May 28, 2024, 5:30 PM IST
ಇಡೀ ದೇಶದಲ್ಲೇ ದೇವೇಗೌಡರು ಅಂದ್ರೆ, ರಾಜಕೀಯ ಘನತೆ ಇದೆ. ಆದ್ರೆ, ಆ ಗೌರವನ್ನೆಲ್ಲಾ ನುಂಗಿ ಹಾಕಿರೋದು, ಪ್ರಜ್ವಲ್ ರೇವಣ್ಣ(Prajwal Revanna) ಹೆಸರಿನ ಪೆನ್ ಡ್ರೈವ್(Pendrive case) ದುರಂತ. ಎಲೆಕ್ಷನ್ ನಡೀತಿದ್ದ ಹೊತ್ತಲ್ಲಿ ಇದ್ದಕ್ಕಿದ್ದ ಹಾಗೆ ಸದ್ದು ಮಾಡಿತ್ತು, ಪೆನ್ ಡ್ರೈವ್ ಪ್ರಕರಣ. ಆ ಪೆನ್ ಡ್ರೈವ್ನಲ್ಲಿದ್ದದ್ದು ನೂರಾರು ಅಶ್ಲೀಲ ವಿಡಿಯೋಗಳು. ಅವೆಲ್ಲಾ ಕೂಡ, ಹಾಸನ ಸಂಸದ ಪ್ರಜ್ವಲ್ ರೇವಣ್ಣನಿಗೆ(Prajwal Revanna obscene video case) ಸಂಬಂಧಿಸಿದ್ದು ಅಂತ ಎಲ್ಲರೂ ಹೇಳಿದ್ರು. ಆದ್ರೆ, ಅದಕ್ಕೆ ಕ್ಲಾರಿಫಿಕೇಷನ್ ಕೊಡ್ಬೇಕಿದ್ದ ಪ್ರಜ್ವಲ್ ನಾಪತ್ತೆಯಾಗಿದ್ರು. ಸೀನ್ ಕಟ್ ಮಾಡಿದ್ರೆ, ಮೊದಲ ಹಂತದ ಎಲೆಕ್ಷನ್ ಮುಗೀತು. 2014ರ ಲೋಕಸಭಾ ಚುನಾವಣೆ ಹೊತ್ತಲ್ಲಿ, ತಾತಾನಿಗೆ ಬೆಂಬಲವಾಗಿ ನಿಂತಿದ್ದ ಪ್ರಜ್ವಲ್ ರೇವಣ್ಣ, ಅವತ್ತೇ ರಾಜಕೀಯಕ್ಕೆ ಬರೋ ಸೂಚನೆ ಕೊಟ್ಟಾಗಿತ್ತು. 2019ರಲ್ಲಿ ದೇವೇಗೌಡರೇ ಮೊಮ್ಮನಿಗೋಸ್ಕರ, ತಮ್ಮ ಕರ್ಮಭೂಮಿ, ಹಾಸನದ ಸಿಂಹಾಸನವನ್ನ ಬಿಟ್ಟು ಕೊಟ್ರು. ಭದ್ರಕೋಟೆಯಲ್ಲಿ ಪ್ರಜ್ವಲ್ ರೇವಣ್ಣ ಗೆದ್ದುಬೀಗಿದ್ರು. ಮೋದಿ ಸುನಾಮಿಯಲ್ಲಿ ಕಾಂಗ್ರೆಸ್ ಜೆಡಿಎಸ್ ಪಕ್ಷಗಳು ಸೋತುಸುಣ್ಣವಾಗಿದ್ದಾಗ, ಜೆಡಿಎಸ್‌ನಿಂದ ಗೆದ್ದಿದ್ದ ಏಕಮಾತ್ರ ಅಭ್ಯರ್ಥಿಯಾಗಿದ್ದು, ಪ್ರಜ್ವಲ್ ರೇವಣ್ಣ.
ಇದನ್ನೂ ವೀಕ್ಷಿಸಿ: 11 ವರ್ಷದ ಹಿಂದೆ ಕಿಡ್ನ್ಯಾಪ್..ರೇಪ್..ಮರ್ಡರ್..! ಕೆಲಸಕ್ಕೆ ಹೋದವಳು ಮಿಸ್ಸಿಂಗ್..!