ಹಿಂದೂ ದೇಗುಲ ಕಟ್ಟಿಸಿದ ಮುಸ್ಲಿಂ ಯುವಕ: ಗಾಳೆಮ್ಮ ದೇವಸ್ಥಾನ ನಿರ್ಮಾಣ ಮಾಡಿದ ಇಮಾಮ್‌ ಸಾಬ್‌ !

Nov 22, 2023, 10:18 AM IST


ಸುಸಜ್ಜಿತವಾಗಿ ನಿರ್ಮಾಣವಾದ ಗಾಳೆಮ್ಮ ದೇಗುಲ. ದೇಗುಲ ಉದ್ಘಾಟನೆ ಸಂಭ್ರಮದಲ್ಲಿ ಮುಳುಗಿದ ಊರ ಮಂದಿ.. ಹೋಮ ಹವನ, ಪೂಜೆ ಪುನಸ್ಕಾರ.. ಇಡಿ ಊರಿಗೆ ಊರೆ ಸಂಭ್ರಮದಲ್ಲಿ ಮುಳುಗಿದ ದೃಶ್ಯ ಇದು. ಸಾಮಾನ್ಯವಾಗಿ ಹೊಸದಾಗಿ ದೇಗುಲ ಉದ್ಘಾಟನೆ ಕಾರ್ಯಕ್ರಮ ಅಂದ್ರೆ ಊರ ಮಂದಿಯೆಲ್ಲ ಖುಷಿ ಪಡೋದು ಕಾಮನ್ ಅದ್ರೆ, ಕೊಪ್ಪಳ(Koppal) ತಾಲೂಕಿನ ನರೇಗಲ್ ಗ್ರಾಮದಲ್ಲಿನ ಈ ದೇಗುಲ ಉದ್ಘಾಟನೆ ಕಾರ್ಯಕ್ರಮದ ಸಂಭ್ರಮದ ಹಿಂದೆ ಇನ್ನೂ ಒಂದು ವಿಶೇಷತೆ ಇದೆ. ಅದೇನಂದ್ರೆ ಈ ದೇಗುಲ ಕಟ್ಟಿಸಿದ್ದು ಒಬ್ಬ ಮುಸ್ಲಿಂ ಯುವಕ(Muslim Youth). ಹೌದು ಹಿಂದೂ ದೇಗುಲವನ್ನು ಮುಸ್ಲಿಂ ಯುವಕ ಇಮಾಮ್ ಸಾಬ್ ಎಂಬಾತ ಸ್ವಂತ ಹಣದಲ್ಲಿ ನಿರ್ಮಿಸಿಕೊಡುವ ಮೂಲಕ ಧಾರ್ಮಿಕ ಸಾಮರಸ್ಯದ ಸಂದೇಶ ಸಾರಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಗಾಳೆಮ್ಮ ದೇಗುಲ ಬಿದ್ದು ಹೋಗಿತ್ತು. ದೇಗುಲ ಮರು ನಿರ್ಮಾಣಕ್ಕೆ ನಿರ್ಧರಿಸಿದ ಗ್ರಾಮಸ್ಥರು, ಮರಳು ಗಣಿಗಾರಿಕೆ ಗುತ್ತಿಗೆ ಹಿಡಿದಿದ್ದ ಇಮಾಮ್ ಸಾಬ್(Imam saab) ಬಳಿ ಬಂದು ಮರಳು ಕೇಳಿದ್ದಾರೆ. ಆಗ ಇಮಾಮ್ ಸಾಬ್ ಮರಳು ಯಾಕೆ. ನಾನೇ ದೇವಾಲಯ ನಿರ್ಮಿಸಿ ಕೊಡುತ್ತೇನೆ ಎಂದು ಭರವಸೆ ಕೊಟ್ಟಿದ್ದರಂತೆ. ಕೊಟ್ಟ ಮಾತಿನಂತೆ ಇಮಾಮ್ ಸಾಬ್ 25 ಲಕ್ಷ ಖರ್ಚು ಮಾಡಿ ದೇಗುಲ ನಿರ್ಮಿಸಿಕೊಟ್ಟಿದ್ದಾರೆ. ನಿನ್ನೆ ದೇಗುಲ ಉದ್ಘಾಟನೆಯೂ ನಡೀತು. ಇಮಾಮ್ ಸಾಬ್ ಮೂಲತಃ ಗದಗ್ನ ರಾಜೀವ ಗಾಂಧಿ ನಗರದ ನಿವಾಸಿ. ‌ಕಳೆದ ನಾಲ್ಕೈದು ವರ್ಷಗಳಿಂದ ಕೊಪ್ಪಳದ ನರೇಗಲ್ನಲ್ಲಿ ಮರಳು ಗುತ್ತಿಗೆದಾರಿಕೆ ಮಾಡುತ್ತಿದ್ದಾರೆ.. ಈಗ ನರೇಗಲ್ ಗ್ರಾಮದಲ್ಲಿ ಗಾಳೆಮ್ಮ ದೇಗುಲ ನಿರ್ಮಿಸಿಕೊಡುವ ಮೂಲಕ ಗ್ರಾಮಸ್ಥರಿಗೆ  ಮತ್ತಷ್ಟು ಹತ್ತಿರವಾಗಿದ್ದಾರೆ.

ಇದನ್ನೂ ವೀಕ್ಷಿಸಿ:  ಕುಸಿಯುವ ಹಂತದಲ್ಲಿ ಶಾಲಾ ಮೇಲ್ಛಾವಣಿ.. ಸಂಜೆ ಆಗ್ತಿದ್ದಂತೆ ಪುಂಡರ ಅಡ್ಡೆಯಾಗುತ್ತೆ ಶಾಲಾ ಮೈದಾನ!