Punganur Cow: ಜಗತ್ತಿನ ಸ್ಪುರದ್ರೂಪಿ ಹಸು ಪುಂಗನೂರಿನ ಪುಟಾಣಿಗಳನ್ನು ನೋಡಿದ್ದೀರಾ?

Punganur Cow: ಜಗತ್ತಿನ ಸ್ಪುರದ್ರೂಪಿ ಹಸು ಪುಂಗನೂರಿನ ಪುಟಾಣಿಗಳನ್ನು ನೋಡಿದ್ದೀರಾ?

Published : Mar 02, 2022, 06:08 PM IST

ಜಗತ್ತಲ್ಲೇ ಅತಿ ಕುಳ್ಳ, ಆದರೆ, ಅಷ್ಟೇ ಸ್ಪುರದ್ರೂಪಿಯಾದ ಹಸುವಿನ ತಳಿ ಪುಂಗನೂರು. ಈ ಮುದ್ದು ಹಸುಗಳ ಕುರಿತ ವಿವರ ಮಾಹಿತಿ ಇಲ್ಲಿದೆ.

ಬೆಳೆಯೋದು ಎರಡೇ ಅಡಿ, ಅದರೆ ದಷ್ಟಪುಷ್ಟವಾಗಿ ಮೈ ಕೈ ತುಂಬಿಕೊಂಡು ಬಾಲ ನೆಲಕ್ಕೆ ತಾಕಿಸುತ್ತಾ ಓಡಾಡುವ ಈ ಸ್ಪುರದ್ರೂಪಿ ಹಸುವನ್ನು ಒಮ್ಮೆ ನೋಡಿದರೆ ಮತ್ತೊಮ್ಮೆ, ಮತ್ತೊಮ್ಮೆ ನೋಡಿದರೆ ಮಗದೊಮ್ಮೆ ನೋಡಬೇಕೆನಿಸುತ್ತದೆ. ಈ ಮುದ್ದು ಪುಟಾಣಿಗಳ ಅಂದ ಹಾಗೂ ಗಾತ್ರ ನೋಡಿದ್ರೆ ಅವನ್ನು ಕೊಟ್ಟಿಗೆಯಲ್ಲಿಡೋಲ್ಲ, ಬದಲಿಗೆ ಮನೆಯೊಳಗೇ ಸಾಕೋಕೆ ಮನಸ್ಸು ಮಾಡ್ತೀರಿ. 

ಹೌದು, ಆಂಧ್ರದ ಚಿತ್ತೂರು ಜಿಲ್ಲೆಯ ಪುಂಗನೂರು ಎಂಬ ಹಳ್ಳಿ ಮೂಲದ ಪುಂಗನೂರು ಹಸು ಜಗತ್ತಿನ ಅತಿ ಸುಂದರ ಹಸು ಎಂಬ ಪ್ರಶಂಸೆಗೆ ಪಾತ್ರವಾಗಿದೆ. ಇದರ ಹಾಲು ಅಮೃತ ಸಮಾನ ಎಂದು ಶಿವನೇ ಮೆಚ್ಚಿ ಕೊಂಡಾಡಿದ್ದನಂತೆ. ಇನ್ನು ತಿರುಪತಿ ತಿಮ್ಮಪ್ಪನಿಗೂ ಪ್ರತಿದಿನ ನೈವೇದ್ಯಕ್ಕೆ ಬಳಸುವ ಹಾಲು ಪುಂಗನೂರು ತಳಿಯ ಹಸುವಿನದ್ದೇ. ಪುರಾಣದಲ್ಲಿ ಕಾಮಧೇನು ಎಂದು ಕರೆದಿರುವುದೂ ಈ ತಳಿಯ ಹಸುಗಳನ್ನೇ. ಈ ಎಲ್ಲ ಕಾರಣಗಳ ಹಿನ್ನೆಲೆಯಲ್ಲಿ ಈ ಹಸುವಿನ ಹಾಲು ಲೀಟರ್‌ಗೆ 250 ರುಪಾಯಿಯಂತೆ ಮಾರಾಟವಾಗುತ್ತದೆ. 

ಪ್ರಣಯವಿಲ್ಲದ Co-Parenting ಜೀವನ ಹೇಗಿರುತ್ತೆ ಗೊತ್ತಾ?

ಈ ತಳಿಯ ಹಸುಗಳು ಹೈನುಗೈರಿಕೆಗೂ ಸೈ, ಹುಡಿಮಣ್ಣ ಭೂಮಿಯಲ್ಲಿ ಕೆಲಸಕ್ಕೂ ಸೈ. ಆದರೆ ಇತ್ತೀಚೆಗೆ ಪುಂಗನೂರು ತಳಿಯ ಹಸುಗಳು ಬಹಳ ಅಪರೂಪವಾಗಿವೆ. ಆಂಧ್ರಪ್ರದೇಶದ ಕೆಲ ಜಿಲ್ಲೆಗಳನ್ನು ಹೊರತುಪಡಿಸಿದರೆ ನಮ್ಮ ಕರಾವಳಿ ಭಾಗದಲ್ಲಿ ಎಲ್ಲೋ ಕೆಲ ಬೆರಳೆಣಿಕೆಯಷ್ಟನ್ನು ಕಾಣಬಹುದು. ಈ ಪುಂಗನೂರು ಕಾಮಧೇನುವಿನ ಕುರಿತು ಹೆಚ್ಚಿನ ವಿವರಗಳಿಗಾಗಿ ವಿಡಿಯೋ ವೀಕ್ಷಿಸಿ. 

22:45DK Shivakumar: ಜ್ಯೋತಿಷಿ ಹೇಳಿದ್ದ ಭವಿಷ್ಯ; ಮನಮೆಚ್ಚಿದ ಮಡದಿಯಾಗಿ DKS ಬಾಳಿಗೆ ಬಂದಿದ್ದು ಹೇಗೆ ಉಷಾ?
23:58Dk Shivakumar ತುಂಟಾಟದ ಕಥೆ ತೆರೆದಿಟ್ಟ ಗೆಳೆಯ! 'ಕ್ರೇಜಿಸ್ಟಾರ್' ಕಷ್ಟದಲ್ಲಿದ್ದಾಗ ಕೈ ಹಿಡಿದಿದ್ದ ಮಿತ್ರ..!
18:52ಭೂಮಂಡಲಕ್ಕೆ 3 ವೈರಸ್‌ಗಳ ಶಾಪ! ಎಬೋಲಾ, ಕೊರೊನಾ ಜೊತೆ ಹಂಟಾ ವೈರಸ್ ಅಟ್ಟಹಾಸ: ಮತ್ತೆ ಶುರುವಾಯ್ತು ಲಾಕ್ ಡೌನ್ ಭೀತಿ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
24:08ಲೇಡಿ ಕಾನ್ಸ್​ಟೇಬಲ್​ಗೆ ಸಬ್​​ಇನ್ಸ್​​ಪೆಕ್ಟರ್​​​ ಮೇಲೆ ಲವ್​​..! ನೀನೇ ಬೇಕು ಅಂದವಳು ಕೈ ಕೊಟ್ಟಿದ್ದೇಕೆ?
24:12Wife escape: ಜಿಮ್ ಬಾಡಿ ಗಂಡನಿಂದ ಸುಖವಿಲ್ಲವೆಂದು, ಸ್ಲಿಮ್ ಬಾಡಿ ಹುಡುಗನ ಹಿಂದೆ ಹೆಂಡತಿ ಪರಾರಿ!
24:18ಮನಸ್ಸಿಲ್ಲದೆ ಮದುವೆಯಾದ ಗಂಡನ ಬಿಟ್ಟು ಪ್ರೇಮಿಯೊಂದಿಗೆ ಹೋದ ಮಗಳು; ವಾಪಸ್ ಕರೆತಂದು ವಿಷವುಣಿಸಿ ಸುಟ್ಟು ಹಾಕಿದ ಅಪ್ಪ!
25:00ಅವಳಿಗೆ 57.. ಅವನಿಗೆ 27, ಇಬ್ಬರಿಗೂ ಆಗಿತ್ತು ಕುಚ್​​..ಕುಚ್​​..! ಆ ಶಿಕ್ಷಕಿ ಸತ್ತಿದ್ದೇಗೆ? ಕೊಂದಿದ್ದು ಯಾರು..?
23:42ಕೊಡಗಿನ ಬೆಡಗಿ ರಂಜಿತಾ ಪ್ರೀತಿಗೆ 2 ತಿಂಗಳಷ್ಟೇ ವ್ಯಾಲಿಡಿಟಿ; ಬೆಂಗಳೂರು ಬಾಡಿಗೆ ಮನೆಯಲ್ಲಿ ಲವ್ವರ್ ಕೈಯಲ್ಲೇ ಮರ್ಡರ್!
24:33ಪರ ಪುರುಷನ ಸಹವಾಸಕ್ಕೆ ಪತಿ ಪರಮೇಶಿಯನ್ನೇ ಪರಲೋಕಕ್ಕೆ ಕಳಿಸಿದ ಪತ್ನಿ! ಹೆಣ ಹೊರತೆಗೆದಾಗ ಸತ್ಯವೂ ಹೊರಬಿತ್ತು!