ಒಂದು ಕುರ್ಚಿ.. ಇಬ್ಬರು ಅಧಿಕಾರಿಗಳ ಫೈಟ್: ಸರ್ಕಾರದ ಆದೇಶ..ಇಬ್ಬರ ನಡುವೆ ಕಿತ್ತಾಟ

ಒಂದು ಕುರ್ಚಿ.. ಇಬ್ಬರು ಅಧಿಕಾರಿಗಳ ಫೈಟ್: ಸರ್ಕಾರದ ಆದೇಶ..ಇಬ್ಬರ ನಡುವೆ ಕಿತ್ತಾಟ

Published : Aug 22, 2023, 11:24 AM IST

ಜನರು ಕಿತ್ತಾಟ ನಡೆಸೋದು ಕಾಮನ್..ಆದ್ರೆ ಇಲ್ಲಿ ಡಾಕ್ಟರ್‌ಗಳೇ ದೊಡ್ಡ ಜಗಳ ಆಡಿದ್ದಾರೆ. ಬಾಗಲಕೋಟೆ ಜಿಲ್ಲಾಸ್ಪತ್ರೆಯಲ್ಲಿ ಇಬ್ಬರು DHOಗಳು ಕುರ್ಚಿಗಾಗಿ ಕಿತ್ತಾಟ ನಡೆಸುತ್ತಿದ್ದಾರೆ. 
 

ಇಬ್ಬರು ಅಧಿಕಾರಿಗಳ ಮಧ್ಯೆ ಮಾತಿನ ಚಕಮಕಿ.. ಕಣ್ಣೀರು ಹಾಕ್ತಿರೋ ಮಹಿಳಾ ಅಧಿಕಾರಿ.. ಈ ದೃಶ್ಯ ಕಂಡು ಬಂದಿದ್ದು ಬಾಗಲಕೋಟೆ ಜಿಲ್ಲಾ ಆರೋಗ್ಯ ಕೇಂದ್ರದಲ್ಲಿ. ಸರ್ಕಾರದ ವರ್ಗಾವಣೆ (Transfer)ಆದೇಶದಿಂದ ಈಗ ಒಂದೇ ಕುರ್ಚಿಗೆ ಇಬ್ಬರ ನಡುವೆ ಕಿತ್ತಾಟ ಶುರುವಾಗಿದೆ. ಬಾಗಲಕೋಟೆ(Bagalkot) ಜಿಲ್ಲಾಸ್ಪತ್ರೆಯಲ್ಲಿ DHO ಆಗಿ ಡಾ.ಜಯಶ್ರೀ ಎಮ್ಮಿ ಕಾರ್ಯನಿರ್ವಹಿಸುತ್ತಿದ್ರು. ಆದ್ರೆ ಕೆಲ ದಿನ ರಜೆ ಮೇಲೆ ಹೋಗಿ ವಾಪಸ್ ಆಗುವಷ್ಟರಲ್ಲಿ, ಇದೇ ಹುದ್ದೆಗೆ ಸರ್ಕಾರ ವಿಜಯಪುರದ DHO ಆಗಿದ್ದ ವಿಜಯಕುಮಾರ್ ಯರಗಲ್‌ರನ್ನು ನೇಮಿಸಿದೆ. ಜಯಶ್ರೀಗೆ ಯಾವುದೇ ಜಾಗ ತೊರಿಸದೇ ವರ್ಗಾವಣೆ ಮಾಡಿದೆ. ಸರ್ಕಾರದ ಈ  ಆದೇಶದ ವಿರುದ್ಧ ಸಿಟ್ಟುಗೆದ್ದ ಡಾಕ್ಟರ್ ಜಯಶ್ರೀ ಕೆಎಟಿ ಮೋರೆ ಹೋಗಿ ಸ್ಟೇ ತಂದಿದ್ದಾರೆ. ಇನ್ನು ನೀವು ನಿಮ್ಮ ಕೆಲಸ ಮುಂದುವರೆಸಿ ಎಂದು ಸಿಇಒ ಹೇಳಿದ್ದಾರೆ. ಅದ್ರಂತೆ ಕಚೇರಿಗೆ ಬಂದಿದ್ದೇನೆ ಎಂದು ಡಾ.ಜಯಶ್ರೀ ಎಮ್ಮಿ ಹೇಳ್ತಿದ್ದಾರೆ. ಕೆಎಟಿಯಿಂದ (KAT) ಸ್ಟೇ ತಂದ ಡಾಕ್ಟರ್ ಜಯಶ್ರೀ ಡಿಎಚ್ಒ ಕುರ್ಚಿ ತನಗೇ ಬಿಟ್ಟು ಕೊಡುವಂತೆ ಪಟ್ಟು ಹಿಡಿದಿದ್ದಾರೆ. ಆದ್ರೆ, ಇತ್ತ ಡಾಕ್ಟರ್ ವಿಜಯಕುಮಾರ್ ತಾನು ಸರ್ಕಾರದ ಆದೇಶದ ಪ್ರಕಾರವೇ ಬಂದಿದ್ದೇನೆ. ಆದೇಶ ಪ್ರತಿಯೂ ನನ್ನ ಬಳಿ ಇದೆ. ಇಲ್ಲಿ ತಾನು ಒಬ್ಬನೇ ಡಿಹೆಚ್‌ಒ ಎನ್ನುತ್ತಿದ್ದಾರೆ.

ಇದನ್ನೂ ವೀಕ್ಷಿಸಿ:  ಹಳ್ಳ ಹಿಡಿದ ಬಿಜೆಪಿ ಸರ್ಕಾರದ ಯೋಜನೆ: ತುಕ್ಕು ಹಿಡಿದ ‘ಪಶು ಸಂಜೀವಿನಿ’ ಆ್ಯಂಬುಲೆನ್ಸ್ !

03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!