Renukaswamy Murder Case: ಮನುಷ್ಯ ರೂಪದ ರಾಕ್ಷಸರ ಅಟ್ಟಹಾಸಕ್ಕೆ ಜೀವ ಬಲಿ ! ದರ್ಶನ್ ಕೋಪ..ಕ್ರೌರ್ಯಕ್ಕೆ ಕಾರಣವೇನು ಗೊತ್ತಾ..?

Jun 23, 2024, 9:17 AM IST

ಸಿನಿಮಾಗಳ ಮೂಲಕ ಹೆಸರು ಮಾಡಿ ಸುದ್ದಿಯಾಗಿದ್ದ ನಟ ದರ್ಶನ್(Darshan)ಇಂದು ಕೊಲೆ ಕೇಸ್‌ನಲ್ಲಿ ಹೆಚ್ಚು ಸುದ್ದಿಯಾಗಿದ್ದಾರೆ. ರೇಣುಕಾಸ್ವಾಮಿಗೆ ಚಿತ್ರಹಿಂಸೆ ಕೊಟ್ಟು ಅತೀ ಕ್ರೂರಾತಿ ಕ್ರೂರವಾಗಿ ಈ ಡಿ ಗ್ಯಾಂಗ್ ಕೊಂದಿದೆ. ಇದರ ಪರಿಣಾಮ ದರ್ಶನ್ ಹಾಗೂ ಪಟಾಲಂ ಜೈಲು ಸೇರಿದೆ. ಹಿಂದೆಂದು ಕಂಡು ಕೇಳರಿಯದ ಅತ್ಯಂತ ಭೀಭತ್ಸವಾದ ಕೊಲೆ(Renukaswamy murder case) ಆರೋಪದಲ್ಲಿ ದರ್ಶನ್ ಕಂಬಿ ಹಿಂದೆ ಬಂಧಿಯಾಗಿದ್ದಾನೆ. ಕೊಲೆಯ ಅಸಲಿ ರಹಸ್ಯವನ್ನ ಕೇಳಿ ಪೊಲೀಸರು ದಂಗಾಗಿದ್ದಾರೆ. ಇಂಡಿಯನ್ ಸಿನಿಮಾ ಹಿಸ್ಟರಿಯಲ್ಲೇ ಹಿಂದೆಂದೂ ಯಾವ ನಟನ ಮೇಲೂ ಇಂಥಾ ಆರೋಪ ಬಂದಿರಲ್ಲಿಲ್ಲ ಅನ್ಸುತ್ತೆ. ಯಾಕಂದ್ರೆ ದರ್ಶನ್ ಮೇಲೆ ಬಂದಿರೋದು ಸಾಮಾನ್ಯವಾದ ಆರೋಪ ಅಲ್ಲವೇ ಅಲ್ಲ. ಕೊಲೆ ಆರೋಪ. ಬರೀ ಕೊಲೆ ಅಲ್ಲ. ಕಿಡ್ನ್ಯಾಪ್ ಮಾಡಿ ಹಲ್ಲೆ(Kidnapping and assault) ಮಾಡಿ ಹತ್ಯೆ ಮಾಡಿ ಇದೀಗ ಜೈಲು ಸೇರಿದ್ದಾರೆ. ರೇಣುಕಾಸ್ವಾಮಿ ಕೊಲೆ ಇದ್ಯಲ್ಲಾ, ಈ ಹತ್ಯೆಯ ನೆನಪು ಇನ್ನೂ ಅದೆಷ್ಟು ವರ್ಷಗಳ ಕಾಲ ರಾಜ್ಯವನ್ನ ಕಾಡಲಿದೆಯೋ ಗೊತ್ತಿಲ್ಲ. ಯಾಕಂದ್ರೆ ಅಷ್ಟು ಕ್ರೂರವಾಗಿ ಕೊಲೆ ಮಾಡಲಾಗಿದೆ. ಒಬ್ಬ ಮನುಷ್ಯನಿಗೆ ಕೊಡಬಾದಂತಹ ಚಿತ್ರ ಹಿಂಸೆಯನ್ನ ಕೊಟ್ಟು ರೇಣುಕಾಸ್ವಾಮಿಯನ್ನ ಮರ್ಡರ್ ಮಾಡಿದ್ದಾರೆ.

ಇದನ್ನೂ ವೀಕ್ಷಿಸಿ:  13 ವರ್ಷಗಳ ಬಳಿಕ 13 ದಿನ ಜೈಲು ಪಾಲಾದ ದರ್ಶನ್..! ಜುಲೈ 4ರವರೆಗೆ ಕಿಲ್ಲಿಂಗ್ ಗ್ಯಾಂಗ್‌ಗೆ ನ್ಯಾಯಾಂಗ ಬಂಧನ..!