Jul 5, 2024, 2:00 PM IST
ಮುಡಾ 50-50 ಹಗರಣ ಬಗೆದಷ್ಟೂ ಬಯಲಾಗುತ್ತಿದೆ. ಇದೀಗ ಸಿಎಂ(Siddaramaiah) ಪತ್ನಿ ಬಳಿಕ ಅವರ ಆಪ್ತನಿಗೂ ಸೈಟ್ ಹಂಚಿಕೆಯಾಗಿದೆ ಎಂಬ ಆರೋಪ ಕೇಳಿಬಂದಿದೆ. ಸಿಎಂ ಆಪ್ತ ಹಿನಕಲ್ ಪಾಪಣ್ಣಗೂ( Hinakal Papanna) ನಿವೇಶನ ಹಂಚಿಕೆ ಆಗಿತ್ತು. 1981ರಲ್ಲಿ ಹಿನಕಲ್ ಸರ್ವೇ ನಂ.211ರಲ್ಲಿ 3.05 ಎಕರೆ ಭೂಸ್ವಾಧೀನ ಮಾಡಿಕೊಂಡಿದ್ದು, 1984ರಲ್ಲಿ ಭೂಸ್ವಾಧೀನದಿಂದ ಮುಡಾ ಕೈಬಿಟ್ಟಿದೆ. ಪರಿಹಾರವಾಗಿ 48,750 ರೂ. ಕೋರ್ಟಿಗೆ ಹಾಕಿದ್ದರೂ ಸ್ವೀಕರಿಸಿರಲಿಲ್ಲ. ಪರಿಹಾರ ಸ್ವೀಕಾರ ಸಂಬಂಧ ಕೋರ್ಟ್‌ನಲ್ಲಿ ವ್ಯಾಜ್ಯ ಇದ್ದು, ಮುಡಾದಲ್ಲಿ ಚರ್ಚೆ( MUDA site allotment) ಬಳಿಕ ಬದಲಿ ನಿವೇಶನ ನೀಡಲು ನಿರ್ಣಯ ಕೈಗೊಳ್ಳಲಾಗಿದೆ. 12-06-2024ರಲ್ಲಿ ಪರಿಹಾರ ನೀಡಿ ಮುಡಾ ಆದೇಶ ನೀಡಿದೆ. ವಿಜಯನಗರದ 2, 3, 4ನೇ ಹಂತದಲ್ಲಿ 20 ಸೈಟ್ ಹಂಚಿಕೆ ಮಾಡಲಾಗಿದ್ದು, ವಿವಿಧ ಅಳತೆಯ 36,753 ಚದರಿ ಅಡಿ ನಿವೇಶನ ಹಂಚಿಕೆ ಮಾಡಲಾಗಿದೆ. ಮುಡಾ ಆಯುಕ್ತ ಜಿ.ಟಿ.ದಿನೇಶ್ ಕುಮಾರ್ ರಿಂದಲೇ ಆದೇಶ ಹೊರಡಿಸಲಾಗಿದೆ. ಮೈಸೂರಿನ ವಿಜಯನಗರದಲ್ಲೇ ಪರಿಹಾರ ರೂಪದಲ್ಲಿ ಸೈಟ್ ಹಂಚಿಕೆ ಮಾಡಲಾಗಿದೆ.
ಇದನ್ನೂ ವೀಕ್ಷಿಸಿ: ಯುವಕ ಅಜಿತ್ ಕೊಲೆ ಪ್ರಕರಣ ..ಹಂತಕರಿಗೆ ದರ್ಶನ್ ನಟನೆಯ ಕರಿಯ ಸಿನಿಮಾವೇ ಸ್ಪೂರ್ತಿಯಂತೆ !