Jul 1, 2023, 11:51 AM IST
ದಾವಣಗೆರೆ: ಜಿಲ್ಲೆಯಲ್ಲಿ ಬಾಣಂತಿಯರು ಮತ್ತು ಅಂಗನವಾಡಿ ಮಕ್ಕಳಿಗೆ ಕೊಳೆತ ಮೊಟ್ಟೆಗಳನ್ನು ಕೊಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ಕವರ್ ಸ್ಟೋರಿ ತಂಡ ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ಕೊಳೆತ ಮೊಟ್ಟೆಗಳು ಪತ್ತೆಯಾಗಿವೆ. ಅಲ್ಲದೇ ಕನಿಷ್ಠ 50 ಗ್ರಾಂಕ್ಕಿಂತ ಹೆಚ್ಚು ತೂಕವಿರಬೇಕಾದ ಮೊಟ್ಟೆಗಳು 30 ರಿಂದ 35 ಗ್ರಾಂ ಮಾತ್ರ ಇವೆ. ಪೂರೈಕೆದಾರರು ಕೊಳೆತ ಮೊಟ್ಟೆಗಳನ್ನು ವಿತರಣೆ ಮಾಡುತ್ತಿದ್ದಾರೆ. ಇಂತಹ ಮೊಟ್ಟೆಗಳನ್ನೇ ಅಂಗನವಾಡಿ ಸಿಬ್ಬಂದಿ ಗರ್ಭಿಣಿಯರಿಗೆ ನೀಡುತ್ತಿದ್ದಾರೆ. ಸುಮಾರು ಎರಡು ತಿಂಗಳಿನಿಂದ ಇದೇ ರೀತಿ ಮೊಟ್ಟೆಗಳನ್ನು ಕೊಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಇದನ್ನೂ ವೀಕ್ಷಿಸಿ: ಮಲಗಿದ್ದಲ್ಲೇ ಮಲಗಿ ರೋಧಿಸುತ್ತಿರುವ ಕಾಡಾನೆ: ಕ್ಯಾಪ್ಟನ್ ಕಾಂತಿಗೆ ಆಗಿರೋದೇನು ?