ಸ್ಯಾಂಡಲ್ ವುಡ್ ಗಣ್ಯರ ಜೊತೆ ಪ್ರಧಾನಿ ನರೇಂದ್ರ ಮೋದಿ ಮಾತುಕತೆ ನಡೆಸಿದ್ದು, ಅನೇಕ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.
ರಾಜ ಭವನದಲ್ಲಿ ತಂಗಿದ್ದ ಪ್ರಧಾನಿ ನರೇಂದ್ರ ಮೋದಿ ವಿವಿಧ ಕ್ಷೇತ್ರದ ಗಣ್ಯರ ಜೊತೆ ಸಂವಾದ ನಡೆಸಿದ್ರು. ಮೋದಿ ಜೊತೆ ಸಂವಾದದಲ್ಲಿ ಕನ್ನಡ ಸಿನಿಮಾ ರಂಗದ ಬೆಳವಣಿಗೆ ಬಗ್ಗೆ ಮಾತನಾಡಲಾಗಿದ್ದು, ಒಂದೊಳ್ಳೆಯ ಫಿಲ್ಮ್ ಸಿಟಿ ನಿರ್ಮಾಣ ಆಗಬೇಕು ಎಂದು ಚಿತ್ರರಂಗದವರು ಬೇಡಿಕೆ ಇಟ್ಟಿದ್ದಾರೆ. ವಿದೇಶದಂತೆ ಭಾರತೀಯ ಚಿತ್ರರಂಗಕ್ಕೂ ಸೌಲಭ್ಯ ಒದಗಿಸಿ ಐಟಿ ಇಂಡಸ್ಟ್ರಿಯಂತೆ ಕನ್ನಡ ಚಿತ್ರರಂಗವನ್ನೂ ಅಭಿವೃದ್ದಿ ಪಡಿಸಿ, ಕನ್ನಡ ಚಿತ್ರರಂಗಕ್ಕೆ ಉತ್ತಮ ಸೌಲಭ್ಯ ಒದಗಿಸಿ ಎಂದು ವಿಜಯ್ ಕಿರಗಂದೂರು ಮನವಿ ಮಾಡಿದ್ದಾರೆ.
Follow The Leader: ನನಗೆ ಪ್ರೋತ್ಸಾಹ ಕೊಟ್ಟವರು ದೇಶದ ಬಡವರು: ಕುಮಾರಸ್ವಾಮಿ