ತಾಲೂಕು ಬದಲಾವಣೆಗೆ ಗಾಬರಿಗೊಂಡ ಜನ: ಸಚಿವ ಸಂತೋಷ್ ಲಾಡ್ ಭೇಟಿ ಮಾಡಿ ಮನವಿ ಸಲ್ಲಿಕೆ

ತಾಲೂಕು ಬದಲಾವಣೆಗೆ ಗಾಬರಿಗೊಂಡ ಜನ: ಸಚಿವ ಸಂತೋಷ್ ಲಾಡ್ ಭೇಟಿ ಮಾಡಿ ಮನವಿ ಸಲ್ಲಿಕೆ

Published : Nov 16, 2023, 09:51 AM IST

ಆ ಗ್ರಾಮದ ಜನರೆಲ್ಲಾ ಭಯಗೊಂಡಿದ್ರು.ನಮ್ಮ ಗ್ರಾಮ ಬೇರೆ ತಾಲೂಕಿಗೆ ಹೋಗುತ್ತೆ ಅಂತಾ ಗಾಬರಿ ಆಗಿದ್ರು.ಎದ್ನೋ ಬಿದ್ನೋ ಅಂತಾ ಸಂತೋಷ್ ಲಾಡ್‌ಗೆ ಗ್ರಾಮಸ್ಥರು ಮನವಿ ಸಲ್ಲಿಸಿದ್ರು.ಆದ್ರೆ ಈಗ ಮಿನಿಸ್ಟರ್ ಹೇಳಿದ ಮಾತು ಜನರಿಗೆ ಸಂತಸ ಮೂಡಿಸಿದ್ದು ನಿರಾಳರಾಗಿದ್ದಾರೆ.
 

ಗುಂಪು ಗುಂಪಾಗಿ ಬಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರ ಮುಂದೆ ತಮ್ಮ ಅಳಲು ತೋಡಿಕೊಳ್ಳುತ್ತಿರುವ ಗ್ರಾಮಸ್ಥರು..ಮತ್ತೊಂದೆಡೆ ನಿಮ್ಮ ಸಮಸ್ಯೆ ಬಗೆಹರಿಸುತ್ತೇನೆ ಅಂತಾ ಭರವಸೆ ಕೊಟ್ಟ ಕಾರ್ಮಿಕ ಸಚಿವ ಸಂತೋಷ್ ಲಾಡ್.. ಇದೆಲ್ಲಾ ಧಾರವಾಡದ(Dharwad) ಮಿನಿಸ್ಟರ್ ಕಚೇರಿಯಲ್ಲಿ ಕಾಡಂಚಿನಲ್ಲಿರೋ ಕಲಕೇರಿ(Kalakeri) ಗ್ರಾಮದವರು ಮನವಿ ಸಲ್ಲಿಸುತ್ತಿರುವ ದೃಶ್ಯ.ಕಲಕೇರಿ ಗ್ರಾಮ ಪಂಚಾಯ್ತಿಗೆ ಕಲಕೇರಿ, ಹುಣಸಿಕುಮರಿ, ಲಾಳಗಟ್ಟಿ ಮತ್ತು ದೇವಗಿರಿ ಗ್ರಾಮಗಳು ಬರುತ್ತವೆ. ಧಾರವಾಡ ತಾಲೂಕಿನಲ್ಲಿರುವ ಈ ಗ್ರಾಮಗಳನ್ನ ಸರ್ಕಾರ ಅಳ್ನಾವರ(Alnavar) ತಾಲೂಕಿಗೆ ಸೇರಿಸಿ ಬಿಡುತ್ತೆ ಎಂಬ ವಂದದಿ ಹಬ್ಬಿತ್ತು..ಇದ್ರಿಂದ ಗಾಬರಿಗೊಂಡ ಗ್ರಾಮಸ್ಥರು ನಮ್ಮನ್ನ ಅಳ್ನಾ ತಾಲೂಕಿಗೆ ಸೇರಿಸಬೇಡಿ..ಅಲ್ಲಿಗೆ ಓಡಾಡೋಕೆ ಕಾಡು ಸುತ್ತಿ ಬರಬೇಕು ಅಂತಾ ಸಚಿವ ಸಂತೋಷ್ ಲಾಡ್(Santosh Lad) ಮುಂದೆ ಅಳಲು ತೋಡಿಕೊಂಡ್ರು.ಕಲಕೇರಿ ಗ್ರಾಮ ಪಂಚಾಯ್ತಿ ಧಾರವಾಡ ತಾಲೂಕಿಗೆ ಬಂದ್ರು.ವಿಧಾನಸಭಾ ಕ್ಷೇತ್ರ ಮಾತ್ರ ಕಲಘಟಗಿಗೆ ಬರುತ್ತೆ. ಕಲಘಟಗಿ ಕ್ಷೇತ್ರದ ವ್ಯಾಪ್ತಿಯಲ್ಲಿಯೇ ಅಳ್ನಾವರ ಇದೆ. ಹೀಗಾಗಿ ಅಳ್ನಾವರಕ್ಕೆ ಸೇರಿಸಬೇಕು ಅಂತಾ ಯಾರೋ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ ಅನ್ನೋದು ಈ ಗ್ರಾಮಸ್ಥರು ಹೇಳುತ್ತಿದ್ದಾರೆ. ಇನ್ನು ಈ ಹಿಂದೆ ಸರ್ಕಾರ ಹೊಸ ತಾಲೂಕುಗಳ ರಚನೆ ಮಾಡಿದಾಗ, ಧಾರವಾಡ ತಾಲೂಕಿನಿಂದ ಅಳ್ನಾವರ ಬೇರ್ಪಟ್ಟು ಪ್ರತ್ಯೇಕ ತಾಲೂಕು ಆಗಿತ್ತು.ಆಗ ಮೊದಲ ಪ್ರಸ್ತಾವದಲ್ಲಿ ಕಲಕೇರಿ ಗ್ರಾಪಂ ಸೇರಿಸಲಾಗಿತ್ತು. ಬಳಿಕ ಜನರಿಗೆ ಓಡಾಡೋಕೆ ಕಷ್ಟ ಆಗುತ್ತೆ ಎಂದು ಕೈ ಬಿಡಲಾಗಿತ್ತು. ಆದ್ರೆ ಈಗ ವಂದತಿ ಹಬ್ಬಿದ್ದು ಇದಕ್ಕೆ ಸಂತೋಷ್ ಲಾಡ್ ಸ್ಪಷ್ಟನೆ ಕೊಟ್ಟಿದ್ದಾರೆ. ನಮ್ಮ ಮುಂದೆ ಯಾವುದೇ ಪ್ರಸ್ತಾಪವಿಲ್ಲ ಅಂತಾ ಭರವಸೆ ನೀಡಿದ್ರು.ಯಾರೋ ಹಬ್ಬಿಸಿದ ವದಂತಿಗೆ 4 ಗ್ರಾಮದ ಜನರು ಆತಂಕದಲ್ಲಿದ್ರು. ಸದ್ಯ ಸಚಿವರು ಯಾವುದೇ ಪ್ರಸ್ತಾಪವಿಲ್ಲ ಅಂತಾ ಗ್ರಾಮಸ್ಥರಿಗೆ  ಹೇಳಿದ್ದು, ಜನರು ನಿಟ್ಟುಸಿರು ಬಿಟ್ಟಿದ್ದಾರೆ. 

ಇದನ್ನೂ ವೀಕ್ಷಿಸಿ:  ಸ್ಯಾಂಡಲ್‌ವುಡ್‌ನಲ್ಲಿ ಬಿರುಗಾಳಿ ಎಬ್ಬಿಸಿದ ಕೈವಾ ಟೀಸರ್! ಧನ್ವೀರ್-ಮೇಘಾಶೆಟ್ಟಿ ಕಾಂಬಿನೇಷನ್‌ನಲ್ಲಿ ಹೊಸ ಮ್ಯಾಜಿಕ್!

24:39Bengaluru ಶರ್ಮಿಳಾ ಸಾವಿಗೆ ಬಿಗ್ ಟ್ವಿಸ್ಟ್: ಒಂದೂ ಸುಳಿವು ಬಿಡದೇ ಕೊಂ*ದವನು ಅದೊಂದು ತಪ್ಪು ಮಾಡಿದ್ದ!
24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ
25:38ರೌಡಿ ಶೀಟರ್‌ಗೆ ಹೆಂಡತಿ ಕಂಡರೆ 'ಫಿಯರ್': ಮಚ್ಚು ಹಿಡಿದು ಗಂಡನನ್ನೇ ಚೇಸ್ ಮಾಡಿದ ಕಿರಾತಕಿ ಹೆಂಡತಿ!
25:26Suvarna Special: ಏನದು 20 ವರ್ಷಗಳ ಸೇಡಿನ ಕಥೆ? ನಾರಾ ರೆಡ್ಡಿ, ಗಾಲಿ ರೆಡ್ಡಿ..ದಶಕಗಳ ದ್ವೇಷಚರಿತ್ರೆ!
25:27ಕಳ್ಳರ ಗೋಲ್ಡ್ ಬ್ಯುಸಿನೆಸ್​​: ಕಳ್ಳರು ಸಿಗಲ್ಲ, ಸಿಕ್ಕಿದ್ರೂ ಮಾಲು ಇರೊಲ್ಲ! 5 ರಾಬರಿ ಕೇಸ್, ಪೊಲೀಸರು ತನಿಖೆ ಠುಸ್!
20:21ಚಿತ್ರದುರ್ಗ ಬಸ್ ಅಗ್ನಿ ದುರಂತ: ಚಲಿಸುವ ಚಿತಾಗಾರ 'ಸ್ಲೀಪರ್ ಬಸ್‌'ಗಳ ಕರಾಳ ಸತ್ಯ ಬಯಲು
24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
19:51ತಾನೇ ಕಟ್ಟಿದ ಕೋಟೆಯಿಂದ ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು! ಹೇಗಿತ್ತು ಗೊತ್ತಾ ಹಿಂದೂ ಹೋರಾಟಗಾರನ ರಣ ಕರಾಳ ಚರಿತ್ರೆ?
21:55Suvarna Special: ಲಕ್ಷ್ಮೀ ಲೆಕ್ಕ..! ಎಲ್ಲಿ ಹೋಯ್ತು ಎರಡು ತಿಂಗಳ ಗೃಹಲಕ್ಷ್ಮೀ ದುಡ್ಡು..?
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
Read more