Asianet Suvarna News Asianet Suvarna News

11 ವರ್ಷದ ಹಿಂದೆ ಕಿಡ್ನ್ಯಾಪ್‌..ರೇಪ್..ಮರ್ಡರ್..! ಕೆಲಸಕ್ಕೆ ಹೋದವಳು ಮಿಸ್ಸಿಂಗ್..!

ಅವಳ ಕಥೆ ಮುಗಿಸಿದವನು ಗಂಡನ ಕ್ಲೋಸ್ ಫ್ರೆಂಡ್..!
ಗಂಡನೇ ಆರೋಪಿ ಅಂತ 73 ದಿನ ಜೈಲಿಗೆ ಕಳಿಸಿದ್ರು..!
ಅವಳ ಕಥೆ ಮುಗಿಸಿ 11 ವರ್ಷ ಸೈಲೆಂಟಾಗಿಬಿಟ್ಟಿದ್ರು..!

ಅದು 11 ವರ್ಷದ ಹಿಂದಿನ ಮರ್ಡರ್ ಕೇಸ್.. ಕೆಲಸಕ್ಕೆ ಅಂತ ಹೊರಟವಳು ಮರ್ಡರ್(Murder) ಆಗಿದ್ಲು. ಆಕೆಯನ್ನ ಕಿಡ್ನ್ಯಾಪ್ ಮಾಡಿ, ಅತ್ಯಾಚಾರವೆಸಗಿ(Rape) ಬರ್ಬರವಾಗಿ ಕೊಂದು ಹಾಕಿದ್ರು. ಆರಂಭದಲ್ಲಿ ಗಂಡನೇ ಕೊಲೆಗಾರ ಅಂತ ಜೈಲಿಗೂ ಹಾಕಿದ್ರು. ಆದ್ರೆ ಇದೆಲ್ಲಾ ನಡೆದು 11 ವರ್ಷ ಆಗಿದೆ. ಇವತ್ತು ಈ ಕೇಸ್‌ಗೆ ಟ್ವಿಸ್ಟ್ ಸಿಕ್ಕಿದೆ. ಮಹಿಳೆಯನ್ನ(Woman) ಕೊಂದವರು ಅರೆಸ್ಟ್ ಆಗಿದ್ದಾರೆ. ಹೆಂಡತಿ ಕೊಲೆಯಾಗಿದೆ ಅಂತ ಕಂಪ್ಲೆಂಟ್ ಕೊಟ್ಟರೆ. ಗಂಡನನ್ನೇ ಜೈಲಿಗೆ ಹಾಕಿಬಿಟ್ಟಿದ್ರು ಪೊಲೀಸರು. ಬರೊಬ್ಬರಿ 73 ದಿನ ಗಂಡ ಜೈಲಿನಲ್ಲಿ ಕೊಳೆಯಬೇಕಾಯ್ತು. ಆದ್ರೆ ಇದೆಲ್ಲಾ ಆಗಿ ಈಗ 11 ವರ್ಷ ಆಗಿದೆ. ಆ ಕೇಸ್‌ನಲ್ಲಿ ಪೊಲೀಸರು 2 ಬಾರಿ ಸಿ ರಿಪೋರ್ಟ್ ಸಲ್ಲಿಸಿದ್ರು. ಆದ್ರೆ ಸುಖಾಸುಮ್ಮನೆ ಜೈಲುವಾಸ ಅನುಭವಿಸಿದ್ದ ವಿಜಯಾ ಗಂಡ. ಕೋರ್ಟ್ ಮೆಟ್ಟಿಲ್ಲೇರಿದ್ದ. ಕೋರ್ಟ್ ಕೇಸ್ ಅನ್ನ ಸಿ.ಐ.ಡಿಗೆ ವಹಿಸಿತ್ತು. ಇನ್ನೂ ಯಾವಾಗ ಕೇಸ್ ಸಿಐಡಿಗೆ(CID) ಹೊಯ್ತೋ ಪ್ರಕರಣಕ್ಕೆ ಹೊಸ ತಿಎಉವು ಪಡೆಯೋದಕ್ಕೆ ಶುರುವಾಯ್ತು. ಬರೊಬ್ಬರಿ 11 ವರ್ಷದ ನಂತರ ಆ ಕಿರಾತಕರ ಹೆಡೆಮುರಿ ಕಟ್ಟುವಂತಾಯ್ತು. ವಿಜಯ ಗಂಡನ ಆಪ್ತ ಸ್ನೇಹಿತ ಮತ್ತು ಆತನ ಗ್ಯಾಂಗ್. ಒಟ್ಟಿಗೆ ಕೆಲಸ ಮಾಡ್ತಿದ್ದವನೇ ಸ್ನೇಹಿತನ ಹೆಂಡತಿ ಮೇಲೆ ಕಣ್ಣು ಹಾಕಿದ್ದ. ಡ್ರಾಪ್ ಕೊಡುವ ನೆಪದಲ್ಲಿ ಕಾರು ಹತ್ತಿಸಿಕೊಂಡು ನಂತರ ರೇಪ್ ಮಾಡಿ ಬರ್ಬರವಾಗಿ ಕೊಲೆ ಮಾಡಿಬಿಟ್ಟಿದ್ರು. ಹೆಂಡತಿಯ ಕೊಲೆಗೆ ನ್ಯಾಯ ಸಿಗಬೇಕು ಅಂತ ಗಂಡ 11 ವರ್ಷಗಳ ಕಾಲ ಇನ್ನಿಲ್ಲದಂತೆ ಹೋರಾಟ ಮಾಡಿದ್ರ ಫಲವಾಗಿ ಇವತ್ತು ಹಂತಕರು ಕಂಬಿ ಹಿಂದೆ ಸರೆದಿದ್ದಾರೆ.

ಇದನ್ನೂ ವೀಕ್ಷಿಸಿ:  ಉತ್ತರ ಭಾರತದ ಕಾಶಿಯಲ್ಲಿ ಅನಾಥವಾಗಿ ಬಿದ್ದಿದ್ದ ಕನ್ನಡ ಶಾಸನಕ್ಕೆ ಸಿಕ್ತು ಮುಕ್ತಿ..!

Video Top Stories