ದರ್ಶನ್‌ಗೆ ಮುಳುವಾಗುತ್ತಾ ಮತ್ತೊಂದು ಸಾಕ್ಷಿ? ಶವ ಬಿಸಾಕಿದ ಬಳಿಕ ಸ್ನೇಹಿತನ ಬಳಿ ಕಥೆ ಹೇಳಿದ್ದ ಆರೋಪಿ!

ದರ್ಶನ್‌ಗೆ ಮುಳುವಾಗುತ್ತಾ ಮತ್ತೊಂದು ಸಾಕ್ಷಿ? ಶವ ಬಿಸಾಕಿದ ಬಳಿಕ ಸ್ನೇಹಿತನ ಬಳಿ ಕಥೆ ಹೇಳಿದ್ದ ಆರೋಪಿ!

Published : Jul 21, 2024, 01:01 PM IST

ರೇಣುಕಾಸ್ವಾಮಿ ಕೊಲೆ ಮಾಡಿ ಶವ ಬಿಸಾಕಿದ ನಂತರ ಆರೋಪಿ ರವಿಶಂಕರ್‌ ತನ್ನ ಸ್ನೇಹಿತನಿಗೆ ಈ ಬಗ್ಗೆ ಕಥೆ ಹೇಳಿದ್ದನಂತೆ.
 

ನಟ ದರ್ಶನ್‌ಗೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy murder case ) ಮತ್ತೊಂದು ಸಾಕ್ಷಿ ಮುಳುವಾಗುವ ಸಾಧ್ಯತೆ ಇದೆ. ಕೊಲೆ ಮಾಡಿದ ಬಳಿಕ 8ನೇ ಆರೋಪಿ ರವಿಶಂಕರ್‌ (accused Ravi Shankar) ತನ್ನ ಸ್ನೇಹಿತ ಬಳಿ ಕಥೆ ಹೇಳಿದ್ದನಂತೆ. ರೇಣುಕಾಸ್ವಾಮಿ ಕೊಲೆ ಮಾಡಿ ಶವ ಬಿಸಾಕಿದ ನಂತರ ಸ್ನೇಹಿತನಿಗೆ ಕಥೆ ಹೇಳಿದ್ದನಂತೆ. ಈ ವಿಚಾರವನ್ನ ಪೊಲೀಸರು (Police)ಬಾಯ್ಬಿಡಿಸಿದ್ದಾರೆ. ಅಲ್ಲದೇ ಕತೆ ಕೇಳಿಸಿಕೊಂಡಿದ್ದ ಸ್ನೇಹಿತನನ್ನ ಈಗ ಪೊಲೀಸರು ಸಾಕ್ಷ್ಯ ಮಾಡಿದ್ದಾರೆ. ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನ ಕಿಡ್ನಾಫ್ ಮಾಡಿದ್ದು ಇದೇ ರವಿಶಂಕರ್ ಕಾರಲ್ಲಿ. ಶವ ಬಿಸಾಕಿ ಚಿತ್ರದುರ್ಗಕ್ಕೆ ತೆರಳಿ ನಡೆದಿದ್ದನ್ನೆಲ್ಲ ಸ್ನೇಹಿತನ ಬಳಿ ಹೇಳಿದ್ದನಂತೆ. ಈಗ ಆತನನ್ನು ಪ್ರಮುಖ‌ಸಾಕ್ಷಿಯಾಗಿ ಪೊಲೀಸರು ಮಾಡಿದ್ದಾರೆ. ದರ್ಶನ್‌ಗೆ ಮನೆ ಕೆಲಸದವರ ಕಂಟಕ ಆಯ್ತು ಈಗ ಮ್ಯಾನೇಜರ್ ಕಾಸ್ಟ್ಯೂಮ್‌ ಡಿಸೈನರ್ (Manager Costume Designer) ಕಂಟಕ ಶುರುವಾಗಿದೆ. ದರ್ಶನ್(Darshan) ವಿರುದ್ಧವೇ ಸಾಕ್ಷಿಯಾದ ಮ್ಯಾನೇಜರ್ ಕಾಸ್ಟ್ಯೂಮ್ ಡಿಸೈನರ್, ದರ್ಶನ್ ಪಡೆದುಕೊಂಡಿದ್ದ ಹಣಕ್ಕೆ ಸಂಬಂಧಿಸಿ ಮ್ಯಾನೇಜರ್ ಸಾಕ್ಷಿ ಇದೆ. ಕೃತ್ಯ ಎಸಗಿದ ಬಳಿಕ‌ ಬಟ್ಟೆಗಳನ್ನ ವಿಜಯಲಕ್ಷ್ಮಿ ಮನೆಗೆ ಕಳುಹಿಸಿದ್ದಕ್ಕೆ ಕಾಸ್ಟ್ಯೂಮ್ ಡಿಸೈನರ್ ಸಾಕ್ಷಿ ಇದೆ. ರೇಣುಕಾಸ್ವಾಮಿ ಕೊಲೆ ಬಳಿಕ ಮೋಹನ್ ರಾಜ್ ಹಾಗೂ ಮಿಲನ ಪ್ರಕಾಶ್ ಮೂಲಕ‌ ದರ್ಶನ್‌ ಹಣ ಪಡೆದಿದ್ದರು. ಇದನ್ನ ತನ್ನ ಮ್ಯಾನೇಜರ್ ಮುಖಾಂತರವೇ ಇಬ್ಬರಿಗೂ ದರ್ಶನ್‌ ಸಂಪರ್ಕ ಮಾಡಿದ್ದರು. 

ಇದನ್ನೂ ವೀಕ್ಷಿಸಿ:  ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಸಿಕ್ತು ಮಹತ್ವದ ಸಾಕ್ಷ್ಯ! ದರ್ಶನ್‌ ಗ್ಯಾಂಗ್‌ ಬಚಾವ್‌ ಆಗಲು ಸಾಧ್ಯವೆ ಇಲ್ವಾ?

26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!