Nov 30, 2023, 9:50 AM IST
ಗುಂಪುಗೂಡಿ ನಿಂತಿರೋ ಇವರೆಲ್ಲರು ಧಾರವಾಡದ(Dharwad) ಗ್ರಾಮೀಣ ಪ್ರದೇಶಗಳ ಜನರು. ಈ ಬಾರಿ ಮಳೆರಾಯ(Rain) ಕೈ ಕೊಟ್ಟ ಹಿನ್ನೆಲೆ ಕೃಷಿ ಕೆಲಸಗಳು ಸ್ಥಗಿತಗೊಂಡಿವೆ. ಜಮೀನುಗಳಲ್ಲಿ ಕೆಲಸ ಇಲ್ಲದೇ ಗ್ರಾಮೀಣ ಭಾಗದ ಜನರು ಹೊಟ್ಟೆಪಾಡಿಗಾಗಿ ಬೇರೆ ಉದ್ಯೋಗಗಳನ್ನ(Jobs) ಅರಸಿ ಪಟ್ಟಣಗಳತ್ತ ಮುಖಮಾಡಿದ್ದಾರೆ. ಪಟ್ಟಣಗಳಿಗೆ ಗುಳೆ ಬರ್ತಿರೋ ಜನರು ದಿನಗೂಲಿ ಲೆಕ್ಕದಲ್ಲಿ ಕೆಲಸ ಮಾಡಿ ಕುಟುಂಬಗಳನ್ನ ಸಾಕುತ್ತಿದ್ದಾರೆ. ಬರಗಾಲದ(Drought) ಸಂದರ್ಭದಲ್ಲಿ ರೈತರು, ಗ್ರಾಮೀಣ ಪ್ರದೇಶಗಳ ಜನರಿಗೆ ಉದ್ಯೋಗ ಕಲ್ಪಿಸಲೆಂದೇ ನರೇಗಾ ಯೋಜನೆ ಜಾರಿಯಲ್ಲಿದೆ. ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಉದ್ಯೋಗ ಸೃಷ್ಟಿಸಿ ಜನರ ದುಡಿಮೆಗೆ ದಾರಿ ಮಾಡಿಕೊಡುವುದು ಈ ಯೋಜನೆ ಉದ್ದೇಶ. ಆದ್ರೆ ಧಾರವಾಡ ಜಿಲ್ಲೆಯನ್ನ ಈಗಾಗಲೇ ಬರಪೀಡಿತ ಅಂತಾ ಘೋಷಣೆ ಮಾಡಿದ್ರೂ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸಗಳನ್ನ ಸೃಷ್ಟಿಸುತ್ತಿಲ್ಲ. ಉದ್ಯೋಗ ಸೃಷ್ಟಿಗೆ ನಿರ್ಲಕ್ಷ್ಯ ತೋರುತ್ತಿರುವ ಜಿಲ್ಲಾಡಳಿತ ಹಾಗೂ ಗ್ರಾಮ ಪಂಚಾಯ್ತಿ ಅಧಿಕಾರಿಗಳ ವಿರುದ್ಧ ಜನರು ಹಿಡಿಶಾಪ ಹಾಕುತ್ತಿದ್ದಾರೆ.ನರೇಗಾ ಯೋಜನೆಯಡಿ ಕೆಲಸ ಸೃಷ್ಟಿಸದ ಬಗ್ಗೆ ಸಚಿವ ಸಂತೋಷ್ ಲಾಡ್ರನ್ನ ಪ್ರಶ್ನಿಸಿದ್ರೆ, ಕೇಂದ್ರ ಸರ್ಕಾರ ಅನುದಾನ ಕಡಿತಗೊಳಿಸಿದೆ. ಈ ಬಗ್ಗೆ ಕೇಂದ್ರ ಸರ್ಕಾರವೇ ಉತ್ತರಿಸಬೇಕು ಎನ್ನುತ್ತಿದ್ದಾರೆ.ಗ್ರಾಮೀಣ ಪ್ರದೇಶಗಳ ಜನರನ್ನ ಆರ್ಥಿಕವಾಗಿ ಸದೃಢಗೊಳಿಸುವ ಉದ್ದೇಶದಿಂದಲೇ ಜಾರಿಗೊಳಿಸಿದ ಯೋಜನೆ ನರೇಗಾ. ಆದ್ರೆ ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಮಹಾತ್ವಾಕಾಂಕ್ಷಿ ಯೋಜನೆಯೊಂದು ಜನರ ಪ್ರಯೋಜನಕ್ಕೆ ಬಾರದಂತಾಗಿರುವುದು ನಿಜಕ್ಕೂ ವಿಪರ್ಯಾಸ.
ಇದನ್ನೂ ವೀಕ್ಷಿಸಿ: Today Horoscope: ಇಂದು ಕನಕದಾಸರ ಜಯಂತಿ ಇದ್ದು, 12 ರಾಶಿಗಳ ಭವಿಷ್ಯ ಹೇಗಿದೆ ?