Mangaluru : ಸಿಂಧೂರ ಕಾಯಿ ಬಳಸಿ ಮನೆಯಲ್ಲೇ ತಯಾರಿಸಿ ಚಂದದ ಬಣ್ಣ..!

Mangaluru : ಸಿಂಧೂರ ಕಾಯಿ ಬಳಸಿ ಮನೆಯಲ್ಲೇ ತಯಾರಿಸಿ ಚಂದದ ಬಣ್ಣ..!

Published : Mar 05, 2022, 11:35 AM IST

*  ಮೇಕಪ್ ಮಾಡ್ಕೊಂಡು ಸ್ಮಾರ್ಟ್ ಆಗೋದಕ್ಕೆ ಬಣ್ಣ ಬೇಕು 
*  ರಾಸಾಯನಿಕಯಕ್ತ ಬಣ್ಣ ಬಳಸಿ ಆರೋಗ್ಯ ಯಾಕೆ ಹಾಳು ಮಾಡೋದು?
*  ಸಾವಯವ ಬಣ್ಣ ಬಳಸಿ ಆರೋಗ್ಯವನ್ನೂ, ಸೌಂದರ್ಯವನ್ನೂ ಕಾಪಾಡಿ
 

ದಕ್ಷಿಣ ಕನ್ನಡ(ಮಾ.05): ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಪಣಂಬೂರು ಪರಿಸದಲ್ಲಿ ಯಥೇಚ್ಛವಾಗಿ ಬೆಳೆಯುವ ಲಿಪ್ ಸ್ಟಿಕ್ ಟ್ರೀ ಅಂತ ಕರೆಯುವ ಈ ಮರದ ವೈಜ್ಞಾನಿಕ ಹೆಸರು ಅನೋಟಾ. ಬಣ್ಣದಕಾಯಿ, ಕುಂಕುಮಕಾಯಿ, ಸಿಂಧೂರಕಾಯಿ ಅಂತಾನೂ ಕರೆಯುತ್ತಾರೆ. ಇದರ ಕಾಯಿಯಲ್ಲಿರುವ ಬೀಜವೇ ನೈಸರ್ಗಿಕ ಬಣ್ಣ. ಹಿಂದೆ ಋಷಿಮುನಿಗಳ ಖಾವಿ ಬಟ್ಟೆ ತಯಾರಿಗೆ ಇದರ ಬಣ್ಣ ಬಳಸುತ್ತಿದ್ದರು. ತುಳಸಿಕಟ್ಟೆಗೆ ಬಣ್ಣ ಬಳಿಯಲು, ಗೋವಿನ ಹಬ್ಬದಲ್ಲಿ ಗೋವಿಗೆ ಬಣ್ಣ ಹಚ್ಚಲು ಇದನ್ನು ಬಳಸುತ್ತಿದ್ದರು.

Belagavi: ನಿವೃತ್ತ ಸೇನಾಧಿಕಾರಿಗೆ ಭರ್ಜರಿ ಸ್ವಾಗತ: ಜನಸಾಗರ ನೋಡಿ ಭಾವುಕರಾದ ವೀರಯೋಧ..!

ಬಳಿಕ ಲಿಪ್ ಸ್ಟಿಕ್ ಆಗಿಯೂ ಇದು ಬಳಕೆಗೆ ಬಂತು. ಈಗಲೂ ಪಶ್ಚಿಮ ಬಂಗಾಳ ಸೇರಿದಂತೆ ನಾರ್ತ್ ಈಸ್ಟ್ ರಾಜ್ಯಗಳಲ್ಲಿ ಇದನ್ನು ಬಣ್ಣದ ರೂಪದಲ್ಲಿ ಬಳಸುತ್ತಾರೆ. ವಿದೇಶಗಳಲ್ಲೂ ಇದು ವ್ಯಾಪಕವಾಗಿ ಬಳಕೆಯಲ್ಲಿದೆ. ಹಸಿರು ಹೃದಯಾಕಾರದ ಎಲೆ, ಬಿಳಿಯ ಹೂವು, ಬಳಿಕ ಕಾಯಾಗಿ ಬಲಿತ ಬಳಿಕ ಒಣಗುತ್ತದೆ. ಒಣಗಿದ ಬಳಿಕ ಅದರಲ್ಲಿಯ ಬೀಜವನ್ನ ಬಣ್ಣವಾಗಿ ಬಳಸಬಹುದು. ಕೆಲವರು ಖಾದ್ಯ ತಯಾರಿಸುವಾಗಲೂ ಈ ಬಣ್ಣ ಬಳಸುವುದಿದೆ. ಆಹಾರದ ಬಣ್ಣವಾಗಿ ಬಳಸುತ್ತಿದ್ದು, ಜಿಲೇಬಿಗೆ ಕೃತಕ ಬಣ್ಣದ ಬದಲಾಗಿ ಇದನ್ನು ಬಳಸುತ್ತಾರೆ. ಸ್ವಲ್ಪ ಪ್ರಮಾಣದ ಬೀಜಗಳನ್ನು ಬೆಚ್ಚಗಿನ ನೀರು, ಅಥವಾ ಹಾಲಿನಲ್ಲಿ ಕಲೆಸಿ ಸ್ವಲ್ಪ ಹೊತ್ತು ಬಿಟ್ಟು ಸೋಸಿದರೆ ಸಿಗುವ ಬಣ್ಣದ ನೀರನ್ನು ಜಿಲೇಬಿ ಹಿಟ್ಟಿಗೆ ಬಳಸಬಹುದು ಎನ್ನುತ್ತಾರೆ ಬಾಣಸಿಗರು. ಹಾಗೇ ಕೇಸರಿ ಬಾತು ರೀತಿಯ ಬಣ್ಣ ಬೇಕಾಗುವ ಭಕ್ಷ್ಯ, ಮತ್ತಿತರ ತಿಂಡಿಗಳಲ್ಲಿ ಬಳಸಬಹುದು. ಇದನ್ನು ಔಷಧವಾಗಿಯೂ ಕೆಲವೆಡೆ ಬಳಸುವುದಿದೆ.

ಗುಲಾಬಿ ಮತ್ತು ಕೆಂಪು ಹೀಗೆ ಎರಡು ಬಣ್ಣದ ಗಿಡಗಳು ನಮಗೆ ಸಾಮಾನ್ಯವಾಗಿ ನೋಡಲು ಸಿಗುತ್ತವೆ.  ಇನ್ನೇನು ಕೆಲವೇ ದಿನಗಳಲ್ಲಿ ನಾಡಿನಾದ್ಯಂತ ಹೋಳಿಹಬ್ಬ ಆಚರಣೆಯಾಗಲಿದೆ. ಒಟ್ಟಿನಲ್ಲಿ ಅತಿಯಾದ ರಾಸಾಯನಿಕ ಬಳಸಿದ ಬಣ್ಣಗಳ ಬಳಕೆ ಖರ್ಚಿಗೂ ದಾರಿ, ಆರೋಗ್ಯಕ್ಕೂ ಮಾರಿ. ಹಾಗಾಗಿ ಈ ಸಲ ರಾಸಾಯನಿಕ ಬಣ್ಣಗಳ ಬದಲಾಗಿ ಪ್ರಕೃತಿಯಲ್ಲಿ ಸಿಗುವ ಇಂತಹ ನೈಸರ್ಗಿಕ ಬಣ್ಣದಿಂದ ಮುಂಬರುವ ಹೋಳಿ ಹಬ್ಬವನ್ನು ಆಚರಿಸೋಣ. 
 

26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
Read more