Jun 18, 2024, 11:41 AM IST
ರೇಣುಕಾಸ್ವಾಮಿ ಕೊಲೆ ಕೇಸ್‌ಗೆ ಸಂಬಂಧಿಸಿದಂತೆ ಪವಿತ್ರಾಗೌಡ ನಿವಾಸದಲ್ಲಿ(Pavitra Gowda residence) ಮಹಜರು ನಡೆಸುವ ವೇಳೆ ಸುಮಾರು 15 ಕೋಟಿ ಆಸ್ತಿ ವ್ಯವಹಾರ ಪತ್ರ ಪತ್ತೆಯಾಗಿದೆ. ಈ ದಾಖಲೆ ಕಂಡು ಪೊಲೀಸರಿಗೇ(Police) ಶಾಕ್ ಆಗಿದ್ದಾರೆ. ಆಸ್ತಿ ಖರೀದಿಯ ಹಣದ ಮೂಲದ ಪರಿಶೀಲನೆಗೆ ಪೊಲೀಸರು ಇಳಿದಿದ್ದಾರೆ. ಆಸ್ತಿ ಖರೀದಿಯಲ್ಲಿ ರಾಜಕಾರಣಿಗಳ ಪಾತ್ರ ಇದೆಯಾ..?, ದರ್ಶನ್(Darshan) ಪ್ರಕರಣದಲ್ಲಿ ರಾಜಕಾರಣಿಗಳ ನಂಟು ಇರಬಹುದು ಎನ್ನಲಾಗ್ತಿದೆ. ರಿಯಲ್ ಎಸ್ಟೇಟ್ (Real estate)ಕಾರಣಕ್ಕೆ ದರ್ಶನ್ ಬಚಾವ್ ಮಾಡಲು ಯತ್ನ ನಡೆಸಲಾಗುತ್ತಿದೆ. ಇಬ್ಬರು ಕಾಂಗ್ರೆಸ್ , ಒಬ್ಬ ಬಿಜೆಪಿ ಮುಖಂಡನಿಂದ ದರ್ಶನ್ ರಕ್ಷಣೆ ಮಾಡಲಾಗುತ್ತಿದೆ ಎನ್ನಲಾಗ್ತಿದೆ. ರೇಣುಕಾಸ್ವಾಮಿ ಕೊಲೆಗೂ ಮೀರಿ ತನಿಖೆ ನಡೆದ್ರೆ ಲಾಕ್ ಆಗೋದು ಫಿಕ್ಸ್ ಎನ್ನಲಾಗ್ತಿದೆ. ಒಂದು ವೇಳೆ ಪೊಲೀಸರು ತನಿಖೆಗೆ ಇಳಿದ್ರೆ ನಟ ದರ್ಶನ್‌ರ ಮತ್ತೊಂದು ಮುಖ ಬಯಲಾಗಲಿದೆ. ಸದ್ಯ ಪೊಲೀಸ್ ತನಿಖೆ ಮೇಲೆ ನಟ ದರ್ಶನ್ ಭವಿಷ್ಯ ನಿಂತಿದೆ.
ಇದನ್ನೂ ವೀಕ್ಷಿಸಿ: ರೇಣುಕಾಸ್ವಾಮಿ ಕೊಲೆ ಹೇಗಾಯ್ತು, ಯಾರಿದ್ರು, ಎಷ್ಟು ಜನ ಸೇರಿದ್ರು? ಯಾವ ಆಯುಧಗಳಿಂದ ಹಲ್ಲೆ ಮಾಡಲಾಯ್ತು?