅಂದ್ರೆ ಎದುರಾಳಿ ಅಷ್ಟು ಬಲಾಢ್ಯನಾಗಿರ್ಲೇಬೇಕು ಅಲ್ವಾ?. ಅವರು ಬೇರೆಯಾರು ಅಲ್ಲ,ಪ್ರಧಾನಿ ನರೇಂದ್ರ ಮೋದಿ. 2024ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಅವರ ಅಶ್ವಮೇಧದ ಕುದುರೆ ಕಟ್ಟಿ ಹಾಕಲು ವಿರೋಧ ಪಕ್ಷಗಳು ಒಂದಾಗ್ತಾ ಇವೆ. ಬಿಹಾರ ರಾಜಧಾನಿ ಪಾಟ್ನಾದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲಿ 25 ವಿರೋಧ ಪಕ್ಷಗಳ ಸಭೆ ನಡೆದಿದೆ. ಮಹಾಘಟ ಬಂಧನ್ ಮೂಲಕ ಚುನಾವಣೆ ಎದುರಿಸುವ ಬಗ್ಗೆ ಚರ್ಚೆ ನಡೆಸಲಾಗಿದೆ.ನಿತೀಶ್ ಕುಮಾರ್ ಸಾರಥ್ಯದಲ್ಲಿ ನಡೆದ ಮಹಾಮೈತ್ರಿ ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಕೈ ಅಧಿನಾಯಕ ರಾಹುಲ್ ಗಾಂಧಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ಟಿಎಂಸಿ ಅಧಿನಾಯಕಿ ಮಮತಾ ಬ್ಯಾನರ್ಜಿ, ತಮಿಳುನಾಡು ಮುಖ್ಯಮಂತ್ರಿ-ಡಿಎಂಕೆ ನಾಯಕ ಎಂ.ಕೆ ಸ್ಟಾಲಿನ್, ಆರ್'ಜೆಡಿ ಸೇರಿದಂತೆ 25 ಪಕ್ಷಗಳ ನಾಯಕರು ಭಾಗವಹಿಸಿದ್ದಾರೆ. ಇವರೆಲ್ಲರ ಟಾರ್ಗೆಟ್ ಒಂದೇ.. ಮೋದಿಯವರ ಹ್ಯಾಟ್ರಿಕ್ ಪಟ್ಟಾಭಿಷೇಕವನ್ನು ತಡೆಯೋದು, ಮೋದಿ ನಾಗಾಲೋಟಕ್ಕೆ ಬ್ರೇಕ್ ಹಾಕೋದು.

ಇದನ್ನೂ ವೀಕ್ಷಿಸಿ: ಭಾರತ- ಅಮೆರಿಕಾ ಮಧ್ಯೆ ಆರ್ಟೆಮಿಸ್ ಒಪ್ಪಂದ: ಭೂಮಿ, ನೀರು, ಗಾಳಿ ಆಯ್ತು.. ಅಂತರಿಕ್ಷದಲ್ಲೂ ಭಲೆ ಜೋಡಿ!