ರಕ್ತದಾನಿಗಳ ಕೊರತೆ, ಬರಿದಾಗುತ್ತಿವೆ ಬ್ಲಡ್ ಬ್ಯಾಂಕ್‌ಗಳು: ತುರ್ತು ಪರಿಸ್ಥಿತಿಯಲ್ಲಿ ಬ್ಲಡ್‌ಗಾಗಿ ರೋಗಿಗಳ ಪರದಾಟ

Nov 30, 2023, 10:17 AM IST

ರಕ್ತದಾನ ಮಾಡುವಂತೆ ಸಂಘ-ಸಂಸ್ಥೆಗಳು, ಆಸ್ಪತ್ರೆಗಳು (Hospitals) ಆಗ್ಗಾಗ್ಗೆ ಅಭಿಯಾನ ನಡೆಸುತ್ತಲೇ ಇರುತ್ತವೆ. ಯಾಕಂದ್ರೆ ಅಪಘಾತಗೊಂಡ ವ್ಯಕ್ತಿ ಅಥವಾ ರಕ್ತಹೀನತೆಯಿಂದ ಬಳಲುತ್ತಿರುವ ರೋಗಿ ಜೀವ ಉಳಿಸಲು ರಕ್ತ ತುರ್ತಾಗಿ ಬೇಕಾಗಿರುತ್ತದೆ. ಆದ್ದರಿಂದಲೇ ಬ್ಲಡ್ ಬ್ಯಾಂಕ್‌ಗಳಲ್ಲಿ(Blood bank) ಹೆಚ್ಚಿನ ಪ್ರಮಾಣದ ರಕ್ತ ಶೇಖರಣೆಗೆ ಕ್ರಮವಹಿಸಲಾಗುತ್ತದೆ. ಆದ್ರೆ ಬಯಲುಸೀಮೆ ಕೋಲಾರದಲ್ಲಿ(Kolar) ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿದೆ. ಬ್ಲಡ್ ಬ್ಯಾಂಕ್ಗಳಲ್ಲಿ ದಿನೇದಿನೆ ರಕ್ತದ ಸಂಗ್ರಹ ಕುಸಿಯುತ್ತಿದ್ದು, ರಕ್ತಕ್ಕಾಗಿ ಆಸ್ಪತ್ರೆಗಳಲ್ಲಿ ರೋಗಿಗಳು ಪರದಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಕೋಲಾರದಲ್ಲಿ ಜಿಲ್ಲಾಸ್ಪತ್ರೆ, ರೆಡ್ ಕ್ರಾಸ್ ಸಂಸ್ಥೆ, ಜಾಲಪ್ಪ ಆಸ್ಪತ್ರೆ ಸೇರಿದಂತೆ ಒಟ್ಟು 4 ಬ್ಲಡ್ ಬ್ಯಾಂಕ್ಗಳಿವೆ. ಆದ್ರೆ ಎಲ್ಲಾ ಬ್ಲಡ್ ಬ್ಯಾಂಕ್ಗಳಲ್ಲೂ ರಕ್ತದ ಕೊರತೆ ಉಂಟಾಗಿದೆ. ಈ ಮೊದಲು ರಾಜಕೀಯ ಕಾರಣಕ್ಕೆ, ಗಣ್ಯರ ಹುಟ್ಟುಹಬ್ಬರ ಆಚರಣೆ ನೆಪದಲ್ಲಿ ರಕ್ತದಾನ ಶಿಬಿರಗಳನ್ನ ಆಯೋಜಿಸಲಾಗ್ತಿತ್ತು. ಆದ್ರೆ ಇತ್ತೀಚಿಗೆ ಬ್ಲಡ್ ಕ್ಯಾಂಪ್ಗಳು ಕಡಿಮೆಯಾಗಿವೆ. ಕೋಲಾರದಲ್ಲಿ ಪ್ರತಿ ತಿಂಗಳು ಕನಿಷ್ಠ 350 ರಿಂದ 400 ಯೂನಿಟ್ ರಕ್ತದ ಅಗತ್ಯವಿದೆ. ಆದ್ರೆ 60 ರಿಂದ 80 ಯೂನಿಟ್ ರಕ್ತದ ಕೊರತೆ ಉಂಟಾಗುತ್ತಿದೆ. ಆರೋಗ್ಯ ಇಲಾಖೆ ಕೂಡ ರಕ್ತದಾನದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ವಿಫಲವಾಗಿದೆ. ಸಂಘ-ಸಂಸ್ಥೆಗಳ ಜೊತೆಗೂಡಿ ವಿಶೇಷ ಕಾರ್ಯಕ್ರಮಗಳ ಮೂಲಕ ರಕ್ತದಾನಕ್ಕೆ ಜನರನ್ನ ಪ್ರೇರೇಪಿಸಬೇಕು.ಇನ್ನಾದ್ರೂ ಆರೋಗ್ಯಾಧಿಕಾರಿಗಳು ಎಚ್ಚೆತ್ತುಕೊಂಡು ಅಗತ್ಯ ಪ್ರಮಾಣದಲ್ಲಿ ರಕ್ತದ ಸಂಗ್ರಹಕ್ಕೆ ಕ್ರಮಕೈಗೊಳ್ಳಬೇಕಿದೆ.

ಇದನ್ನೂ ವೀಕ್ಷಿಸಿ:  ಹುಬ್ಬಳ್ಳಿಯಲ್ಲಿ ಅದ್ಧೂರಿ ಮಕ್ಕಳ ದಿನಾಚರಣೆ: ಸುವರ್ಣನ್ಯೂಸ್, ಕನ್ನಡಪ್ರಭ ಸಹಯೋಗದಲ್ಲಿ ಕಾರ್ಯಕ್ರಮ