ವನ್ಯ ಜೀವಿ ಸಂರಕ್ಷಣಾ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ಸುವರ್ಣ ನ್ಯೂಸ್ - ಕನ್ನಡ ಪ್ರಭದ ಹೆಮ್ಮೆಯ ಅಭಿಯಾನ.
ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭವತಿಯಿಂದ ಆಯೋಜಿಸಲಾಗಿರುವ ವನ್ಯಜೀವಿ ಸಂರಕ್ಷಣಾ ಅಭಿಯಾನ ಉತ್ತರಕನ್ನಡ ಜಿಲ್ಲೆಯ ಜೊಯಿಡಾದ ಅರಣ್ಯವಾಸಿಗಳ ಪಾಲಿಗೆ ಆಶಾಕಿರಣವಾಗಿ ಮೂಡಿಬಂದಿದೆ. ಅಭಿಯಾನದ ರಾಯಭಾರಿ ಪ್ರಸಿದ್ಧ ನಟ ರಿಷಭ್ ಶೆಟ್ಟಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕನ್ನಡಪ್ರಭ ತಂಡ, ಅರಣ್ಯ ಇಲಾಖೆ ಅಧಿಕಾರಿಗಳು ಕಟ್ಟ ಕಾಡಿನೊಳಗೆ ಹೆಜ್ಜೆ ಹಾಕಿ ವನ್ಯಜೀವಿಗಳು , ಅರಣ್ಯದ ಕುರಿತು ಅರಣ್ಯವಾಸಿಗಳಲ್ಲಿ ಜಾಗೃತಿ ಮೂಡಿಸಿದ್ದಾರೆ. ಜೊಯಿಡಾದಿಂದ ಸ್ಥಳಾಂತರಗೊಂಡ ಊರಾದ ಸುಲಾವಳಿಗೆ ಭೇಟಿ ನೀಡಿದ ನಟ ರಿಷಬ್ ಶೆಟ್ಟಿ ಹಾಗೂ ತಂಡ ತೆರವುಗೊಂಡ ಮನೆಯ ಅವಶೇಷಗಳು, ಪಾಳು ಬಿದ್ದ ಕೃಷಿಭೂಮಿಯನ್ನು ವೀಕ್ಷಿಸಿದ್ರು.
ಇದನ್ನೂ ವೀಕ್ಷಿಸಿ: ಕ್ಷಣಮಾತ್ರದಲ್ಲಿ ಕೋಟಿ ಮೌಲ್ಯದ ಸೇತುವೆ ಪುಡಿ-ಪುಡಿ: ಬಿದ್ದಿದ್ದಲ್ಲ ನಾವೇ ಬೀಳಿಸಿದ್ದು ಎಂದ ಬಿಹಾರ್ ಡಿಸಿಎಂ..!