ಪಾಠ ಬಿಟ್ಟು ಪ್ರತಿಭಟನೆಗೆ ಇಳಿದ ಶಿಕ್ಷಕರು..! ಮೂರು ತಿಂಗಳು ಸಂಬಳವಿಲ್ಲದೇ ಪರದಾಟ..!

ಪಾಠ ಬಿಟ್ಟು ಪ್ರತಿಭಟನೆಗೆ ಇಳಿದ ಶಿಕ್ಷಕರು..! ಮೂರು ತಿಂಗಳು ಸಂಬಳವಿಲ್ಲದೇ ಪರದಾಟ..!

Published : Nov 17, 2023, 11:20 AM IST

ಬಹುದಿನಗಳಿಂದ ಆ ಶಾಲೆ ಶಿಕ್ಷಕರು ಹಬ್ಬ ಹರಿದಿನಗಳನ್ನು ಮಾಡದೇ, ಮನೆ ಬಾಡಿಗೆಯೂ ಕಟ್ಟಲಾಗದೆ ಪರದಾಟ ನಡೆಸುತ್ತಿದ್ರು.. ಶಾಲಾ ಆಡಳಿತ ಮಂಡಳಿಯ ಬೇಜವಾಬ್ದಾರಿಯಿಂದ ಹೈರಾಣಾಗಿದ್ದ ಶಿಕ್ಷಕರು ಸಿಡಿದೆದ್ರು.

ಮಕ್ಕಳಿಗೆ ಪಾಠ ಮಾಡೋದು ಬಿಟ್ಟು ಪ್ರತಿಭಟನೆಗೆ(Protest) ಕೂತ ಶಿಕ್ಷಕರು. ಕಚೇರಿ ಕೆಲಸ ತ್ಯಜಿಸಿ ಧರಣಿ ಕುಳಿತ ಶಾಲಾ ಸಿಬ್ಬಂದಿ.. ಈ ದೃಶ್ಯ ಕಂಡು ಬಂದಿದ್ದು ಹಾವೇರಿಯಲ್ಲಿ. ಹಾವೇರಿಯ(Haveri) ಲಯನ್ಸ್ ಇಂಗ್ಲಿಷ್‌ ಮೀಡಿಯಂ ಸ್ಕೂಲ್(Lions English Medium School) ಹಾಗೂ ಲಯನ್ಸ್ ಪದವಿಪೂರ್ವ ಕಾಲೇಜಿನ ಸಿಬ್ಬಂದಿಗೆ ಕಳೆದ ಮೂರು ತಿಂಗಳಿಂದ ಸಂಬಳವನ್ನೇ ನೀಡಿಲ್ವಂತೆ. ಹೀಗಾಗಿ ಶಿಕ್ಷಕರು(Teacher) ಹಾಗೂ ಸಿಬ್ಬಂದಿ ತರಗತಿ ಬಹಿಷ್ಕರಿಸಿ ಮೌನ ಪ್ರತಿಭಟನೆಗೆ ಇಳಿದಿದ್ದಾರೆ. ಸುಮಾರು 90 ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿಗೆ ಮೂರು ತಿಂಗಳಿಂದ ಸಂಬಳ ಕೊಟ್ಟಿಲ್ಲ. ದೀಪಾವಳಿ ಹಬ್ಬವನ್ನೂ ಸರಿಯಾಗಿ ಆಚರಿಸೋಕೆ ಆಗಿಲ್ಲ.. ಹಣವಿಲ್ಲದೆ ಕುಟುಂಬ ನಿರ್ವಹಣೆಯೂ ಕಷ್ಟವಾಗುತ್ತಿದೆ.. ಕೂಡಲೇ ಸಂಬಳ ನೀಡಿ ಎಂದು ಕೆಲಸ ಬಿಟ್ಟು ಗಾಂಧಿ ಫೋಟೊ ಇಟ್ಟುಕೊಂಡು ಮೌನ ಪ್ರತಿಭಟನೆ ನಡೆಸುತ್ತಿದ್ದಾರೆ. ಶಿಕ್ಷಣ ಸಂಸ್ಥೆಗೆ ಯಾವುದೇ ರೀತಿ ಹಣಕಾಸಿನ ತೊಂದರೆ ಇಲ್ಲ. ನವೆಂಬರ್ 4ರಂದು ಖಜಾಂಚಿ ಸಹಿ ಮಾಡಿದ್ದರೂ  ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್.ಕೆ.ಮುದಗಲ್ ಸಂಬಳ ಪಾವತಿಗೆ ಸಹಿ ಮಾಡಿಲ್ಲ.. ಸುಖಾ ಸುಮ್ಮನೆ ಸಂಬಳ ನೀಡಲು ಸತಾಯಿಸುತ್ತಿದ್ದಾರೆ ಅನ್ನೋದು ಪ್ರತಿಭಟನಾ ನಿರತರ ಆರೋಪವಾಗಿದೆ. ಶಿಕ್ಷಕರು, ಸಿಬ್ಬಂದಿ ಪ್ರತಿಭಟನೆ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಬಿಇಓ ಮೌನೇಶ್ ಬಡಿಗೇರ್ ಮತ್ತು ಕಾರ್ಮಿಕ ಇಲಾಖೆಯ ಅಧಿಕಾರಿಗಳು ಶಿಕ್ಷಕರ ಜೊತೆಗೆ ಮಾತುಕತೆ ನಡೆಸಿದ್ರು. ಬಳಿಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶಿವಬಸಪ್ಪ ಮುದಗಲ್ ಕರೆಸಿ ಮಾತುಕತೆ ನಡೆಸಿದ್ರು. ಚೇರಮನ್ ಶಾಲೆಯ ಮೈದಾನಕ್ಕೆ ಆಗಮಿಸುತ್ತಿದ್ದಂತೆ ಶಿಕ್ಷಕರು ತರಾಟೆಗೆ ತೆಗೆದುಕೊಂಡರು. ಬಳಿಕ ಸಂಬಳ ಬಿಡುಗಡೆ ಮಾಡೋದಾಗಿ ಚೇರ್ಮನ್ ಭರವಸೆ ನೀಡಿದ್ದಾರೆ.

ಇದನ್ನೂ ವೀಕ್ಷಿಸಿ:  ಶಕ್ತಿ ದೇವತೆ ಹಾಸನಾಂಬೆಗೆ ಭಕ್ತರ ಭರಪೂರ ಕಾಣಿಕೆ: 14 ದಿನದಲ್ಲಿ ಹರಿದುಬಂದ ಆದಾಯ ಎಷ್ಟು ?

25:48ಕ್ರೈಸ್ ಸಂಸ್ಥೆ ಅಧಿಕಾರಿಗಳ ಕರ್ಮಕಾಂಡ ಬಟಾಬಯಲು; ಸುವರ್ಣನ್ಯೂಸ್​ ಕವರ್ ಸ್ಟೋರಿ ತಂಡದ ಮೆಗಾ ಬೇಟೆ
26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
Read more