ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಹಾಡಹಗಲೇ ಹರಿದಿದ್ದ ನೆತ್ತರು, ಕಂಡ ಕಂಡಲ್ಲಿ ದಾಳಿ, ಹಿಂಸಾಚಾರ ಆಕ್ರೋಶ ತಾಂಡವ
ಶಿವಮೊಗ್ಗ(ಆ.17): ದೇಶದ ಜನತೆ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿದ್ದರೆ ಶಿವಮೊಗ್ಗದಲ್ಲಿ ಮಾತ್ರ ಹಾಡಹಗಲೇ ಧಗ ಧಗ ಹೊತ್ತಿ ಉರಿದಿತ್ತು. ಹೌದು, ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಹಾಡಹಗಲೇ ಮತ್ತೆ ನೆತ್ತರು ಹರಿದಿತ್ತು. ಕಂಡ ಕಂಡಲ್ಲಿ ದಾಳಿ, ಹಿಂಸಾಚಾರ ಆಕ್ರೋಶ ತಾಂಡವವಾಡುತ್ತಿದ್ದರೆ ಇತ್ತ ಪೊಲೀಸರು ಲಾಠಿ ಬೀಸುತ್ತಿದ್ದರು. ಬೀದಿಗಿಳಿದು ದಾಂಧಲೆ ನಡೆಸಿದವರನ್ನ ಅಟ್ಟಾಡಿಸಿಕೊಂಡು ಪೊಲೀಸರು ಹೊಡೆದಿದ್ದರು. ನಗರದ AA ಸರ್ಕಲ್‌ನಲ್ಲಿ ಆಗಿದ್ದೇನು?, ಹಣೆ ಮೇಲೆ ನಾಮ ನೋಡಿ ನಡೆದಿತ್ತಾ ಅಟ್ಯಾಕ್?, ಸ್ನೇಹಿತ ಬಿಚ್ಚಿಟ್ಟ ರಹಸ್ಯದ ಇಂಚಿಂಚು ಮಾಹಿತಿ ಈ ಸುದ್ದಿಯಲ್ಲಿದೆ.