ಸುವರ್ಣ ಸಾಧಕರು ಪ್ರಶಸ್ತಿಗೆ ಭಾಜನರಾದ ಸಕಲೇಶಪುರದ ರಾಘವೇಂದ್ರ ಪ್ರಸಾದ್‌

Jan 27, 2024, 10:41 AM IST

ಪ್ರತಿವರ್ಷ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಮತ್ತು ಕನ್ನಡಪ್ರಭ ವತಿಯಿಂದ ಸಾಮಾಜಕ್ಕೆ ಕೊಡುಗೆ ನೀಡಿದ ಹಲವು ಸಾಧಕರನ್ನು ಗೌರವಿಸಲಾಗುತ್ತದೆ. ಅದರಂತೆ ಈ ಬಾರಿಯೂ ಸಮಾಜಕ್ಕೆ ಕೊಡುಗೆ ನೀಡಿದ ಹಲವರನ್ನು ಗುರುತಿಸುವ ಕಾರ್ಯ ನಡೆದಿದೆ. ಸಕಲೇಶಪುರದಲ್ಲಿ ಕಾಡು ಮನೆ ವೆಜ್‌ ರೆಸಾರ್ಟ್‌ ಹಾಗೂ ಪ್ರಕೃತಿ ಚಿಕಿತ್ಸಾಲಯದ ಮೂಲಕ ಪ್ರಸಿದ್ಧಿಯಾಗಿರುವ ರಾಘವೇಂದ್ರ ಪ್ರಸಾದ್‌ ಅವರಿಗೆ ಈ ಬಾರಿ ಸುವರ್ಣ ಸಾಧಕರು ಪ್ರಶಸ್ತಿ ನೀಡಲಾಗಿದೆ. ಇಲ್ಲಿ ಆಯುರ್ವೇದಿಕ್‌ ವೆಲ್‌ನೆಸ್‌ ಸೆಂಟರ್‌ ಇದೆ. ಇಲ್ಲಿ ಆರ್ಟಿಫಿಶಿಯಲ್‌ ಮೆಡಿಸನ್‌ ಬಳಸಲಾಗುವುದಿಲ್ಲ. ನೇಚರ್ ಥೀಮ್‌ನಲ್ಲಿ ರೆಸಾರ್ಟ್‌ ಮಾಡಲಾಗಿದೆ. ಇಲ್ಲಿಗೆ ಬರುವವರು ಸಿಟಿಯ ಜೀವನ ಶೈಲಿಯನ್ನ ಸಂಪೂರ್ಣವಾಗಿ ಮರೆಯುತ್ತಾರೆ ಎಂದು ರಾಘವೇಂದ್ರ ಪ್ರಸಾದ್‌ ಹೇಳುತ್ತಾರೆ.

ಇದನ್ನೂ ವೀಕ್ಷಿಸಿ:  ಸುವರ್ಣ ಸಾಧಕರು ಪ್ರಶಸ್ತಿಗೆ ಭಾಜನರಾದ ಬೆಳಗಾವಿ ರವಿ ಪೂಜಾರಿ