ಶ್ರೀರಾಮುಲು ಕಾರ್ಯಕ್ರಮದಲ್ಲಿ ನೂಕುನುಗ್ಗಲು: ನೆಲಕ್ಕೆ ಬಿದ್ದ ಮಾಂಸದ ತುಂಡಿಗಾಗಿ ಮುಗಿಬಿದ್ದ ಜನ..!

Nov 17, 2022, 9:43 PM IST

ಚಿತ್ರದುರ್ಗ(ನ.17): ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರದ ವಿವಿಧೆಡೆ ಮೊಳಕಾಲ್ಮೂರು ಬಿಜೆಪಿ ಶಾಸಕ ಹಾಗೂ ಸಚಿವ ಶ್ರೀರಾಮುಲು ಅವರು ಬಾಡೂಟ ಆಯೋಜಿಸಿದ್ದರು. ತಾಲ್ಲೂಕಿನ ಗೌರಸಂದ್ರ, ನುಂಕಿಮಲೆ ಬೆಟ್ಟದಲ್ಲಿ ಬಾಡೂಟ ವ್ಯವಸ್ಥೆ ಮಾಡಲಾಗಿತ್ತು. ಸಚಿವರೊಂದಿಗೆ ಔತಣಕೂಟ ಹೆಸರಿನಲ್ಲಿ ಬಾಡೂಟ ಆಯೋಜಿಸಲಾಗಿತ್ತು. ಔತಣಕೂಟಕ್ಕೂ ಮೊದಲು ಮಾತನಾಡಿದ ಶ್ರೀರಾಮುಲು, ಮೊಳಕಾಲ್ಮೂರು ಕ್ಷೇತ್ರದಿಂದಲೇ‌ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ನನಗೆ ಸಿಎಂ ಆಗುವ ಸಾಮರ್ಥವಿದೆ ಎಂದು ಹೇಳಿಕೊಂಡಿದ್ದಾರೆ. ತಮ್ಮ ಭಾಷಣದಲ್ಲಿ ಸಚಿವ ಶ್ರೀರಾಮುಲು 'ಬೇಡರ ಕಣ್ಣಪ್ಪ' ಕಥೆ ಹೇಳಿದ್ದಾರೆ. ಕಳೆದ ವಾರದಲ್ಲಿ ಶ್ರೀರಾಮುಲು ಎರಡು ಕಡೆ ಬಾಡೂಟ ವ್ಯವಸ್ಥೆ ಮಾಡಿದ್ದಾರೆ. ಬಾಡೂಟ ವೇಳೆ ಮಾಂಸದ ಸಾರು ನೆಲಕ್ಕೆ‌ ಚೆಲ್ಲಿದೆ. ನೆಲಕ್ಕೆ‌ ಬಿದ್ದ ಮಾಂಸದ ತುಂಡುಗಳನ್ನ ಜನರು ಆಯ್ದುಕೊಂಡು ಹೋಗಿದ್ದಾರೆ. ಜನರು ನೆಲಕ್ಕೆ‌ಬಿದ್ದ ಮಾಂಸದ ತುಂಡು ಒಯ್ದಿರುವ ವಿಡಿಯೋ ವೈರಲ್ ಆಗಿದೆ. 

ಬಿಸಿಲೂರಿನ ದೇಗುಲಕ್ಕೆ ಸುಧಾಮೂರ್ತಿ ಭೇಟಿ: ಗಬ್ಬೂರಿನ ಲಕ್ಷ್ಮೀ ವೆಂಕಟೇಶ್ವರನಿಗೆ ವಿಶೇಷ ಪೂಜೆ