Sep 13, 2023, 9:56 AM IST
ಮುಖಕ್ಕೆ ಸೆರಗು ಸುತ್ತಿಕೊಂಡ ಮಹಿಳೆಯರು. ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ(Protest). ಪೊಲೀಸರ ಮಾತಿಗೂ ಜಗ್ಗದೆ ಅನಿರ್ಧಿಷ್ಟಾವಧಿ ಧರಣಿ. ಕಾರ್ಖಾನೆ ಬಂದ್ ಮಾಡಲೇಬೇಕೆಂದು ಹಠ ಹಿಡಿದು ಹೋರಾಟ. ಈ ದೃಶ್ಯ ಕಂಡು ಬಂದಿದ್ದು, ಹುಬ್ಬಳ್ಳಿ(Hubli) ನಗರದ ಕೂಗಳತೆ ದೂರದಲ್ಲಿರುವ ಅಂಚಟಗೇರಿ ಗ್ರಾಮದಲ್ಲಿ. ದುರ್ವಾಸನೆ ಬೀರುವ ವಿಂಟೆಕ್ ಪ್ರೊಟೀನ್ ರಿಕವರಿ ಪ್ಲಾಂಟ್ ಎಲ್ ಎಲ್ ಪಿ ಕಾರ್ಖಾನೆ(LLP factory) ಬಂದ್ ಮಾಡುವಂತೆ ಇವರೆಲ್ಲಾ ಬೀದಿಗಿಳಿದಿದ್ದಾರೆ. ವಾಸನೆ.. ದುರ್ವಾಸನೆ.. ಮನೆಯಲ್ಲಿ ಇರೋಕಾಲ್ಲ.. ಬೀದಿಗೂ ಬರಕಾಗಲ್ಲ.. ದುರ್ಮಾಂಸ ದುರ್ನಾತ ಗ್ರಾಮಸ್ಥರ ಬದುಕು ದುಸ್ತರ ಮಾಡಿದೆ. ಗ್ರಾಮದಲ್ಲಿ ಮಕ್ಕಳು, ವೃದ್ಧರು , ಅನಾರೋಗ್ಯ ತುತ್ತಾಗುವಂತಾಗಿದೆ. ಕೇರಳದ(Kerala) ಉದ್ಯಮಿಯೊಬ್ಬರು ಸ್ಥಾಪಿಸಿದ ವಿಂಟೆಕ್ ಪ್ರೊಟೀನ್ ರಿಕವರಿ ಪ್ಲಾಂಟ್ ಎಲ್ ಎಲ್ ಪಿ ಕಾರ್ಖಾನೆ ಗ್ರಾಮಸ್ಥರರ ನೆಮ್ಮದಿ ಕಿತ್ತುಕೊಂಡಿದೆ. ಇದರಿಂದ ಬೇಸತ್ತ ಗ್ರಾಮಸ್ಥರು ಕಾರ್ಖಾನೆ ಬಂದ್ ಮಾಡಿಸಿ ಅಥವಾ ಬೇರೆಡೆ ಸ್ಥಳಾಂತರ ಮಾಡುವಂತೆ ಹೆದ್ದಾರಿ ತಡೆದು ಅನಿರ್ಧಿಷ್ಟಾವಧಿ ಧರಣಿ ನಡೆಸ್ತಿದ್ದಾರೆ. ಕೇರಳ, ಗೋವಾ ರಾಜ್ಯದ ಕಸಾಯಿಖಾನೆಗಳಲ್ಲಿ ದನದ ಮಾಂಸದ ತ್ಯಾಜ್ಯವನ್ನು ಸಂಗ್ರಹಿಸ್ತಾರೆ. ಅಲ್ಲಿಂದ ತಂದ ಮಾಂಸಾವನ್ನು ಈ ಕಾರ್ಖಾನೆಯಲ್ಲಿ ಕುದಿಸಿ, ಅದರಿಂದ ಪ್ರಾಣಿಗಳ ಆಹಾರ ತಯಾರಿಸಲಾಗುತ್ತಿದೆ. ಇದರಿಂದ ಹೊರಹೊಮ್ಮುವ ದುರ್ನಾತ ಜನರ ನಿದ್ದೆಗೆಡಿಸಿದೆ. ಅಂಚಟಗೇರಿ ಗ್ರಾಮಸ್ಥರು ತಮ್ಮ ಹೊಲಗದ್ದೆಗಳಿಗೆ ಕೆಲಸ ಕಾರ್ಯಕ್ಕೂ ಹೋಗದ ಸ್ಥಿತಿ ಎದುರಾಗಿದೆ.. ಇಷ್ಟೆಲ್ಲಾ ಸಮಸ್ಯೆ ಇದ್ರೂ, ವಾಯುಮಾಲಿನ್ಯ ಮಂಡಳಿಯ ಅಧಿಕಾರಿಗಳು, ಧಾರವಾಡ ಜಿಲ್ಲಾಡಳಿತ ಮಾತ್ರ ಮೌನಕ್ಕೆ ಶರಣಾಗಿದೆ.. ಜಿಲ್ಲಾಡಳಿತದ ಮೌನ ಗ್ರಾಮಸ್ಥರ ಆಕ್ರೋಶದ ಕಟ್ಟೆ ಒಡೆಯುವಂತೆ ಮಾಡಿದೆ.
ಇದನ್ನೂ ವೀಕ್ಷಿಸಿ: ಇಲ್ಲಿ ದುಡ್ಡುಕೊಟ್ರೆ ಪರೀಕ್ಷೆ ಪಾಸ್, ಫುಲ್ ಮಾರ್ಕ್ಸ್! ಇದು ಕರ್ನಾಟಕ ರಾಜ್ಯ ಮುಕ್ತ ವಿವಿ ಕರ್ಮಕಾಂಡ