ಹಗರಣ Vs ಹಗರಣ..ಕೈ-ಕಮಲ ನಾಯಕರ ಮರ್ಮಯುದ್ಧ! "ಸಿಎಂ ಮುಖವಾಡ ಕಳಚಿ ಬಿದ್ದಿದೆ" ಎಂದ ಅಶೋಕ್..!

Jul 21, 2024, 5:36 PM IST

ಹಗರಣ Vs ಹಗರಣ.. ಒಬ್ಬರದ್ದು ಅಸ್ತ್ರ, ಇನ್ನೊಬ್ಬರದ್ದು ಪ್ರತ್ಯಸ್ತ್ರ. ನೀವು ಭ್ರಷ್ಟರು ಅಂತ ಒಬ್ರು, ನೀವು ಪರಮಭ್ರಷ್ಟರು ಅಂತ ಇನ್ನೊಬ್ರು. ಬಿಜೆಪಿ (BJP) ಆರಂಭಿಸಿದ್ದ ವಾಲ್ಮೀಕಿ ಯುದ್ಧದಲ್ಲಿ 21 ಅಸ್ತ್ರಗಳನ್ನ ಪ್ರಯೋಗಿಸಿದರು ಸಿಎಂ ಸಿದ್ದರಾಮಯ್ಯ(Siddaramaiah). ಕಾಂಗ್ರೆಸ್ (Congress)ಕೌಂಟರ್"ಗೆ ಕೇಸರಿ ಟಕ್ಕರ್. ಏನ್ ನಮ್ಮನ್ನ ಹೆದರಿಸ್ತಾ ಇದ್ದೀರಾ ಅಂತ ಅಬ್ಬರಿಸಿದ್ರು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ. ಇದು ಆಡಳಿತ ಪಕ್ಷ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಜೆಪಿ ಮಧ್ಯೆ ಶುರುವಾಗಿರೋ ಸೇರಿಗೆ ಸವ್ವಾ ಸೇರು ರಾಜಕಾರಣ. ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ (Valmiki corporation scam) 187 ಕೋಟಿಗಳ ಅಕ್ರಮ ರಾಜ್ಯ ಸರ್ಕಾರಕ್ಕೆ ಮಗ್ಗುಲ ಮುಳ್ಳಾಗಿರೋ ವಿಷ್ಯ ನಿಮ್ಗೆ ಗೊತ್ತೇ ಇದೆ. ಈ ಹಗರಣ ಸಿದ್ದರಾಮಯ್ಯ ಸರ್ಕಾರಕ್ಕೆ ತಂದಿಟ್ಟಿರೋ ತಲೆನೋವು ಅಷ್ಟಿಷ್ಟಲ್ಲ. ವಿಧಾನಸಭಾ ಅಧಿವೇಶನದ (Assemblyin Session) ಮೊದಲ ವಾರ ಪೂರ್ತಿ ವಾಲ್ಮೀಕಿ ನಿಗಮದ ಅಕ್ರಮಕ್ಕೆ ಆಹುತಿಯಾಗಿದೆ. 187 ಕೋಟಿಗಳ ಅಕ್ರಮವನ್ನೇ ಅಸ್ತ್ರ ಮಾಡಿತೊಂಡಿರುವ ಪ್ರತಿಪಕ್ಷ ಬಿಜೆಪಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ಮುಗಿ ಬಿದ್ದಿದೆ. ವಾಲ್ಮೀಕಿ ನಿಗಮದ ಅಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮುಖವಾಡ ಕಳಚಿ ಬಿದ್ದಿದೆ ಅಂತಿದೆ ಬಿಜೆಪಿ. ನನ್ನ ಹೆಸರು ಹೇಳದೇ ಇದ್ರೆ ಬಿಜೆಪಿಯವ್ರಿಗೆ ತಿಂದದ್ದು ಜೀರ್ಣವಾಗಲ್ಲ ಅಂತಿದ್ದಾರೆ ಸಿದ್ದರಾಮಯ್ಯ. ಈ ಆರೋಪ-ಪ್ರತ್ಯಾರೋಪ, ಟಕ್ಕರ್-ಕೌಂಟರ್'ಗಷ್ಟೇ ಇದು ಸೀಮಿತವಾಗಿಲ್ಲ. ಸರ್ಕಾರದ ವಿರುದ್ಧ ವಾಲ್ಮೀಕಿ ಅಸ್ತ್ರ ಪ್ರಯೋಗಿಸಿರುವ ಬಿಜೆಪಿ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ 21 ಅಸ್ತ್ರಗಳನ್ನು ಪ್ರಯೋಗಿಸಿ ಹೊಸ ಯುದ್ಧ ಶುರು ಮಾಡಿದ್ದಾರೆ. ಇದು ಸಿದ್ದರಾಮಯ್ಯನವರು ಹೆಣೆದಿರೋ "ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವ ವ್ಯೂಹ". ವಿಧಾನಸಭಾ ಅಧಿವೇಶದಲ್ಲಿ ಪ್ರತಿಪಕ್ಷ ಬಿಜೆಪಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಲ್ಮೀಕಿ ಅಸ್ತ್ರ ಝಳಪಿಸುತ್ತಿದ್ದಂತೆ ಸಿದ್ದರಾಮಯ್ಯ ಹಳೇ ಹಗರಣಗಳನ್ನು ಕೆದಕಿದ್ದಾರೆ. ಕಳೆದ ಬಿಜೆಪಿ ಸರ್ಕಾರದಲ್ಲಿ ನಡೆದಿರುವ ಭ್ರಷ್ಟಾಚಾರ ಪ್ರಕರಣಗಳನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ. ಅದೂ ಒಂದಲ್ಲ, ಎರಡಲ್ಲ, 21 ಹಗರಣಗಳು.

ಇದನ್ನೂ ವೀಕ್ಷಿಸಿ:  Yadgir Crime News: ಮದುವೆಯಾಗಿ ಒಂದು ವರ್ಷಕ್ಕೆ ಅವಳು ಬೇಡವಾದಳು..ಇಡೀ ಕುಟುಂಬವನ್ನೇ ಕೊಂದು ಶವವನ್ನು ಎಸೆದರು!