Oct 7, 2023, 11:01 AM IST
ಹಲ್ಲಿನ ಚಿಕಿತ್ಸೆಗೆ ಬಂದ ವೃದ್ಧೆಯೊಬ್ಬರ ಬಾಳಲ್ಲಿ ವೈದ್ಯನು ಚೆಲ್ಲಾಟವಾಡಿದ್ದಾನೆ. ರೂಟ್ ಕೆನಲ್‌ಗೆ ಚಿಕಿತ್ಸೆ ನೀಡುವಾಗ ಓವರ್ ಡೋಸ್ ಅನಸ್ತೇಷಿಯಾ ನೀಡಿದ್ದಾನೆ. ಈಗ ಆ ವೃದ್ಧೆ ನರಕಯಾತನೆ ಅನುಭವಿಸುತ್ತಿದ್ದಾಳೆ. ಚೇರ್‌ನಿಂದ ಎದ್ದು ನಿಲ್ಲಲಾಗದ ಪರಿಸ್ಥಿತಿ.. ಪ್ರತಿಯೊಂದು ಕೆಲಸಕ್ಕೂ ಪರರ ಅವಲಂಬನೆ. ಈ ವೃದ್ಧೆಯ(OLD Woman) ಈ ಹೀನಾಯ ಸ್ಥಿತಿಗೆ ಕಾರಣವಾಗಿದ್ದು ಒಬ್ಬ ವೈದ್ಯ. ವೈದ್ಯೋ ನಾರಾಯಣೋ ಹರಿ ಅಂತಾರೆ, ಆದರೆ ಈ ಡಾಕ್ಟರ್ ತನ್ನ ಯಡವಟ್ಟಿನಿಂದ ವೃದ್ಧೆ ಜೀವನವನ್ನೇ ನರಕ ಸದೃಶವಾಗಿಸಿದ್ದಾನೆ. ಅಂದ್ಹಾಗೆ ಇವರ ಹೆಸ್ರು ಸುಕನ್ಯಾ. ಎಡದವಡೆ ಹಲ್ಲು ನೋವೆಂದು ವೃದ್ಧೆ ಸುಕನ್ಯಾ 2021ರ ಫೆಬ್ರವರಿ 3ರಂದು ಚಾಮರಾಜನಗರ(Chamarajnagar) ರಥದ ಬೀದಿಯಲ್ಲಿರುವ ಗಿರಿಜಾ ಡೆಂಟಲ್ ಕೇರ್ ಸೆಂಟರ್ನಲ್ಲಿ ತೋರಿಸ್ತಾರೆ. ಆಗ ರೂಟ್ ಕೆನಲ್ ಚಿಕಿತ್ಸೆ ನೀಡುವ ಸಲುವಾಗ ವೈದ್ಯ ಮಂಜುನಾಥ್ ಅನಸ್ತೇಷಿಯಾ(anesthesia) ನೀಡಿದ್ದಾರೆ. ಆದ್ರೆ, ಅನಸ್ತೇಷಿಯಾ ಓವರ್ ಡೋಸ್ ಆದ ಪರಿಣಾಮ ಆಕೆ ಕೋಮಾಗೆ ಜಾರಿದ್ರು. 20 ದಿನಗಳ ಬಳಿಕ ಕೋಮಾದಿಂದ ಎದ್ದ ಸುಕನ್ಯಾಗೆ ಮತ್ತೊಂದು ದೊಡ್ಡ ಆಘಾತ ಕಾದಿತ್ತು. ಆಕೆಯ ದೇಹದ ಎಡಭಾಗ ಸಂಪೂರ್ಣವಾಗಿ ನಿಯಂತ್ರಣ ಕಳೆದು ಕೊಂಡಿದೆ.. ಅಂದಿನಿಂದ ಇಂದಿನವರೆಗೂ ಸ್ವಾಧೀನ ಇಲ್ಲದೆ ಹಾಸಿಗೆ ಮೇಲೆಯೇ ಮಲಗುವಂತಾಗಿದೆ. ತಮ್ಮ ತಾಯಿಗಾದ ಅನ್ಯಾಯದ ಕುರಿತು ಪುತ್ರ ಸುಮನ್ ಜಿಲ್ಲಾ ಕನ್ಸೂಮರ್ ಕೋರ್ಟ್ಗೆ ಅರ್ಜಿ ಹಾಕಿದ್ರು. ಜಿಲ್ಲಾ ಗ್ರಾಹಕರ ವೇದಿಕೆ ಕೋರ್ಟ್ ಡಾ.ಮಂಜುನಾಥನಿಗೆ 9 ಲಕ್ಷದ 24 ಸಾವಿರದ 605 ರೂ. ದಂಡವನ್ನ ವಿಧಿಸಿದೆ.
ಇದನ್ನೂ ವೀಕ್ಷಿಸಿ: ಸೆಟ್ ಬ್ಯಾಕ್ ಬಿಡದಿದ್ದಕ್ಕೆ ಬಿಲ್ಡಿಂಗ್ ಡೆಮಾಲಿಷನ್: 1 ಕೋಟಿ ಲಂಚ ಪಡೆದ್ರಾ ಉಗ್ರಪ್ಪ ?