ಕಾಂಗ್ರೆಸ್-ಬಿಜೆಪಿ ನಡುವೆ ಭುಗಿಲೆದ್ದ ‘ಕರಸೇವಕ’ ಫೈಟ್: ಹಳೇ ಕೇಸ್ ಕೆದಕುವ ಹಿಂದೆ ರಾಜಕೀಯ ಇದ್ಯಾ..?

Jan 3, 2024, 12:24 PM IST

ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಕರಸೇವಕ ಫೈಟ್‌ ಭುಗಿಲೆದ್ದಿದ್ದು, ರಾಮಜನ್ಮಭೂಮಿ(Ram Janmabhoomi) ಹೋರಾಟಗಾರರ ಬಂಧನಕ್ಕೆ ಬಿಜೆಪಿ(BJP) ಕೆರಳಿದೆ. ಸರ್ಕಾರದ ವಿರುದ್ಧ ಹಿಂದೂ ಅಸ್ತ್ರ ಪ್ರಯೋಗಿಸಲು ಬಿಜೆಪಿ ಮುಂದಾಗಿದೆ. ಹಿಂದೂ ಅಸ್ತ್ರದ ಹೋರಾಟ ತೀವ್ರಗೊಳಿಸಲು ಬಿಜೆಪಿ ನಾಯಕರು ಕರೆ ಕೊಟ್ಟಿದ್ದಾರೆ. ಹಿಂದೂ ಕಾರ್ಯಕರ್ತನ ಬಿಡುಗಡೆಗೆ ಒತ್ತಾಯಿಸಿ ಬಿಜೆಪಿ ಹೋರಾಟ ಮಾಡುತ್ತಿದ್ದು, ಸರ್ಕಾರದ ನಿರ್ಧಾರ ಖಂಡಿಸಿ ಇಂದು ಬಿಜೆಪಿ ನಾಯಕರು ಬೀದಿಗಿಳಿದಿದ್ದಾರೆ. ಆರ್.ಅಶೋಕ್ (R.Ashok) ನೇತೃತ್ವದಲ್ಲಿ ಹುಬ್ಬಳ್ಳಿಯಲ್ಲಿ(Hubli) ಬೃಹತ್ ಹೋರಾಟ ನಡೆಯುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರರಿಂದ ಬೆಂಗಳೂರಲ್ಲಿ(Bengaluru) ಪ್ರತಿಭಟನೆ ಮಾಡಲಿದ್ದಾರೆ. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಯುತ್ತಿದೆ. ಕಾಂಗ್ರೆಸ್ ಹಿಂದೂ ವಿರೋಧಿ ಎಂದು ಬಿಂಬಿಸಲು ಬಿಜೆಪಿ ಸ್ಕೆಚ್ ಹಾಕಿದ್ದು, ಬಿಜೆಪಿಗೆ ಹೋರಾಟದ ಅಸ್ತ್ರ ನೀಡಿ ಕೈ ಸುಟ್ಟಿಕೊಂಡಿತಾ ಕಾಂಗ್ರೆಸ್..? ಎಂಬ ಪ್ರಶ್ನೆ ಕಾಡುತ್ತಿದೆ. 

ಇದನ್ನೂ ವೀಕ್ಷಿಸಿ:  ರಾಮಮಂದಿರ ಉದ್ಘಾಟನೆ ಆಹ್ವಾನದಲ್ಲೂ ಜಟಾಪಟಿ..! ಈ ವಿಚಾರದಲ್ಲಿ ರಾಜಕೀಯ ಮಾಡ್ತಿದ್ಯಾ ಬಿಜೆಪಿ..?