ಅಪಾಯದ ಹಂತದಲ್ಲಿ ಬಡಗಣಿ ನದಿ ಮೇಲಿನ ತೂಗು ಸೇತುವೆ..ಜೀವ ಕೈಯಲ್ಲಿ ಹಿಡಿದು ಓಡಾಡುತ್ತಿರುವ ಜನ

Mar 17, 2024, 2:22 PM IST

ಉತ್ತರಕನ್ನಡ: ಹೊನ್ನಾವರದ ಬಡಗಣಿ‌ ನದಿಯ ಮೇಲೆ ಹಾಕಿರೋ‌ ತೂಗು ಸೇತುವೆ ಅಪಾಯದಲ್ಲಿದೆ. ತುಕ್ಕು ಹಿಡಿದ ಹಾಗೂ ತುಂಡಾದ ಹಲಗೆಗಳ ನಡುವೆಯೇ ಸರ್ಕಸ್ ಮಾಡ್ತಾ ಮಹಿಳೆಯರು, ಮಕ್ಕಳು, ವೃದ್ಧರು ಸಾಗುತ್ತಿದ್ದಾರೆ. ಯಾವುದೇ ಕ್ಷಣದಲ್ಲಿ ತುಂಡಾಗಿ ಬಡಗಣಿ ನದಿಯ ಒಡಲನ್ನು ಈ ತೂಗು ಸೇತುವೆ ಸೇರುವ ಸಾಧ್ಯತೆ ಇದೆ. ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕರ್ಕಿ ಹಾಗೂ ಪಾವಿನ ಕುರ್ವೆ ಗ್ರಾಮಕ್ಕೆ ಸ‌ಂಪರ್ಕದ ಕೊಂಡಿಯಾಗಿದೆ . ಸುಮಾರು 100 ರಿಂದ 150 ಮೀಟರ್ ಉದ್ದವಾಗಿದೆ ಬಡಗಣಿ ನದಿಯ ಮೇಲಿನ ಈ ತೂಗು ಸೇತುವೆ, ಪ್ರಸ್ತುತ ಬಲಿಗಾಗಿ ಕಾಯ್ತಿದೆ. ಸುಮಾರು 21 ವರ್ಷಗಳ ಹಿಂದೆ ನಿರ್ಮಾಣ ಮಾಡಲಾಗಿದ್ದು, ಸುಮಾರು 30 ಮೀಟರ್ ಎತ್ತರವಿರುವ ಪಿಲ್ಲರ್‌ಗಳಲ್ಲಿ ಕೂಡ ಬಿರುಕು ಮೂಡಿದೆ. ಈ ಪರಿಸ್ಥಿತಿಯ ಅರಿವಿದ್ರೂ ಕಣ್ಣಿದ್ದು ಕುರುಡರಂತಾಗಿದ್ದಾರೆ ಜನಪ್ರತಿನಿಧಿಗಳು, ಅಧಿಕಾರಿಗಳು. 2002ರಲ್ಲಿ 14ರಿಂದ 17 ಲಕ್ಷ ರೂ. ವೆಚ್ಚದಲ್ಲಿ ಈ ತೂಗು ಸೇತುವೆ ನಿರ್ಮಾಣ ಮಾಡಲಾಗಿತ್ತು. 

ಇದನ್ನೂ ವೀಕ್ಷಿಸಿ:  ಮೋದಿಗೆ ಜಯಕಾರ..ಬಿಎಸ್‌ವೈಗೆ ಧಿಕ್ಕಾರ..! ಏನಿದು K S ಈಶ್ವರಪ್ಪ ರಣತಂತ್ರ..?