Jun 30, 2024, 4:42 PM IST
ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ (Valmiki Development Corporation scam) ಗ್ಯಾರಂಟಿ ಸರ್ಕಾರಕ್ಕೆ ತಲೆನೋವಾಗಿದೆ. ಈ ನಿಗಮದ ಹಣವನ್ನು ದರೋಡೆ ಮಾಡಿರುವ ಬರೋಬ್ಬರಿ 11 ಜನರನ್ನು ಎಸ್‌ಐಟಿ (SIT) ಟೀಂ ಬಂಧಿಸಿದೆ. ಅಲ್ಲದೇ ಕದ್ದಿರುವ ಹಣವನ್ನು ಅಕೌಂಟ್ ಫ್ರೀಜ್ ಮಾಡಿ ವಶಕ್ಕೆ ಪಡೆದಿದೆ. ಇನ್ನೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ (BJP) ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದೆ. ಚಂದ್ರಶೇಖರ್ ಆತ್ಮಹತ್ಯೆಗೂ (Chandrashekhar suicide) ಮುನ್ನ ಮೂರು ಜನರ ಹೆಸರನ್ನು ಬರೆದು, ಬಹುಕೋಟಿ ಹಗರಣ ನಡೆದಿದೆ ಎಂದು ಡೆತ್‌ನೋಟ್‌ನಲ್ಲಿ ಬರೆದಿದ್ದರು. 10 ಕೋಟಿ ರೂಪಾಯಿಯನ್ನು ಎಸ್‌ಐಟಿ ವಶಕ್ಕೆ ಪಡೆದಿದೆ. ಅಲ್ಲದೇ ಎಸ್‌ಐಟಿ ಈ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದೆ.
ಇದನ್ನೂ ವೀಕ್ಷಿಸಿ: Tumakuru Crime News: ಕೆರೆಯೊಂದರಲ್ಲಿ ಪತ್ತೆಯಾಯ್ತು ಜೋಡಿ ಶವ..! ವಯಸ್ಕನ ಜೊತೆ ಯುವತಿ ಸಾವಿಗೆ ಶರಣಾಗಿದ್ಯಾಕೆ..?