ಇದು ಕಿಕ್ ಏರುವ ಸುದ್ದಿ: ಮದ್ಯಪ್ರಿಯರ ಸಂಘ ನೋಂದಣಿ

Dec 25, 2022, 5:46 PM IST

ಹಾಸನ: ಹಾಸನದಲ್ಲಿ ಮದ್ಯಪ್ರಿಯರ ಸಂಘವನ್ನು ಹುಟ್ಟು ಹಾಕಲಾಗಿದೆ. ಈ ಸಂಘ ಕೇವಲ ಲೆಕ್ಕಕ್ಕೆ ಹುಟ್ಟಿಲ್ಲ. ಜೊತೆಯಲ್ಲಿ ವಿವಿಧ ಬೇಡಿಕೆಗಳನ್ನು ಇಟ್ಟುಕೊಂಡು ಜನ್ಮತಾಳಿದೆ.  ಸರ್ಕಾರ ಮದ್ಯ ಪ್ರಿಯರ ಹಿತರಕ್ಷಣೆ ದೃಷ್ಟಿಯಿಂದ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ನಗರದಲ್ಲಿಂದು ಕರ್ನಾಟಕ ಮದ್ಯಪಾನ ಪ್ರಿಯರ ಸಂಘ ಒತ್ತಾಯಿಸುತ್ತಿದೆ. ಮದ್ಯಪಾನ ಪ್ರಿಯರ ಸಂಘದ ಅಧ್ಯಕ್ಷ ವೆಂಕಟೇಶ್ ಮಾತನಾಡಿ, ಮದ್ಯಪಾನ ಪ್ರಿಯರಿಗೆ ಇನ್ಶುರೆನ್ಸ್ ಸೌಲಭ್ಯ ಒದಗಿಸಿ, ಕುಟುಂಬಕ್ಕೆ ಆರ್ಥಿಕ ಸೌಲಭ್ಯ ಒದಗಿಸಬೇಕು, ಹಾಗೂ ಮದ್ಯಪ್ರಿಯರ ಮಕ್ಕಳಿಗೆ ಹಾಸ್ಟೆಲ್'ನಲ್ಲಿ ಶೇ.10 ರಷ್ಟು ಮೀಸಲಾತಿ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಮದ್ಯ ಪ್ರಿಯರಿಗೆ ನಿಗಮ ಮಂಡಳಿ ರಚಿಸಿ ಪ್ರತಿ ವರ್ಷ ಮದ್ಯ ಪ್ರಿಯರು ಮರಣ ಹೊಂದಿದರೆ ಅವರ ಕುಟುಂಬಕ್ಕೆ ಒಂದು ಲಕ್ಷ ಪರಿಹಾರ ಹಣ ನೀಡಬೇಕು. ಪ್ರತಿ ಹೋಬಳಿ ಮಟ್ಟದಲ್ಲಿ ಮೂರು ತಿಂಗಳಿಗೊಮ್ಮೆ ಮದ್ಯ ಪ್ರಿಯರ ಆರೋಗ್ಯ ತಪಾಸಣೆ ಮಾಡಬೇಕು ಎಂದು ಆಗ್ರಹಿಸಿದ ಅವರು, ಮದ್ಯದ ಅಂಗಡಿಗಳಲ್ಲಿ ಸ್ವಚ್ಛತೆ ಕಾಪಾಡಿ ಶುದ್ಧ ಕುಡಿಯುವ ನೀರು ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ. ಅತೀ ಶೀಘ್ರದಲ್ಲಿ ಮಧ್ಯ ಪ್ರಿಯರ ಸಂಘಕ್ಕೆ ಸದಸ್ಯತ್ವ ನೋಂದಣಿ ಉದ್ಘಾಟನೆ ಕಾರ್ಯಕ್ರಮ ಮಾಡಲಾಗುತ್ತಿದ್ದು, ಕಾರ್ಯಕ್ರಮವನ್ನು ಅಬಕಾರಿ ಸಚಿವ ಕೆ. ಗೋಪಾಲಯ್ಯ ಉದ್ಘಾಟಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Chitradurga : ಕುರಿ ಕಾಯುವ ಹುಡುಗಿಯಿಂದ ಮಲೇಷ್ಯಾದಲ್ಲಿ ಚಿನ್ನದ ಬೇಟೆ ...