* ಕೋವಿಡ್ ನಿಯಮಾವಳಿಗಳ ಅನ್ವಯ ಹಬ್ಬ ಅಚರಣೆಗೆ ಅನುಮತಿ
* ಗಣೇಶ ಚತುರ್ಥಿ ಧಾರ್ಮಿಕವಾಗಿ ಆಚರಿಸುವ ದೊಡ್ಡ ಹಬ್ಬ
* ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಗಣೇಶ ಹಬ್ಬ ಆಚರಿಸುತ್ತೇವೆ
ಬೆಳಗಾವಿ(ಆ.30): ಸಾರ್ವಜನಿಕ ಗಣೇಶೋತ್ಸವಕ್ಕೆ ಅನುಮತಿ ನೀಡಲಾಗುವುದು ಅಂತ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ. ಕೋವಿಡ್ ನಿಯಮಾವಳಿಗಳ ಅನ್ವಯ ಹಬ್ಬ ಅಚರಣೆಗೆ ಅನುಮತಿ ನೀಡುವ ಬಗ್ಗೆ ಸಚಿವರು ಸುಳಿವು ನೀಡಿದ್ದಾರೆ. ಗಣೇಶ ಚತುರ್ಥಿಯನ್ನ ಧಾರ್ಮಿಕವಾಗಿ ಆಚರಿಸುವ ದೊಡ್ಡ ಹಬ್ಬವಾಗಿದೆ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಗಣೇಶ ಹಬ್ಬವನ್ನ ಆಚರಿಸುತ್ತೇವೆ. ಕೋವಿಡ್ ರೂಲ್ಸ್ ಪಾಲಿಸಿ ಗಣೇಶೋತ್ಸವಕ್ಕೆ ಅನುಮತಿ ಕೊಡುತ್ತೇವೆ ಅಂತ ಹೇಳಿದ್ದಾರೆ.