May 28, 2024, 12:29 PM IST
ರೈತ (Farmer) ವಿವಿಧ ರೀತಿಯಲ್ಲಿ ಸಮಸ್ಯೆಗಳ ಸುಲಿಗೆ ಸಿಲುತ್ತಿದ್ದಾನೆ. ಅದರಲ್ಲೂ ಕಳೆದ ವರ್ಷದ ಬರಗಾಲದಿಂದ(Drought) ತತ್ತರಿಸಿ ಹೋಗಿದ್ದ ಅನ್ನದಾತನಿಗೆ ಈ ವರ್ಷ ಬದುಕು ಹೇಗೆ ಎಂಬುದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ. ಯಾಕೆಂದರೆ ಮುಂಗಾರು ಆಗುತ್ತಾ. ಕೈ ಕೊಡುತ್ತಾ ಅನ್ನೋ ಗೊಂದಲದಲ್ಲೇ ಸಮಯ ಕಳೆಯುತ್ತಿದ್ದಾನೆ. ಯಾಕೆಂದರೆ ಬಿತ್ತನೆ ಬೀಜ (Seeds) ಖರೀದಿಗೆ ಮುಂದಾದ ರೈತರಿಗೆ ಬೆಲೆ ಏರಿಕೆ (Price High) ಬಿಸಿ ತಟ್ಟುತ್ತಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಬಿತ್ತನೆ ಬೀಜ ಬಲು ದುಬಾರಿಯಾಗಿದೆ. ಪೂರ್ವ ಮುಂಗಾರು ಉತ್ತಮವಾದ ಹಿನ್ನೆಲೆ ರೈತರು ಕೃಷಿ ಚಟುವಟಿಕೆಗೆ ಮುಂದಾಗಿದ್ದಾರೆ. ಆದರೆ ಬಿತ್ತನೆ ಬೀಜ ಖರೀದಿಗೆ ಬಂದವರಿಗೆ ಶಾಕ್ ಎದುರಾಗಿದೆ.
ಇದನ್ನೂ ವೀಕ್ಷಿಸಿ: Congress Cadre Party: ಕಾಂಗ್ರೆಸ್ ಕುಟುಂಬ.. ಇದು ‘ಕೈ’ ಕೇಡರ್..! ಏನಿದು ಪಕ್ಷದ ಹೊಸ ಪ್ಲ್ಯಾನ್?