ಕುಡಿಯಲು ನೀರಿಲ್ಲದೇ ರೋಗಿಗಳ ಪರದಾಟ..ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳ ಗೋಳು ಕೇಳೋರು ಯಾರು?

Jun 26, 2024, 11:15 AM IST

ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ (Yadgir District Hospital) ರೋಗಿಗಳು ಕುಡಿಯಲು ನೀರಿಲ್ಲದೇ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲಾಸ್ಪತ್ರೆಯಲ್ಲಿರುವ ಕುಡಿಯುವ ನೀರಿನ (Drinking water) ಘಟಕ ಬಂದ್ ಆಗಿದೆ. ಯಾದಗಿರಿಯ ಹೊರವಲಯದಲ್ಲಿರುವ ನೂತನ ಯಿಮ್ಸ್ ಆಸ್ಪತ್ರೆಯಲ್ಲಿ ನೀರಿಲ್ಲದೆ ಪರದಾಡುತ್ತಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ 2 ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಕಳೆದ 1 ವಾರದಿಂದ ಎರಡು ನೀರಿನ ಘಟಕಗಳು ಬಂದ್ ಆಗಿವೆ. ಆಸ್ಪತ್ರೆಗೆ ಬರುವ ರೋಗಿಗಳಿಗೆ ಅಂಗಡಿಯ‌ ನೀರೇ ಗತಿಯಾಗಿದ್ದು, ರೋಗಿಗಳಿಗೆ(Patients) ಔಷಧಿ ಮರೆತ್ರೂ ನೀರು ಖರೀದಿಸುವ ಅನಿವಾರ್ಯ ಎದುರಾಗಿದೆ. ವೈದ್ಯಾಧಿಕಾರಿಗಳು, ಆಡಳಿತ ಮಂಡಳಿ ನಿರ್ಲಕ್ಷ್ಯಕ್ಕೆ ರೋಗಿಗಳು ಹೈರಾಣಾಗಿದ್ದಾರೆ. ಬಾಯಾರಿಕೆ ತಣಿಸಲು ಒಂದು ಹನಿ ನೀರು ಕೂಡ ಸಿಗುತ್ತಿಲ್ಲ. ಹೊರಗೆ ಅಂಗಡಿಗಳಲ್ಲಿ ನೀರು ತಗೊಂಡು ನೀರು ಕುಡಿದೀವಿ. ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳ ಪರಿಸ್ಥತಿ ಕೆಟ್ಟ ದುರಸ್ಥಿತಿಯಾಗಿದೆ. ಕಲುಷಿತ ನೀರು ಸೇವನೆ ಮಾಡಿದ್ರೆ ಹಲವು ರೋಗಗಳು ಬರ್ತವೆ. ಇಂತಹ ಸಂದರ್ಭದಲ್ಲಿ ಅಧಿಕಾರಿಗಳು ಶುದ್ಧ ಕುಡಿಯುವ ಕೊಡ್ತಿಲ್ಲ. ಇದರಿಂದ ಮತ್ತಷ್ಟು ರೋಗಿಷ್ಠರಾಗಿ ಇರಬೇಕಾಗುತ್ತೆ ಎಂದು ಜನರು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ವೀಕ್ಷಿಸಿ:  ಸಿಲಿಕಾನ್‌ ಸಿಟಿಯಲ್ಲಿ ಸಿನಿಮಾ ಸ್ಟೈಲ್‌ನಲ್ಲಿ ಜ್ಯುವೆಲರಿ ಶಾಪ್ ದರೋಡೆ: ಶಾಪ್‌ ಟಾರ್ಗೆಟ್‌ ಮಾಡಿ ಮೂವರಿಂದ ಕೃತ್ಯ