Asianet Suvarna News Asianet Suvarna News

ನಾವೇ ಮಗನ ಮಣ್ಣು ಮಾಡುವಂತ ಸ್ಥಿತಿ ಬಂತು, ಆರೋಪಿಗಳಿಗೆ ತಕ್ಕ ಶಿಕ್ಷೆ ಆಗಲಿ: ರೇಣುಕಾಸ್ವಾಮಿ ತಾಯಿ

ದರ್ಶನ್ ಭೇಟಿಗೆ ಅವರ ತಾಯಿ, ಕುಟುಂಬಸ್ಥರು ಹೋಗ್ತಿದ್ದಾರೆ. ನಾವು ನಮ್ಮ ಮಗನ ಭೇಟಿ ಮಾಡಲು ಸಾಧ್ಯವೇ ಎಂದು ರೇಣುಕಾಸ್ವಾಮಿ ತಾಯಿ  ರತ್ನಪ್ರಭಾ ಕಣ್ಣೀರು ಹಾಕಿದರು.

ದರ್ಶನ್ ಗ್ಯಾಂಗ್‌ನಿಂದ ಹತ್ಯೆಯಾದ ರೇಣುಕಾಸ್ವಾಮಿ ತಾಯಿ ರತ್ನಪ್ರಭಾ(Ratnaprabha) ಮಾತನಾಡಿದ್ದು, ದರ್ಶನ್‌ಗೆ (Darshan) ನ್ಯಾಯಾಂಗ ಬಂಧನ ವಿಸ್ತರಣೆ ಆಗಿದೆ. ಆರೋಪಿಗಳಿಗೆ ತಕ್ಕ ಶಿಕ್ಷೆ ಆಗಲಿ ಎಂಬುದು ನಮ್ಮ ಆಗ್ರಹವಾಗಿದೆ. ದರ್ಶನ್ ಭೇಟಿಗೆ ಅವರ ತಾಯಿ, ಕುಟುಂಬಸ್ಥರು ಹೋಗ್ತಿದ್ದಾರೆ. ನಾವು ನಮ್ಮ ಮಗನ ಭೇಟಿ ಮಾಡಲು ಸಾಧ್ಯವೇ ಎಂದು ಕಣ್ಣೀರು ಹಾಕಿದರು. ನಾವೇ ಮಗನ ಮಣ್ಣು ಮಾಡುವಂತ ಸ್ಥಿತಿ ಬಂತು. ನಾವು ಸಾಯೋವರೆಗೆ ನಮ್ಮ ಮಗನ ನೋಡಲಾಗದು ಎಂದು ರೇಣುಕಾಸ್ವಾಮಿ(Renukaswamy murder case) ತಾಯಿ ರತ್ನಪ್ರಭಾ ಹೇಳಿದ್ದಾರೆ. ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್ ಕಳಿಸಿದ್ದ ಆರೋಪ ವಿಚಾರವಾಗಿ ಮಾತನಾಡಿದ ಅವರು, ಮೊದಲೇ ಹೇಳಿದ್ದರೆ ರೇಣುಕಾಸ್ವಾಮಿಗೆ ಶಿಕ್ಷೆ ಕೊಡಿಸಬಹುದಿತ್ತು. ಈಗ ಯಾಕೆ ಹೇಳುತ್ತಿದ್ದಾರೆ ಎಂದು ರೇಣುಕಾಸ್ವಾಮಿ ತಾಯಿ ಅಳಲು ತೋಡಿಕೊಂಡರು.

ಇದನ್ನೂ ವೀಕ್ಷಿಸಿ:  ಹಾಸನದಲ್ಲಿ ದಿನದಿನಕ್ಕೂ ಹೆಚ್ಚಾಗ್ತಿದೆ ಡೆಂಘೀ ಆರ್ಭಟ: 6 ಮಂದಿ ಸಾವು, 6 ಮಕ್ಕಳಿಗೆ ಐಸಿಯುನಲ್ಲಿ ಚಿಕಿತ್ಸೆ

Video Top Stories