ಮೇರಾ ಮಿಟ್ಟಿ ಮೇರಾ ಭಾರತ್ ಮೋದಿ ಕನಸಿಗೆ ಎಲ್ಲರೂ ಕೆಲಸ ಮಾಡಿ: ರಾಜೀವ್‌ ಚಂದ್ರಶೇಖರ್‌

ಮೇರಾ ಮಿಟ್ಟಿ ಮೇರಾ ಭಾರತ್ ಮೋದಿ ಕನಸಿಗೆ ಎಲ್ಲರೂ ಕೆಲಸ ಮಾಡಿ: ರಾಜೀವ್‌ ಚಂದ್ರಶೇಖರ್‌

Published : Aug 14, 2023, 10:44 AM IST

ಬೆಂಗಳೂರಿನ ಯಲಹಂಕದ ಬಳಿ ವನಮಹೋತ್ಸವವನ್ನು ಆಚರಿಸಲಾಯಿತು. ಗಿಡಗಳನ್ನು ನೆಡುವ ಮೂಲಕ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ರು.

ಬೆಂಗಳೂರು: 75ನೇ ಸ್ವಾತಂತ್ರ್ಯ ಅಮೃತ್ ಮಹೋತ್ಸವದ ಹಿನ್ನೆಲೆ ಹಾಗೂ 76ನೇ ಸ್ವಾತಂತ್ರ್ಯ ದಿನವನ್ನು ಬಿಬಿಎಂಪಿ(BBMP) ವಿಶೇಷವಾಗಿ ಆಚರಿಸಿತು. ಬಿಬಿಎಂಪಿ ಯಲಹಂಕ ವಿಭಾಗದಲ್ಲಿ ವಿಭಿನ್ನವಾಗಿ ಮರ ನೆಡುವ ಕಾರ್ಯಕ್ರಮ ಆಯೋಜಿಸಲಾಯ್ತು. ಯಲಹಂಕ ಕೆರೆ ಬಳಿ 76 ವಿವಿಧ ಬಗೆಯ ಗಿಡಗಳನ್ನು  ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್(Rajeev Chandrasekhar) ನೆಡುವ ಮೂಲಕ ಚಾಲನೆ ನೀಡಿದ್ರು. 76ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ(Independence Day) ಹಿನ್ನಲೆ ಮಹಾಗಣಿ, ತಬೂಬಿಯಾ ಅವ್ಲಾಂಡ, ನೇರಳೆ, ಹಲಸು, ಇಂಡಿಯನ್ ಚಾರ್ಕೊಲ್, ಹೊಳೆ ದಾಸವಾಳ, ಹತ್ತಿ ಸೇರಿದಂತೆ 76 ವೆರೈಟಿ ಗಿಡಗಳನ್ನು ನಡೆಸಲಾಯಿತು. ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕ  ಎಸ್. ಆರ್. ವಿಶ್ವನಾಥ್, ಬಿಬಿಎಂಪಿ ಜಂಟಿ ಆಯುಕ್ತ ಮೊಹಮ್ಮದ್ ನಯೀನ್, ಬಿಬಿಎಂಪಿ ಅಧಿಕಾರಿಗಳು ಭಾಗಿಯಾಗಿದ್ರು. ಈ ವೇಳೆ ಮಾತನಾಡಿದ ರಾಜೀವ್ ಚಂದ್ರಶೇಖರ್, ಮೇರಾ ಮಿಟ್ಟಿ ಮೇರಾ ಭಾರತ್ ಇದು ಮೋದಿಯವರ ಕನಸು. ಇದಕ್ಕಾಗಿ ಎಲ್ಲರೂ ಜೊತೆಯಾಗಿ ಕೆಲಸ ಮಾಡ್ಬೇಕು. ಮೋದಿಯವರ ಕನಸು ದೇಶ ಅಭಿವೃದ್ಧಿ ಆಗ್ಬೇಕು ಅನ್ನೋದು. 2024ರಲ್ಲಿ ಮೂರನೇ ಅತಿದೊಡ್ಡ ಅಭಿವೃದ್ದಿ ದೇಶ ಆಗ್ಬೇಕು ಅನ್ನೋ ಕನಸು ನನಸಾಗ್ಬೇಕು ಎಂದು ಹೇಳಿದರು.

ಇದನ್ನೂ ವೀಕ್ಷಿಸಿ:  ರಾಷ್ಟ್ರಧ್ವಜ ನೇಕಾರರಿಗೆ ಇದೆಂಥಾ ದುಸ್ಥಿತಿ..? ನೇಕಾರ ಕೇಂದ್ರದಲ್ಲಿ ಹಾವು-ಚೇಳುಗಳದ್ದೇ ಸಾಮ್ರಾಜ್ಯ !

24:39Bengaluru ಶರ್ಮಿಳಾ ಸಾವಿಗೆ ಬಿಗ್ ಟ್ವಿಸ್ಟ್: ಒಂದೂ ಸುಳಿವು ಬಿಡದೇ ಕೊಂ*ದವನು ಅದೊಂದು ತಪ್ಪು ಮಾಡಿದ್ದ!
24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ
25:38ರೌಡಿ ಶೀಟರ್‌ಗೆ ಹೆಂಡತಿ ಕಂಡರೆ 'ಫಿಯರ್': ಮಚ್ಚು ಹಿಡಿದು ಗಂಡನನ್ನೇ ಚೇಸ್ ಮಾಡಿದ ಕಿರಾತಕಿ ಹೆಂಡತಿ!
25:26Suvarna Special: ಏನದು 20 ವರ್ಷಗಳ ಸೇಡಿನ ಕಥೆ? ನಾರಾ ರೆಡ್ಡಿ, ಗಾಲಿ ರೆಡ್ಡಿ..ದಶಕಗಳ ದ್ವೇಷಚರಿತ್ರೆ!
25:27ಕಳ್ಳರ ಗೋಲ್ಡ್ ಬ್ಯುಸಿನೆಸ್​​: ಕಳ್ಳರು ಸಿಗಲ್ಲ, ಸಿಕ್ಕಿದ್ರೂ ಮಾಲು ಇರೊಲ್ಲ! 5 ರಾಬರಿ ಕೇಸ್, ಪೊಲೀಸರು ತನಿಖೆ ಠುಸ್!
20:21ಚಿತ್ರದುರ್ಗ ಬಸ್ ಅಗ್ನಿ ದುರಂತ: ಚಲಿಸುವ ಚಿತಾಗಾರ 'ಸ್ಲೀಪರ್ ಬಸ್‌'ಗಳ ಕರಾಳ ಸತ್ಯ ಬಯಲು
24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
19:51ತಾನೇ ಕಟ್ಟಿದ ಕೋಟೆಯಿಂದ ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು! ಹೇಗಿತ್ತು ಗೊತ್ತಾ ಹಿಂದೂ ಹೋರಾಟಗಾರನ ರಣ ಕರಾಳ ಚರಿತ್ರೆ?
21:55Suvarna Special: ಲಕ್ಷ್ಮೀ ಲೆಕ್ಕ..! ಎಲ್ಲಿ ಹೋಯ್ತು ಎರಡು ತಿಂಗಳ ಗೃಹಲಕ್ಷ್ಮೀ ದುಡ್ಡು..?
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
Read more