Shivamogga Violence: ಮುಸಲ್ಮಾನ್ ಗೂಂಡಾಗಳಿಗೆ ಕಾಂಗ್ರೆಸ್‌ ಬೆಂಬಲವಿದೆ: ಈಶ್ವರಪ್ಪ ಆರೋಪ

Aug 16, 2022, 3:06 PM IST

ಬೆಂಗಳೂರು (ಆ. 16):  ಮುಸಲ್ಮಾನ್ ಗೂಂಡಾಗಳಿಗೆ ಕಾಂಗ್ರೆಸ್‌ ಬೆಂಬಲವಿದೆ  ಎಂದು ಮಾಜಿ ಸಚಿವ ಈಶ್ವರಪ್ಪ ಹೇಳಿದ್ದಾರೆ. ಶಿವಮೊಗ್ಗದಲ್ಲಿ ನಡೆದ ಗಲಾಟೆ ಬಗ್ಗೆ ಬೆಂಗಳೂರಲ್ಲಿ ಮಾತನಾಡಿರುವ ಈಶ್ವರಪ್ಪ "ಇಡೀ ಹಿಂದೂ ಸಮಾಜ ಎದ್ರೆ ಮುಸಲ್ಮಾನರು ಏನಾಗ್ತಾರೆ? ಆದರೆ ಹಿಂದೂಗಳು ಶಾಂತಿಪ್ರಿಯರು" ಎಂದು ಹೇಳಿದ್ದಾರೆ. "ಹಿಂದೂಗಳ ಗಣಪತಿ ಉತ್ಸವಕ್ಕೆ ಅಡ್ಡ ಬಂದ್ರೆ ಸರಿ ಇರಲ್ಲ, ನೀವು ನಿಮ್ಮ ಹಬ್ಬ ಮಾಡಲ್ವಾ? ನಾವು ಬೆಂಬಲ್ ಕೊಡಲ್ವಾ? ನಮ್ಮ ತಂಟೆಗೆ ಬರಬೇಡಿ" ಎಂದು ಈಶ್ವರಪ್ಪ ಹೇಳಿದ್ದಾರೆ. ಶಿವಮೊಗ್ಗದಲ್ಲಿ 2 ದಿನಗಳ ಹಿಂದೆ ಆರಂಭವಾಗಿದ್ದ ವೀರ ಸಾವರ್ಕರ್‌ ಪೋಟೋ ವಿವಾದ ಮತ್ತೆ ಭುಗಿಲೆದ್ದಿದೆ. ಗಾಂಧಿ ಬಜಾರಿನ ಉಪ್ಪಾರ ಕೇರಿಯಲ್ಲಿ ಯುವಕನೊಬ್ಬನಿಗೆ ಚಾಕು ಇರಿಯಲಾಗಿದ್ದು, ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. 

ಮುಸ್ಲಿಮ್ ಹಿರಿಯರೇ, ಗೂಂಡಾಗಳಿಗೆ ಬುದ್ಧಿ ಹೇಳಿ: ಈಶ್ವರಪ್ಪ