Nov 16, 2023, 11:08 AM IST
ಸಿಎಂ ಪುತ್ರ ಯತೀಂದ್ರ ಮಾತಾಡಿದ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋ ಕೇಳಿದ್ರೆ ಮೈಸೂರಿನಲ್ಲಿ(Mysore) ಯತೀಂದ್ರ ದರ್ಬಾರ್ ನಡೆಯುತ್ತಿದೆಯಾ ಎಂಬ ಪ್ರಶ್ನೆ ಕಾಡುತ್ತದೆ. ಈ ವಿಡಿಯೋದಲ್ಲಿ ಯತೀಂದ್ರ(Yatindra) ತಾವು ನೀಡಿದ ಲಿಸ್ಟ್ ಬಗ್ಗೆ ಮಾತನಾಡಿದ್ದಾರೆ. ಜನರೇ ಎದುರೇ ತಾವು ನೀಡಿದ ಲಿಸ್ಟ್(List) ಬಗ್ಗೆ ಚರ್ಚೆ ನಡೆಸಿದ್ದು, ‘ಅಪ್ಪ ಹೇಳಿ’ ಎಂದು ಮಾತನ್ನು ಶುರು ಮಾಡಿದ್ದಾರೆ. ಆ ಮಹದೇವ್‌ಗೆ ಫೋನ್ ಕೊಡುವಂತೆ ಯತೀಂದ್ರ ಹೇಳಿದ್ದಾರೆ. ನಾನು ಕೊಟ್ಟಿದ್ದು ಬಿಟ್ಟು ಬೇರೆ ಯಾವುದು? ಎಂದು ವಿಡಿಯೋದಲ್ಲಿ(videos) ಮಾತನಾಡಿದ್ದಾರೆ. ವರುಣ ಕ್ಷೇತ್ರದಲ್ಲಿ ಡಾ.ಯತೀಂದ್ರ ಜನ ಸಂಪರ್ಕ ಸಭೆ ನಡೆಸುತ್ತಿದ್ದರು. ಮೈಸೂರಿನ ಕೀಳನಪುರ ಗ್ರಾಮದ ಬಳಿ ಜನ ಸಂಪರ್ಕ ಸಭೆ ನಡೆಯುತ್ತಿದ್ದು, ಈ ವೇಳೆ ಹೀಗೆ ಮಾತನಾಡಿದ್ದಾರೆ. ನಾನು ನೀಡಿದ ಲಿಸ್ಟ್‌ನ್ನು ಮಾಡಿಸುವಂತೆ ಖಡಕ್ ಸೂಚನೆಯನ್ನು ನೀಡಿದ್ದಾರೆ. ಈ ವಿಡಿಯೋದಿಂದ ಕಾಂಗ್ರೆಸ್ ಸರ್ಕಾರದ ವಸೂಲಿ ದಂಧೆ ಹಾದಿಬೀದಿಗೆ ಬಂದಂತೆ ಆಗಿದೆ. ಸಿಎಂ ಸಚಿವಾಲಯವನ್ನು ಸುಲಿಗೆ ಅಡ್ಡಾ ಮಾಡಿಕೊಂಡಿದ್ದಾರೆ. ಯತೀಂದ್ರ ವಿಡಿಯೋಗಿಂತ ದೊಡ್ಡ ಪುರಾವೆ ಬೇಕಿಲ್ಲ? ಸಾರ್ವಜನಿಕ ಸಭೆಯಲ್ಲೇ ವರ್ಗಾವಣೆ ದಂಧೆಯನ್ನು ಸಿಎಂ ಪುತ್ರ ನಡೆಸಿದ್ದಾರೆ ಎನ್ನಲಾಗ್ತಿದೆ. ಟ್ವೀಟ್ ಮೂಲಕ ಮಾಜಿ ಸಿಎಂ ಕುಮಾರಸ್ವಾಮಿ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾಸಿಗಾಗಿ ವರ್ಗಾವಣೆ ದಂಧೆ ಅವ್ಯಾಹತವಾಗಿ ನಡೀತಿದೆ. ವರ್ಗಾವಣೆ ದಂಧೆಗೆ ಈ ವಿಡಿಯೋ ತುಣುಕೇ ಸಾಕ್ಷಿ. ಸರ್ಕಾರ ವಸೂಲಿ ಬಿಸ್ನೆಸ್ ಹಾದಿಬೀದಿಗೆ ಬಂದಿದೆ. ಕಾಸಿಗಾಗಿ ಹುದ್ದೆ ದಂಧೆ ಎಗ್ಗಿಲ್ಲದೆ ನಡೆದಿದೆ ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ವೀಕ್ಷಿಸಿ: ಕರ್ನಾಟಕ ಸೋಲಿನಿಂದ ಪಾಠ ಕಲಿಯಿತಾ ಬಿಜೆಪಿ ಹೈಕಮಾಂಡ್..? ಮಧ್ಯಪ್ರದೇಶದಲ್ಲಿ ಸೀನಿಯರ್ಸ್ ಮೊರೆ ಹೋದ ಕಮಲ !