
ಮಗ ಕೊಟ್ಟ ಆಘಾತಕ್ಕೆ.. ಅಪ್ಪನಿಗೆ ಹೃದಯಾಘಾತ..!
ಮಗನ ಚಿಂತೆಯಲ್ಲೇ ಚಿತೆ ಏರಿದ ಆರೋಪಿ ರಘು ತಾಯಿ!
ಮಗ ಜೈಲು ಸೇರಿದ್ದಕ್ಕೆ ರಘು ತಾಯಿಗೆ ಆಗಿತ್ತು ಆಘಾತ..!
ಚಿತ್ರದುರ್ಗ ಜಿಲ್ಲೆಯ ದರ್ಶನ್ (Darshan) ಅಭಿಮಾನಿ ಸಂಘದ ಅಧ್ಯಕ್ಷನೂ ಆಗಿದ್ದ. ರೇಣುಕಾಸ್ವಾಮಿಯನ್ನು ಪತ್ತೆ(Renukaswamy murder case) ಹಚ್ಚಿ ಬೆಂಗಳೂರಿಗೆ(Bengaluru) ಕರೆತಂದಿದ್ದು ಇದೇ ರಘು. ಚಿತ್ರದುರ್ಗದ ಕೋಳಿಬುರುಜನಹಟ್ಟಿ ಮನೆಯಲ್ಲಿ ಮಂಜುಳಮ್ಮ ಮೃತಪಟ್ಟಿದ್ದಾರೆ. ಅಂತ್ಯಸಂಸ್ಕಾರಕ್ಕೆ ಪುತ್ರ ರಘುನನ್ನು ಕರೆತರಲು ಕುಟುಂಬಸ್ಥರ ಮನವಿ ಮಾಡಿಕೊಂಡಿದ್ದಾರೆ. ಆದ್ರೆ ಒಂದ್ ಕಡೆ ಆರೋಪಿಗಳ ಮನೆಯಲ್ಲಿ ಸಾವು ನೋವು ಸಂಭವಿಸುತ್ತಿದ್ರೆ, ಆರೋಪಿಗಳ ಮನೆಯವರನ್ನ ಬಲಿ ಕೊಡುತ್ತಿರೋದು ರೇಣುಕಾಸ್ವಾಮಿ ಆತ್ಮನಾ ಅನ್ನೋ ಚರ್ಚೆ ಕೂಡ ಎದ್ದಿದೆ. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ಜೊತೆ ಯಾರೆಲ್ಲಾ ಅಂದರ್ ಆಗಿದ್ದಾರೋ ಅವರಲ್ಲಿ ವಿನಯ್ ಹಾಗೂ ಪ್ರದೋಶ್ ಮತ್ತು ಪವಿತ್ರಾ ಗೌಡನ(Pavitra gowda) ಹೊರತುಪಡಿಸಿದ್ರೆ ಮಿಕ್ಕೆಲ್ಲವರ ಸ್ಥಿತಿ ತುಂಬಾ ಕಷ್ಟದಲ್ಲಿದೆ. ಅವರಿಗೆ ಬೇಲ್ ಕೊಡಿಸೋಕು ಮನೆಯವರಿಂದ ಆಗುತ್ತಿಲ್ಲ. ದರ್ಶನ್ ಜೊತೆ ಸೇರಿಕೊಂಡು ಅಭಿಮಾನಕ್ಕೆ ಮಾಡಬಾರದ್ದ ಕೆಲಸ ಮಾಡಿದ ಮನೆ ಮಕ್ಕಳನ್ನ ಕಳೆದುಕೊಂಡು ಹಲವು ಕುಟುಂಬಗಳು ಬೀದಿ ಪಾಲಾಗಿದೆ. ಈಗ ದರ್ಶನ್ ಅಭಿಮಾನಿ ಸಂಘದ ಜಿಲ್ಲಾಧ್ಯಕ್ಷ ರಘು ತಾಯಿಯನ್ನ ಕಳೆದೊಂಡಿದ್ದಾನೆ.
ಇದನ್ನೂ ವೀಕ್ಷಿಸಿ: ಮಂತ್ರಾಲಯ ಪಾದಯಾತ್ರಿಗಳ ಮತಾಂತರ ಯತ್ನ? ಠಾಣೆಯಲ್ಲಿ ಪ್ರಕರಣ ದಾಖಲು, ಓರ್ವನ ಬಂಧನ..ಮತ್ತೊಬ್ಬ ನಾಪತ್ತೆ