ಆತನಿಗೆ ಮಾತು ಬರೋಲ್ಲ..ಕಿವಿಯೂ ಕೇಳಿಸೊಲ್ಲ: ಪ್ರೀತಿಸಿದಕ್ಕೆ ಗ್ರಾಮಸ್ಥರು ಕೊಟ್ಟ ಉಡುಗೊರೆ ಏನು ?

ಆತನಿಗೆ ಮಾತು ಬರೋಲ್ಲ..ಕಿವಿಯೂ ಕೇಳಿಸೊಲ್ಲ: ಪ್ರೀತಿಸಿದಕ್ಕೆ ಗ್ರಾಮಸ್ಥರು ಕೊಟ್ಟ ಉಡುಗೊರೆ ಏನು ?

Published : Oct 02, 2023, 02:59 PM IST

ಮೂಕ ಪ್ರೇಮ ಹಕ್ಕಿಗಳ ನೆರವಿಗೆ ನಿಂತ ಸುವರ್ಣನ್ಯೂಸ್..!
ಮೂರು ವರುಷಗಳ ಹಿಂದೆ ಮದುವೆಯಾಗಿದ್ದ ಜೋಡಿ..!
ಮೂಕ ಪಕ್ಷಿಗಳ ಪ್ರೇಮ ಕಥೆಗೆ ಕೊನೆಗೂ ಸಿಕ್ಕ ಸುಖಾಂತ್ಯ..!

ಇದು ಹಿಂದೆಂದೂ ಕಂಡು ಕೇಳರಿಯದ ಅಪರೂಪದ ಪ್ರೇಮ ಕಥೆ. ಇಲ್ಲಿ ಕಥಾ ನಾಯಕನೂ ಇದ್ದಾನೆ.. ನಾಯಕಿಯೂ ಇದ್ದಾಳೆ. ಆದರೆ ಇವರಿಬ್ಬರ ಪ್ರೇಮ ಕಥೆಗೆ ಸಂಭಾಷಣೆಯೇ ಇಲ್ಲ. ಇದು ಕೇವಲ ಮೌನಪ್ರೇಮ ಕಥೆ ಅಷ್ಟೆ. ಇದೇ ಕಥೆಯಲ್ಲಿ ಒಂದು ಇಂಟ್ರಸ್ಟಿಂಗ್ ಆ್ಯಂಗಲ್ ಇದೆ. ನಿಷ್ಕಲ್ಮಶವಾಗಿ ಪ್ರೀತಿಸಿದ ತಪ್ಪಿಗೆ, ಸಿಕ್ಕ ಉಡುಗೊರೆ ಏನು ಅಂತ ನೀವೆ ನೋಡಿ. ಪ್ರೀತಿಸಿದ ತಪ್ಪಿಗೆ ಈ ಪ್ರೇಮಿಗಳಿಗೆ ಗ್ರಾಮಸ್ಥರು ಕೊಟ್ಟ ಉಡುಗೊರೆ ಊರಿಂದ ಬಹಿಷ್ಕಾರ. ಕೈ-ಕೈ ಹಿಡಿದು, ಬೀದಿ ಬೀದಿಗಳಲ್ಲಿ ಓಡಾಡಿ ಕೊನೆಗೆ ಕೈ ಕೊಡೋ ಪ್ರೇಮಿಗಳನ್ನ ನೋಡಿಯೇ ಉಪ್ಪಿ ಅಂದು ಒಂದು ಡೈಲಾಗ್ ಹೇಳಿದ್ರು. ಇಂದಿಗೂ ಈ ಡೈಲಾಗ್ ಮೋಸ ಮಾಡೋ ಪ್ರೇಮಿಗಳಿಗೆ ಅನ್ವಯಿಸುತ್ತೆ. ಆದರೆ ಕೆಲ ಪ್ರೇಮಿಗಳು ಈ ಮಾತಿಗೆ ತಧ್ವಿರುದ್ಧವಾಗಿರ್ತಾರೆ. ಕೆಲವರಿಗೆ ಪ್ರೀತಿ-ಪ್ರೇಮವೇ ಸರ್ವಸ್ವ, ಅದೇ ಜೀವನ ಆಗಿರುತ್ತೆ. ಈ ಜೋಡಿಗೂ ತಮ್ಮ ಪ್ರೀತಿಯೇ ಎಲ್ಲವೂ ಆಗಿತ್ತು. ಅದೇ ಕಾರಣಕ್ಕೆ ಅವರು ಲೋಕದ ಚಿಂತೆಯನ್ನೂ ಮಾಡದೇ ಒಬ್ಬರಿಗೊಬ್ಬರು ಜೀವನ ಸಂಗಾತಿ ಆಗೋದಕ್ಕೆ ನಿರ್ಧಾರ ಮಾಡಿದ್ದರು. ಮದುವೆಯೂ ಆದರೂ ಆದರೆ ಸಿಕ್ಕಿದ್ದು ಗ್ರಾಮಸ್ಥರ ಬಹಿಷ್ಕಾರದ ಸ್ಪೆಷಲ್ ಗಿಫ್ಟ್. ಗ್ರಾಮದ ಜನರು ಮಧ್ಯದಲ್ಲಿ ಕುಳ್ಳರಸಿ ಹೇಗೆ ಇವರಿಬ್ಬರನ್ನ ತರಾಟೆಗೆ ತೆಗೆದುಕೊಂಡಿದ್ದರು. ಇವರೆಲ್ಲರೂ ಇಷ್ಟು ಕೂಗಾಡ್ತಿದ್ರೂ.. ಒದರಾಡ್ತಿದ್ರೂ.. ಇವರಿಬ್ಬರು ಮಾತ್ರ, ಲೋಕವೇ ತಲೆ ಮೇಲೆ ಕಳಚಿ ಬಿದ್ದ ಹಾಗೆ ಕುಳಿತಿದ್ದರು. ಇವರಿಬ್ಬರ ಮೌನವೇ, ಇವರ ಅಸಹಾಯಕತೆಯನ್ನ ಒತ್ತಿ-ಒತ್ತಿ ಹೇಳುತ್ತಿತ್ತು. 

ಇದನ್ನೂ ವೀಕ್ಷಿಸಿ:  "ಡಿಸಿಎಂ ಬೇಡ.. ನಮ್ಮ ಟಾರ್ಗೆಟ್ ಸಿಎಂ ಕುರ್ಚಿ" ಎಂದ ಶಾಮನೂರು..!

02:48ಶ್ರೀದೇವಿ ಮಗಳಿಗೆ 5 ಕೋಟಿಯ ಕಾರ್ ಗಿಫ್ಟ್ ಕೊಟ್ಟಿದ್ದು ಬಾಯ್‌ಫ್ರೆಂಡ್ ಅಲ್ಲ ಮತ್ಯಾರು?
15:48 ತಿಹಾರ್ ಜೈಲು ಕಂಬಿ ಹಿಂದೆ ಉಗ್ರ ತಹಾವೂರ್.. ಯಾರು next​ ಟಾರ್ಗೆಟ್​..?
22:51ನೇಪಾಳದಲ್ಲಿ ಮ್ಯಾಡ್​​ ಹನಿ ತುಂಬಾನೇ ಫೇಮಸ್​​​! ಬುಡಕಟ್ಟು ಜನ ಸಂಗ್ರಹಿಸೋ ತುಪ್ಪಕ್ಕೆ ಹೆಚ್ಚು ಬೇಡಿಕೆ ಏಕೆ?
16:40ಕಣಿವೆ ನಾಡಿನ ಕಾಡುಗಳಲ್ಲಿ ಉಗ್ರಸರ್ಪಗಳ ರಣಬೇಟೆ: ಭಾರತ ಸೇನೆಯ ಆರ್ಭಟಕ್ಕೆ ಭಯೋತ್ಪಾದಕರಿಗೆ ಚಳಿಜ್ವರ!
22:52ಇಲ್ಲಿದೆ ನೋಡಿ ವೈರಲ್​ ಜಗತ್ತಿನಲ್ಲಿ ಸದ್ದು ಮಾಡ್ತಿರೋ ಸಖತ್​ ಸುದ್ದಿಗಳ ಗುಚ್ಛ ವೈರಲ್​ ನ್ಯೂಸ್!
22:24 2025ರಲ್ಲಿ ಏನೇನಾಗ್ತಿದೆ : ವರ್ಷದ ಆರಂಭದಲ್ಲೇ ಭೂಕಂಪ ಪ್ರಳಯ, ಭೀಕರ ಕಾಡ್ಗಿಚ್ಚು ಶೀತ ಬಿರುಗಾಳಿ
25:41 ಏಷ್ಯಾನೆಟ್‌ ಸುವರ್ಣನ್ಯೂಸ್‌ ನ್ಯೂಇಯರ್‌ ಸಂಭ್ರಮ, ಸುವರ್ಣಪಾರ್ಟಿಯಲ್ಲಿ ಗಿಲ್ಲಿ ಕಾಮಿಡಿ
08:03ಡಿಕೆಸು ಹೆಸರೇಳಿ ವಂಚನೆ: ಐಶ್ವರ್ಯ- ವನಿತಾ ನಡುವೆ ಆರೋಪ ಪ್ರತ್ಯಾರೋಪ
15:12ಮತ್ತೊಮ್ಮೆ ಪೊಲೀಸ್‌ ಸ್ಟೇಷನ್‌ಗೆ ಅಲ್ಲು ಅರ್ಜುನ್‌; ವಕೀಲರ ಸಮ್ಮುಖದಲ್ಲೇ ನಟನ ವಿಚಾರಣೆ
22:53 ನೋ ಡೌಟ್, ರಶ್ಮಿಕಾ ರಿಯಲ್ ಲೇಡಿ ಸೂಪರ್‌ಸ್ಟಾರ್: ಐರನ್‌ಲೆಗ್ ಅಲ್ಲ ಗೋಲ್ಡನ್‌ಫ್ಲ್ಯಾಗ್ ಶ್ರೀವಲ್ಲಿ ವಾರ್!
Read more