ಬಿಜೆಪಿ, ಜೆಡಿಎಸ್‌ನವರು ಪ್ರತಿಭಟನೆ ಮಾಡಬೇಕಿರೋದು ರಾಜ್ಯದ ವಿರುದ್ಧ ಅಲ್ಲ ಕೇಂದ್ರದ ವಿರುದ್ಧ: ಸಿಎಂ

Jun 17, 2024, 4:21 PM IST

ಪ್ರಧಾನಿ ಮೋದಿ ತೈಲ ದರ ಇಳಿಕೆ ಮಾಡ್ತೇವೆ ಎಂದಿದ್ರು, ಆದರೆ ಇಳಿಕೆ ಮಾಡಿಲ್ಲ. 72 ರೂ. ಇದ್ದ ಪೆಟ್ರೋಲ್​ 104 ರೂ. ಮಾಡಿದ್ದಾರೆ. 58 ರೂ. ಇದ್ದ ಡೀಸೆಲ್​ ಬೆಲೆ 98 ರೂ. ಮಾಡಿದ್ದು ಮೋದಿ ಎಂದು ಸಿಎಂ ಸಿದ್ದರಾಮಯ್ಯ(Siddaramaiah) ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಚ್ಚಾ ತೈಲದ ಬೆಲೆ ಈಗ 85.32 ಡಾಲರ್​ ಇದೆ. ಮನಮೋಹನ್​ ಸಿಂಗ್​ ಕಾಲದಲ್ಲಿ ಕಚ್ಚಾ ತೈಲದ ಬೆಲೆ ಕಡಿಮೆ ಇತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾದರೆ. ಸ್ಥಳೀಯವಾಗಿಯೂ ತೈಲ ಬೆಲೆ ಏರಿಕೆಯಾಗುತ್ತೆ ಎಂದು ಸಿಎಂ ಹೇಳಿದರು. ಕಚ್ಚಾತೈಲದ ಬೆಲೆ ಕಡಿಮೆ ಇದ್ರು, ತೈಲ ಬೆಲೆ ಏರಿಸಿದ್ರು. ಬಿಜೆಪಿಯವರು(BJP) ಯಾರ ವಿರುದ್ಧ ಪ್ರತಿಭಟನೆ(Protest) ಮಾಡಬೇಕು? ಮನಮೋಹನ್​ ಸಿಂಗ್ ಕಾಲದಲ್ಲಿ ಗ್ಯಾಸ್​ 410 ರೂ. ಇತ್ತು. ಮೋದಿ ಕಾಲದಲ್ಲಿ ಗ್ಯಾಸ್​ ಬೆಲೆ 805 ರೂ. ಆಗಿದೆ. GSTಯಿಂದ ತೆರಿಗೆ ಹೆಚ್ಚಿಸುವ ಸ್ವಾತಂತ್ರ್ಯ ಕಡಿಮೆ, ಸ್ಟ್ಯಾಂಪ್​ ಡ್ಯೂಟಿ, ಇಂಧನ, ಮೋಟಾರ್​ ಟ್ಯಾಕ್ಸ್​ ಸಂಗ್ರಹಿಸಬಹುದು. ಬಿಜೆಪಿ - ಜೆಡಿಎಸ್(JDS) ಪೆಟ್ರೋಲ್ ಡೀಸೆಲ್ ಬೆಲೆ ಎರಿಕೆ ಮಾಡಿದ್ದಾರೆ ಎಂದು ಪ್ರತಿಭಟನೆ ಮಾಡ್ತಿದ್ದಾರೆ. ಪೆಟ್ರೋಲ್ ಮೇಲೆ 3 ರೂಪಾಯಿ ಡಿಸೇಲ್ 3 ರೂಪಾಯಿ ಜಾಸ್ತಿ(petrol diesel price) ಮಾಡಿದ್ದೇವೆ. ಇವರು ಪ್ರತಿಭಟನೆ ಮಾಡಬೇಕಿರೋದು ರಾಜ್ಯ ಸರ್ಕಾರದ ವಿರುದ್ಧ ಅಲ್ಲ ಕೇಂದ್ರ ಸರ್ಕಾರದ ವಿರುದ್ಧ ಎಂದು ಸಿಎಂ ವಾಗ್ದಾಳಿ ನಡೆಸಿದರು.

ಇದನ್ನೂ ವೀಕ್ಷಿಸಿ:  Renukaswamy Murder Case: ರಾಜು ಎಂಬಾತನ ಬಳಿಯಿದ್ದ ಮೆಗ್ಗಾರ್‌ನಿಂದ ರೇಣುಕಾಸ್ವಾಮಿಗೆ ಶಾಕ್..!