Apr 12, 2022, 1:11 PM IST
ಹಿಂದಿ ಹೇರಿಕೆ ಎಂಬ ಗಲಾಟೆ ಎಲ್ಲೆಡೆ ಸದ್ದು ಮಾಡುತ್ತಿರುವಾಗ ನಮ್ಮ ಕನ್ನಡದ ಯಕ್ಷಗಾನವು ಉತ್ತರ ಭಾರತದಲ್ಲಿ ಹಿಂದಿಯಲ್ಲಿ ಸದ್ದು ಮಾಡಲು ಹೊರಟಿರುವ ಸುದ್ದಿ ಸಿಕ್ಕಿದೆ.
ಹೌದು, ಎನ್‌ಎಸ್‌ಡಿ ವಾರಣಾಸಿ(NSD VAranasi) ಶಾಖೆಯ 20 ಮಂದಿ ವಿದ್ಯಾರ್ಥಿಗಳು ಉಡುಪಿಗೆ ಬಂದು ಯಕ್ಷಗಾನ ಕಲಿತಿದ್ದಾರೆ. ಅಷ್ಟೇ ಅಲ್ಲ, ರಾಮನವಮಿಯ ಸಂದರ್ಭದಲ್ಲಿ, 'ಚಿತ್ರಪಟ ರಾಮಾಯಣ'ದ ಪ್ರದರ್ಶನ ನಡೆಸಿದ್ದಾರೆ.
Yoga Tips: ಮನೆಯಲ್ಲಿ ವ್ಯಾಯಾಮ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ
ಹೌದು, ಕರ್ನಾಟಕದ ಹೆಮ್ಮೆಯ ಕಲೆಯಾದ ಯಕ್ಷಗಾನವನ್ನು ಮೆಚ್ಚಿ ಬಂದಿರುವ ಎನ್‌ಎಸ್‌ಡಿ ವಿದ್ಯಾರ್ಥಿಗಳು, ದೇಶದ ಖ್ಯಾತ ಸಂಸ್ಥೆಗಳಲ್ಲಿ ಒಂದಾದ ಉಡುಪಿ ಯಕ್ಷಗಾನ ಕೇಂದ್ರದಲ್ಲಿ ಒಂದು ತಿಂಗಳ ಕಾಲ ನಿರಂತರ ತರಬೇತಿ ಪಡೆದಿದ್ದಾರೆ. ದಿನವೊಂದಕ್ಕೆ 15 ಗಂಟೆಗಳ ಕಾಲ ಅಭ್ಯಾಸ ಮಾಡಿ ಯಕ್ಷಗಾನ ಕಲೆಯನ್ನು ಕರತಲಾಮಲಕ ಮಾಡಿಕೊಂಡಿದ್ದಾರೆ. ಯಕ್ಷಗಾನದ ಉಡುಗೆ ತೊಡುಗೆಗಳನ್ನು ಧರಿಸಿ ಹಿಂದಿಯಲ್ಲಿ ಭಾವಪೂರ್ಣ ಅಭಿನಯ ನೀಡಿದ್ದಾರೆ. ಈ ಪ್ರಯತ್ನವು ಯಕ್ಷಗಾನದ ವ್ಯಾಪ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ. ಇಲ್ಲಿ ವೇಷತೊಟ್ಟು ಕುಣಿಯುತ್ತಿರುವ ಪ್ರತಿಯೊಬ್ಬ ಕಲಾವಿದರು ಭವಿಷ್ಯದ ತಾರೆಯರಂದೇ ಹೇಳಬೇಕು. ಮುಂದಿನ ದಿನಗಳಲ್ಲಿ ಬಾಲಿವುಡ್, ಒಟಿಟಿ, ಕಿರುತೆರೆಯಲ್ಲಿ ಮಿಂಚಲು ಸಿದ್ಧರಾಗಿರುವ ಇವರು, ತಮ್ಮ ಕಲಿಕೆಯಲ್ಲಿ ಯಕ್ಷಗಾನ ಅಭ್ಯಾಸ ಒಂದು ಟರ್ನಿಂಗ್ ಪಾಯಿಂಟ್ ಎಂದು ಬಣ್ಣಿಸುತ್ತಾರೆ. ಈ ಸ್ವಾರಸ್ಯಕರ ಸುದ್ದಿಯ ಝಲಕ್ ನೋಡಲು ವಿಡಿಯೋ ಕ್ಲಿಕ್ ಮಾಡಿ.