* ಕೊರೋನಾ ಪಾಸಿಟಿವ್ ಬಂದರೂ ಅಧಿಕಾರಿಗಳಿಗೆ ತಿಳಿಸದೆ ಕಳ್ಳಾಟ
* ಯಾರಿಂದ ಸೋಂಕು ಹರಡುತ್ತಿದೆ ಅಂತ ಅಧಿಕಾರಿಗಳಿಗೆ ಟ್ರ್ಯಾಕ್ ಸಿಗುತ್ತಿಲ್ಲ
* ಅಧಿಕಾರಿಗಳ ತಲೆಬಿಸಿಗೆ ಕಾರಣವಾದ ಸೆಲ್ಫ್ ಕೋವಿಡ್ ಟೆಸ್ಟ್
ಬೆಂಗಳೂರು(ಜ.06): ಸೆಲ್ಫ್ ಕೋವಿಡ್ ಟೆಸ್ಟ್ ಆರೋಗ್ಯ ಇಲಾಖೆಯ ತಲೆ ನೋವಿಗೆ ಕಾರಣವಾಗಿದೆ. ಹೌದು, ಜನರ ಅನುಕೂಲಕ್ಕೆ ಅಂತ ಬಂದಂತಹ ಟೆಸ್ಟ್ ಕಿಟ್ ಇದೀಗ ದುರುಪಯೋಗವಾಗುತ್ತಿದೆ. ಕೊರೋನಾ ಪಾಸಿಟಿವ್ ಬಂದರೂ ಅಧಿಕಾರಿಗಳಿಗೆ ತಿಳಿಸದೆ ಕಳ್ಳಾಟ ಮಾಡುತ್ತಿದ್ದಾರೆ. ಬೆಂಗಳೂರಿನ ಮೆಡಿಕಲ್ ಶಾಪ್‌ಗಳಲ್ಲಿ ಸೆಲ್ಫ್ ಕೋವಿಡ್ ಟೆಸ್ಟ್ ಕಿಟ್ ಸುಲಭವಾಗಿ ಸಿಗುತ್ತಿದೆ. ಸೆಲ್ಫ್ ಟೆಸ್ಟ್ ಮಾಡಿಸಿಕೊಂಡವರು ಪಾಸಿಟಿವ್ ಬಂದರೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡುತ್ತಿಲ್ಲ. ಯಾರಿಂದ ಸೋಂಕು ಹರಡುತ್ತಿದೆ ಅಂತ ಅಧಿಕಾರಿಗಳಿಗೆ ಟ್ರ್ಯಾಕ್ ಸಿಗುತ್ತಿಲ್ಲ. ಇದರಿಂದ ಸೆಲ್ಫ್ ಕೋವಿಡ್ ಟೆಸ್ಟ್ ಅಧಿಕಾರಿಗಳ ತಲೆಬಿಸಿಗೆ ಕಾರಣವಾಗಿದೆ.
Omicron Threat: ಕೊರೋನಾ ಸುಳಿಯಲ್ಲಿ ಕರುನಾಡು: 24 ಗಂಟೆಯಲ್ಲೇ ಸೋಂಕಿತರ ಸಂಖ್ಯೆ ದುಪ್ಪಟ್ಟು..!