Dec 5, 2023, 9:35 AM IST
ಸಮಾಜ ಕಲ್ಯಾಣ ಇಲಾಖೆ ಕಚೇರಿ ಮುಂಭಾಗ ಧರಣಿ ನಡೆಸ್ತಿರೋ ವಿದ್ಯಾರ್ಥಿಗಳ(Students) ದೃಶ್ಯ ಕಂಡು ಬಂದಿದ್ದು ಚಿತ್ರದುರ್ಗದಲ್ಲಿ(Chitradurga). ಕಳೆದ ಎರಡ್ಮೂರು ತಿಂಗಳಿಂದ ನಗರದ ಹೊರಭಾಗದಲ್ಲಿರುವ ಬಾಲಕರ ಹಾಸ್ಟೆಲ್ನಲ್ಲಿ(Boys Hostel) ನೀರಿನ ಅಭಾವ ತಲೆದೋರಿದೆ. ವಿದ್ಯಾರ್ಥಿಗಳು ಶೌಚಾಲಯಕ್ಕೆ ಹೋಗೋಕು ನೀರಿಲ್ಲದೆ ಪರದಾಡುವ ಸ್ಥಿತಿ ಇದೆ. ಎಷ್ಟೇ ಬಾರಿ ಅಧಿಕಾರಿಗಳ ಗಮನಕ್ಕೆ ತಂದ್ರೂ ಪ್ರಯೋಜನವಾಗಿಲ್ಲ. ನೀರಿನ ಸಮಸ್ಯೆ(Water problem) ಜೊತೆಗೆ ಮೂಲಭೂತ ಸೌಕರ್ಯಗಳ ತೊಂದರೆ ವಿದ್ಯಾರ್ಥಿಗಳನ್ನ ರೊಚ್ಚಿಗೆಬ್ಬಿಸಿದೆ. ಹೀಗಾಗಿ ಸಮಾಜ ಕಲ್ಯಾಣ ಇಲಾಖೆ ಕಚೇರಿ ಮುಂದೆ ವಿದ್ಯಾರ್ಥಿಗಳು ಪ್ರತಿಭಟಿಸಿದ್ರು. ಸಮಸ್ಯೆ ಬಗೆಹರಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡೋದಾಗಿ ಎಚ್ಚರಿಸಿದ್ರು. ಇನ್ನೊಂದು ಆಘಾತಕಾರಿ ವಿಷ್ಯ ಏನಂದ್ರೆ, ವಿದ್ಯಾರ್ಥಿಗಳಿಗೆ ಅಡುಗೆ ಮಾಡಲು ಕೆರೆ ನೀರು ಸಪ್ಲೈ ಮಾಡ್ತಿದ್ದಾರಂತೆ. ಹೀಗಾಗಿ ವಿದ್ಯಾರ್ಥಿಗಳು ಧರಣಿಗೆ ಇಳಿದಿದ್ದಾರೆ. ವಿದ್ಯಾರ್ಥಿಗಳ ಪ್ರತಿಭಟನೆ ಬಳಿಕ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಒಂದು ಬೋರ್ವೆಲ್ನಲ್ಲಿ ನೀರು ಅಲ್ಪ ಪ್ರಮಾಣದಲ್ಲಿ ಬರ್ತಿದೆ. ಹೆಚ್ಚಿನ ನೀರಿನ ಅಗತ್ಯವಿದೆ ಎಂದು ತಿಳಿದು ಬಂದಿದೆ. ಈ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತಂದು ಇನ್ನೊಂದು ಬೋರ್ವೆಲ್ ಕೊರೆಸುವ ಪ್ರಯತ್ನ ಮಾಡಲಾಗುವುದು ಅನ್ನೋ ಭರವಸೆ ನೀಡಿದ್ರು. ಕಾನೂನು ಕಾಲೇಜಿನ ಹಾಸ್ಟೆಲ್ ಸಮಸ್ಯೆ ಇಂದು ಮೊನ್ನೆಯದಲ್ಲ. ಕಳೆದ ಬಾರಿಯೂ ವಾರ್ಡನ್ಗೆ ತರಾಟೆ ತೆಗೆದುಕೊಂಡು ಸಮಸ್ಯೆ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೂ ತಂದಿದ್ದರು. ಇಷ್ಟಾದ್ರೂ ಅಧಿಕಾರಿಗಳು ಮಾತ್ರ ಎಚ್ಚೆತ್ತುಕೊಂಡಿಲ್ಲ. ಇನ್ನಾದ್ರೂ ವಿದ್ಯಾರ್ಥಿಗಳಿಗೆ ಸಮಸ್ಯೆ ಆಗದಂತೆ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.
ಇದನ್ನೂ ವೀಕ್ಷಿಸಿ: Today Horoscope: ಇಂದು ಈ ರಾಶಿಯವರಿಗೆ ಉದರ ಸಮಸ್ಯೆ ಕಾಡಲಿದ್ದು, ಲಲಿತಾ ಪ್ರಾರ್ಥನೆ ಮಾಡಿ