Sep 7, 2023, 10:32 AM IST
ದೇವರು ವರ ಕೊಟ್ರು ಪೂಜಾರಿ ವರ ಕೊಡಲಿಲ್ಲ ಅನ್ನೋ ಗಾದೆ ಗುಮ್ಮಟ ನಗರಿ ರೈತರಿಗೆ(Farmer) ಅನ್ವಯಿಸುವಂತಿದೆ. ಯಾಕಂದ್ರೆ ಸರಿಯಾಗಿ ಮಳೆಯಿಲ್ಲದೆ ಬರ ಪರಸ್ಥಿತಿ ಎದುರಿಸುತ್ತಿದ್ದ ವಿಜಯಪುರ(Vijayapura) ಜಿಲ್ಲೆಯ ರೈತರಿಗೆ ಆಲಮಟ್ಟಿ ಡ್ಯಾಂನಿಂದ(Allamatti Dam) ಕೃಷಿ ಉದ್ದೇಶಕ್ಕಾಗಿ ಕೆನಾಲ್‌ನಿಂದ ನೀರು ಬಿಡುಗಡೆ ಮಾಡಲಾಗಿದೆ. ಆದ್ರೆ ಡ್ಯಾಂನಿಂದ ಕಾಲುವೆಗೆ ನೀರು ಬಿಟ್ಟರು ರೈತರ ಜಮೀನುಗಳಿಗೆ ಸಮರ್ಪಕವಾಗಿ ಮುಟ್ಟುತ್ತಿಲ್ಲ. ಹಾಗಿದ್ದರೆ ಕಾಲುವೆಯಲ್ಲಿ ಬಿಟ್ಟ ನೀರು(Water) ಎಲ್ಲಿಗೆ ಹೋಗುತ್ತೆ ಎನ್ನುವ ಪ್ರಶ್ನೆ ಏಳುತ್ತೆ. ಅದಕ್ಕೆ ಉತ್ತರ ಕಾಲುವೆಯಲ್ಲಿ ಹೂಳು ತುಂಬಿಕೊಂಡಿದ್ದು. ಕೆನಾಲ್ ಸ್ವಚ್ಛಗೊಳಿಸದ ಕಾರಣ ಕೆಲವೆಡೆ ಹೂಳು ತುಂಬಿಕೊಂಡಿದೆ. ವಿಜಯಪುರದ ಕೋಲಾರ ತಾಲೂಕಿನ ರೋಣಿಹಾಳ ಗ್ರಾಮದ ರೈತರ ಜಮೀನಿಗೆ ಬಿಡುವ ಕಾಲುವೆಗಳು ಸಂಪೂರ್ಣ ಮುಚ್ಚಿ ಹೋಗಿವೆ. ಇದರಿಂದ ರೈತರ ಜಮೀನುಗಳಿಗೆ ನೀರು ತಲುಪುತ್ತಿಲ್ಲ. ಪ್ರತಿ ವರ್ಷ ಆಲಮಟ್ಟಿ ಡ್ಯಾಂ ಭರ್ತಿಯಾದ ಬಳಿಕ ಡ್ಯಾಂನಿಂದ ರೈತರ ಜಮೀನುಗಳಿಗೆ ಅನುಕೂಲವಾಗಲು ಕಾಲುವೆಗಳಿಗೆ ನೀರು ಬಿಡಲಾಗುತ್ತೆ. ಕಾಲುವೆಗಳು ಖಾಲಿ ಇರೋವಾಗ ಅಂದ್ರೆ ಬೇಸಿಗೆ ಸಮಯದಲ್ಲಿ ಕಾಲುವೆಗಳನ್ನ ಸರಿಯಾದ ರೀತಿಯಲ್ಲಿ ಕ್ಲೀನಿಂಗ್ ಮಾಡಿಕೊಳ್ಳಬೇಕಾಗಿತ್ತು. ಆದ್ರೆ, ಕಾಲುವೆ ಹೂಳೆತ್ತಲು ಅನುದಾನ ಬಿಡುಗಡೆಯಾದ್ರೂ, ಕೆಲಸ ಮಾಡದೇ ಹಣ ಪಡೆದಿದ್ದಾರೆ ಎಂದು ಸಂಸದ ರಮೇಶ ಜಿಗಜಿಣಗಿ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ವಿರುದ್ಧ ಆರೋಪಿಸಿದ್ದಾರೆ.
ಇದನ್ನೂ ವೀಕ್ಷಿಸಿ: ಅವನ ಕೊಲೆಯ ಹಿಂದಿತ್ತು ತ್ರಿಕೋನ ಪ್ರೇಮ ಕಹಾನಿ ! ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು ಡೆಡ್ಲಿ ಮರ್ಡರ್ !