76ನೇ ವಯಸ್ಸು ಮಸ್ತ್ ಮಸ್ತ್ ಡ್ಯಾನ್ಸ್..! ನಾಡದೊರೆಯ ಜನಪದ ನೃತ್ಯಕ್ಕೆ ನೋಡುಗರು ಕ್ಲೀನ್‌ಬೌಲ್ಡ್..!

76ನೇ ವಯಸ್ಸು ಮಸ್ತ್ ಮಸ್ತ್ ಡ್ಯಾನ್ಸ್..! ನಾಡದೊರೆಯ ಜನಪದ ನೃತ್ಯಕ್ಕೆ ನೋಡುಗರು ಕ್ಲೀನ್‌ಬೌಲ್ಡ್..!

Published : Nov 04, 2023, 03:15 PM IST

ಸಿದ್ದರಾಮೇಶ್ವರ ಜಾತ್ರೆಯಲ್ಲಿ ಸಿದ್ದು ವೀರಕುಣಿತ ವರ್ಲ್ಡ್ ಫೇಮಸ್..!
74ನೇ ವಯಸ್ಸಲ್ಲಿ 40 ನಿಮಿಷಗಳ ಕಾಲ ಕುಣಿದಿದ್ದ ಸಿದ್ದರಾಮಯ್ಯ..!
ವೀರಕುಣಿತ ಅಂದ್ರೆ ಸಿದ್ದು ವಯಸ್ಸು ಮರೆತು ಕುಣಿಯೋದ್ಯಾಕೆ ..?


ಮುಖ್ಯಮಂತ್ರಿ ಸಿದ್ದರಾಮಯ್ಯನವರ ವೀರಕುಣಿತದ ಪರಿಯನ್ನೊಮ್ಮೆ ನೋಡಿ. ಹೊಸಪೇಟೆಯ ವಿಶ್ವವಿಖ್ಯಾತ ಹಂಪಿಯಲ್ಲಿ ಗುರುವಾರ ನಡೆದ ಹಂಪಿ ಉತ್ಸವ ವೇದಿಕೆಯಲ್ಲಿ ನಾಡದೊರೆ ಸಿದ್ದರಾಮಯ್ಯ, ಮತ್ತೊಮ್ಮೆ ವೀರ ಮಕ್ಕಳ ಕುಣಿತಕ್ಕೆ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಸಿದ್ದರಾಮಯ್ಯ(Siddaramaiah) ಅಂದ್ರೆ ಮಾತಿನ ಮಲ್ಲ, ಅವ್ರು ಹೊಡೆಯೋ ಒಂದೊಂದು ಡೈಲಾಗ್ ಕೂಡ ವರ್ಲ್ಡ್ ಫೇಮಸ್. ಮಾಸ್ ಲೀಡರ್ ಸಿದ್ದರಾಮಯ್ಯ, ಒಳ್ಳೆ ಡ್ಯಾನ್ಸ್ ಕೂಡ ಮಾಡ್ತಾರೆ. ಡ್ಯಾನ್ಸ್ ಅಂದ್ರೆ ಸಿನಿಮಾ ಡ್ಯಾನ್ಸ್ ಅಲ್ಲ. ಪಕ್ಕಾ ಹಳ್ಳಿ ಸೊಗಡಿನ ವೀರ ಮಕ್ಕಳ ಕುಣಿತ(Veera makkala kunitha). ಈ ವೀರಮಕ್ಕಳ ಕುಣಿತ ಅನ್ನೋದು ಮೈಸೂರು ಭಾಗದ ಒಂದು ಜನಪದ ನೃತ್ಯ. ಸಿದ್ದರಾಮಯ್ಯನವರ ಹುಟ್ಟೂರು ಸಿದ್ದರಾಮನ ಹುಂಡಿಯಲ್ಲಂತೂ ಇದು ತುಂಬಾನೇ ಫೇಮಸ್. ಅದೇ ನೃತ್ಯವನ್ನು ತಮ್ಮ 76ನೇ ವಯಸ್ಸಲ್ಲಿ ಹಂಪಿ ಉತ್ಸವ ವೇದಿಕೆಯಲ್ಲಿ ಮಾಡಿದ ಸಿದ್ದರಾಮಯ್ಯನವರು, ರಾಜ್ಯದ ಜನರಿಂದ ಮತ್ತೊಮ್ಮೆ ಶಹಬ್ಬಾಷ್ ಅನ್ನಿಸಿಕೊಂಡಿದ್ದಾರೆ. ಹಂಪಿ ಉತ್ಸವ(Hampi Festival) ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬರ್ತಾರೆ ಅನ್ನೋ ಕಾರಣದಿಂದ್ಲೇ ಮೈಸೂರಿನ ಸಿದ್ದರಾಮ ಹುಂಡಿಯ ವೀರಕುಣಿತದ ಕಲಾವಿದರನ್ನು ಕರೆಸಲಾಗಿತ್ತು. ಸಿದ್ದರಾಮ ಹುಂಡಿ ಸಿದ್ದರಾಮಯ್ಯನವರ ಹುಟ್ಟೂರು. ಹುಟ್ಟೂರಿಂದ ಬಂದಿದ್ದ ಕಲಾವಿದರು ನೃತ್ಯ ಶುರು ಮಾಡ್ತಿದ್ದಂತೆ, "ನೀವು ಒಂದೆರಡು ಹೆಜ್ಜೆ ಹಾಕಿ ಸರ್" ಅಂತ ಸಿದ್ದರಾಮಯ್ಯನವರಿಗೆ ಕಾರ್ಯಕ್ರಮದ ನಿರೂಪಕಿ ಮನವಿ ಮಾಡ್ತಾರೆ. ಸಿದ್ದರಾಮಯ್ಯನವರ ವಯಸ್ಸೀಗ 76. ಆದ್ರೆ ವೀರಕುಣಿತ ಅಂತ ಬಂದ್ರೆ ಅವ್ರಿಗೆ ವಯಸ್ಸು ನೆನಪಾಗೋದೇ ಇಲ್ಲ. ಇಳಿವಯಸ್ಸಲ್ಲಿ ಯುವಕರೇ ನಾಚುವಂತೆ ಕೈಗಳನ್ನು ತಿರುಗಿಸುತ್ತಾ, ಹೆಜ್ಜೆ ಹಾಕುತ್ತಾ ನೃತ್ಯ ಮಾಡ್ತಾರೆ. ಹಂಪಿ ಉತ್ಸವದಲ್ಲಿ ಸಿದ್ದರಾಮಯ್ಯ 5 ನಿಮಿಷಗಳ ಕಾಲ ವೀರಮಕ್ಕಳ ಕುಣಿತವಾಡಿದ್ರು. ನಾಡದೊರೆ ಸಿದ್ದರಾಮಯ್ಯ ಕುಣಿಯುತ್ತಿದ್ದಂತೆ ಸಚಿವರಾದ ಜಮೀರ್ ಅಹ್ಮದ್ ಖಾನ್, ಭೈರತಿ ಸುರೇಶ್, ಶಿವರಾಜ್ ತಂಗಡಗಿ, ಶಾಸಕ ಕಂಪ್ಲಿ ಗಣೇಶ್, ಕೆಎಂಎಫ್  ಅಧ್ಯಕ್ಷ ಭೀಮಾನಾಯ್ಕ ಚಪ್ಪಾಳೆ ಶಿಳ್ಳೆ ಹೊಡೆದು ಸಂಭ್ರಮಿಸಿದ್ರು.

ಇದನ್ನೂ ವೀಕ್ಷಿಸಿ:  ಇಸ್ರೇಲ್ ಮೇಲೆ 3 ಉಗ್ರ ಪಡೆಗಳ ರಕ್ಕಸ ದಾಳಿ! ಹೇಗೆ ಸಾಗಿದೆ ಗೊತ್ತಾ ನೆಲದಾಳದ ಕದನ..?

24:39Bengaluru ಶರ್ಮಿಳಾ ಸಾವಿಗೆ ಬಿಗ್ ಟ್ವಿಸ್ಟ್: ಒಂದೂ ಸುಳಿವು ಬಿಡದೇ ಕೊಂ*ದವನು ಅದೊಂದು ತಪ್ಪು ಮಾಡಿದ್ದ!
24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ
25:38ರೌಡಿ ಶೀಟರ್‌ಗೆ ಹೆಂಡತಿ ಕಂಡರೆ 'ಫಿಯರ್': ಮಚ್ಚು ಹಿಡಿದು ಗಂಡನನ್ನೇ ಚೇಸ್ ಮಾಡಿದ ಕಿರಾತಕಿ ಹೆಂಡತಿ!
25:26Suvarna Special: ಏನದು 20 ವರ್ಷಗಳ ಸೇಡಿನ ಕಥೆ? ನಾರಾ ರೆಡ್ಡಿ, ಗಾಲಿ ರೆಡ್ಡಿ..ದಶಕಗಳ ದ್ವೇಷಚರಿತ್ರೆ!
25:27ಕಳ್ಳರ ಗೋಲ್ಡ್ ಬ್ಯುಸಿನೆಸ್​​: ಕಳ್ಳರು ಸಿಗಲ್ಲ, ಸಿಕ್ಕಿದ್ರೂ ಮಾಲು ಇರೊಲ್ಲ! 5 ರಾಬರಿ ಕೇಸ್, ಪೊಲೀಸರು ತನಿಖೆ ಠುಸ್!
20:21ಚಿತ್ರದುರ್ಗ ಬಸ್ ಅಗ್ನಿ ದುರಂತ: ಚಲಿಸುವ ಚಿತಾಗಾರ 'ಸ್ಲೀಪರ್ ಬಸ್‌'ಗಳ ಕರಾಳ ಸತ್ಯ ಬಯಲು
24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
19:51ತಾನೇ ಕಟ್ಟಿದ ಕೋಟೆಯಿಂದ ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು! ಹೇಗಿತ್ತು ಗೊತ್ತಾ ಹಿಂದೂ ಹೋರಾಟಗಾರನ ರಣ ಕರಾಳ ಚರಿತ್ರೆ?
21:55Suvarna Special: ಲಕ್ಷ್ಮೀ ಲೆಕ್ಕ..! ಎಲ್ಲಿ ಹೋಯ್ತು ಎರಡು ತಿಂಗಳ ಗೃಹಲಕ್ಷ್ಮೀ ದುಡ್ಡು..?
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
Read more