Jul 5, 2024, 4:36 PM IST
ಮಹರ್ಷಿ ವಾಲ್ಮೀಕಿ ನಿಗಮದ 187 ಕೋಟಿಯ ಬ್ರಹ್ಮಾಂಡ ಭ್ರಷ್ಟಾಚಾರ ಪ್ರಕರಣದ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಮತ್ತೊಂದು ಹಗರಣದ ಉರುಳು ಸುತ್ತಿಕೊಂಡಿದೆ. ಅದೇ ಮುಡಾ( Mysore Muda scam) ಮಾಯಾಜಾಲ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯನವರ(Siddaramaiah) ತವರು ಜಿಲ್ಲೆಯಲ್ಲೇ ಭುಗಿಲೆದ್ದು ನಿಂತಿರೋ ಹಗರಣ. ಸಿದ್ದರಾಮಯ್ಯನವರ ಪತ್ನಿ ಪಾರ್ವತಿಯವರ(Parvathi) ಹೆಸರು ಈ ಪ್ರಕರಣದಲ್ಲಿ ಥಳಕು ಹಾಕಿಕೊಂಡಿದ್ದು, ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ. ಪ್ರತಿಪಕ್ಷ ಬಿಜೆಪಿ ಹೀಗೆ ನೇರವಾಗಿ ಸಿದ್ದರಾಮಯ್ಯನವರ ವಿರುದ್ಧವೇ ಆರೋಪ ಮಾಡಲು ಕಾರಣವಿದೆ. ಸಿದ್ದರಾಮಯ್ಯನವರ ಪತ್ನಿ ಪಾರ್ವತಿಯವರ ಹೆಸರು ಈ ಹಗರಣದಲ್ಲಿ ಕೇಳಿ ಬಂದಿರೋದೇ ಇದಕ್ಕೆ ಕಾರಣ. ಸಿದ್ದರಾಮಯ್ಯನವರ ಪತ್ನಿ ಪಾರ್ವತಿ. ಇವ್ರು ಸಾರ್ವಜನಿಕವಾಗಿ ಕಾಣಿಸಿಕೊಳ್ಳೋದು ತುಂಬಾ ಕಡಿಮೆ. ಸಿದ್ದರಾಮಯ್ಯನವರು ರಾಜ್ಯದ ಮುಖ್ಯಮಂತ್ರಿಯಾಗಿ ಎರಡು ಬಾರಿ ಪ್ರಮಾಣವಚನ ಸ್ವೀಕರಿಸಿದಾಗ್ಲೂ ಆ ಸಮಾರಂಭದಿಂದಿಂದ ದೂರವೇ ಉಳಿದಿದ್ದವರು ಪತ್ನಿ ಪಾರ್ವತಿ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿಯ ಹೆಸರಲ್ಲಿದ್ದ 3.16 ಎಕರೆ ಜಮೀನು. ಅದು ಡಿನೋಟಿಫೈ ಆಗಿದ್ದ ಜಾಗ. ಅಲ್ಲಿ ಬಡಾವಣೆ ನಿರ್ಮಿಸಲು ಜಮೀನನ್ನು ಮುಡಾ ಅಭಿವೃದ್ಧಿ ಪಡಿಸಿತ್ತು. ಇದು ಗೊತ್ತಾಗುತ್ತಿದ್ದಂತೆ, ಬದಲಿ ಜಮೀನು ನೀಡುವಂತೆ ಮುಡಾಗೆ ಪತ್ರ ಬರೀತಾರೆ ಸಿಎಂ ಪತ್ನಿ ಪಾರ್ವತಿ.
ಇದನ್ನೂ ವೀಕ್ಷಿಸಿ: ನಾವೇ ಮಗನ ಮಣ್ಣು ಮಾಡುವಂತ ಸ್ಥಿತಿ ಬಂತು, ಆರೋಪಿಗಳಿಗೆ ತಕ್ಕ ಶಿಕ್ಷೆ ಆಗಲಿ: ರೇಣುಕಾಸ್ವಾಮಿ ತಾಯಿ