ಶತ್ರು ಭೈರವಿ ಯಾಗವನ್ನು ಅಘೋರಿಗಳು ಮಾತ್ರ ಮಾಡೋದಾ? ಡಿಕೆಶಿ ರಾಜಕೀಯ ಶತ್ರುಗಳಿಂದ ನಡೆಯುತ್ತಿದೆಯಾ ಯಾಗ?

ಶತ್ರು ಭೈರವಿ ಯಾಗವನ್ನು ಅಘೋರಿಗಳು ಮಾತ್ರ ಮಾಡೋದಾ? ಡಿಕೆಶಿ ರಾಜಕೀಯ ಶತ್ರುಗಳಿಂದ ನಡೆಯುತ್ತಿದೆಯಾ ಯಾಗ?

Published : Jun 01, 2024, 04:31 PM ISTUpdated : Jun 01, 2024, 04:32 PM IST

ಸಿಎಂ,ಡಿಸಿಎಂ ಸರ್ವನಾಶಕ್ಕೆ ಕೇರಳದಲ್ಲಿ ಶತ್ರು ಭೈರವಿ ಯಾಗ..! 
ಶತ್ರು ಭೈರವಿ ಯಾಗ ಮಾಡಿಸಿದ್ರೆ ಶತ್ರುನಾಶವವಾಗೊದು ಪಕ್ಕಾನಾ? 
ಯಾಗ ಮಾಡಿಸುತ್ತಿರುವವರ ಬಗ್ಗೆ ತನಗೆಲ್ಲ ತಿಳಿದಿದೆ ಎಂದ ಡಿಕೆಶಿ


ರಾಜ್ಯ ರಾಜಕಾರಣದಲ್ಲಿ ಮತ್ತೆ ಮಾಟ-ಮಂತ್ರದ ಭಯಾನಕ ಸುದ್ದಿ ಕೇಳಿ ಬರುತ್ತಿದೆ. ಸಿಎಂ ಸಿದ್ದರಾಮಯ್ಯ(Siddaramaiah)  ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌(DK Shivakumar) ಅವರಿಗೆ ರಾಜಕಂಟಕ ತರುವ ಉದ್ದೇಶದಿಂದ ಕೇರಳದಲ್ಲಿ(Karala) ಶತ್ರು ಭೈರವಿ ಸಂಹಾರ ಯಾಗ(Shatru Bhairavi Yaga)ನಡೆಯುತ್ತಿದೆಯಂತೆ. ಇದಕ್ಕಾಗಿ ಅಘೋರಿಗಳು ಕೇರಳಕ್ಕೆ ಬಂದಿದ್ದಾರಂತೆ. ಡಿಕೆ ಶಿವಕುಮಾರ್ ಕೊಟ್ಟ ಆ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದೆ. ಡಿಕೆಶಿ ಆ ಮಾತು ಹೇಳಿದಾಗಿನಿಂದ ರಾಜ್ಯ ರಾಜಕಾರಣದಲ್ಲಿ ಇಡೇ ದೊಡ್ಡ ಚೆರ್ಚಾ ವಿಷಯವಾಗಿದೆ. ಕೇರಳದಲ್ಲಿ ತಮ್ಮ ಮತ್ತು ಸಿಎಂ ಸಿದ್ದರಾಮಯ್ಯನವರ ಮೇಲೆ ದೊಡ್ಡ ಪ್ರಯೋಗ ನಡೆಯುತ್ತಿದೆ. ಈ ಪ್ರಯೋಗ ನಡೆಯುತ್ತಿರುವುದು ತಮ್ಮ ಶತ್ರುಗಳಿಂದ ಎಂದು ಡಿಕೆಶಿ ದೊಡ್ಡ ಬಾಂಬ್ವೊಂದನ್ನು ಸಿಡಿಸಿದ್ದರು. ಭೈರವಿ ಯಾಗವೆಂದ್ರೆ, ಭೈರವ ಮಂತ್ರವನ್ನು ಬಳಸಿ, ತನ್ನ ವೈರಿ ಅಥವಾ ಶತ್ರುಗಳನ್ನು ಸಂಹಾರ ಮಾಡಲಿ ಎಂಬ ಆಸೆಯಿಂದ ಮಾಡುವ ಯಾಗವನ್ನೇ ಶತ್ರು ಭೈರವಿ ಸಂಹಾರ ಯಾಗವೆಂದು ಹೇಳಲಾಗುತ್ತೆ. ಈ ಯಾಗವನ್ನು ತಮ್ಮ ಶತ್ರು ಸತ್ತು ಹೋಗಲಿ, ಓಡಿ ಹೋಗಲಿ, ನಾಶವಾಗಲಿ, ಧ್ವಂಷವಾಗಲಿ, ಜೊತೆಗಿದ್ದವರೊಟ್ಟಿಗೆ ಬಡಿದಾಡಿಕೊಳ್ಳಲಿ, ಮನೆಯವರಿಂದ ದೂರವಾಗಲಿ, ಕಿತ್ತಾಡಿಕೊಳ್ಳಲಿ ಒಟ್ಟಾರೆ ಹೇಳಬೇಕೆಂದ್ರೆ ತಮ್ಮ ಶತ್ರುವಿನ ಸರ್ವನಾಶಕ್ಕಾಗಿ ಈ ಯಾಗವನ್ನು ಮಾಡಿಸಲಾಗುತ್ತದೆ. ಇದನ್ನೇ ಶತ್ರು ಭೈರವಿ ಸಂಹಾರ ಯಾಗವೆಂದು ಕರೆಯಲಾಗುತ್ತೆ.

ಇದನ್ನೂ ವೀಕ್ಷಿಸಿ:  ಬಿಜೆಪಿ ವಿರುದ್ಧ 40% ಕಮಿಷನ್‌ ಆರೋಪ: ರಾಹುಲ್ ಗಾಂಧಿ ವಿರುದ್ಧ ವಾರಂಟ್ ಹೊರಡಿಸಲಾಗುತ್ತಾ..?

26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
Read more