Oct 9, 2023, 11:33 AM IST
ಕಣ್ಣೀರು ಹಾಕುತ್ತಾ ಭಯದಿಂದಲೇ ಯುವಕನಿಗೆ ಅನ್ನ ನೀಡುತ್ತಿರುವ ಮಹಿಳೆ ಹೆಸರು ನೀಲಮ್ಮ. ಮತ್ತೊಂದು ಕಡೆ ಕೈ- ಕಾಲಿಗೆ ಬೇಡಿ ಹಾಕಿಕೊಂಡು ನರಳುತ್ತಿರುವ ಯುವಕ. ಈ ದೃಶ್ಯಗಳು ಕಂಡು ಬಂದಿದ್ದು ರಾಯಚೂರು(Raichur) ಜಿಲ್ಲೆ ಲಿಂಗಸೂಗೂರು ತಾಲೂಕಿನ ದೇವರಭೂಪರ ಗ್ರಾಮದಲ್ಲಿ. ದೇವರಭೂಪುರ ಗ್ರಾಮದ ನೀಲಮ್ಮ ಹಾಗೂ ರಂಗಪ್ಪ ದಂಪತಿಗೆ ಇಬ್ಬರು ಮಕ್ಕಳು. ಈ ಪೈಕಿ ಮೊದಲನೇ ಮಗ 28 ವರ್ಷದ ಈ ಹನುಮಂತ. ಈತ ಮಾನಸಿಕ ಅಸ್ವಸ್ಥನಂತೆ(Mentally ill). ಹೀಗಾಗಿ ಕಳೆದ 6 ವರ್ಷಗಳಿಂದ ಹೆತ್ತವರೇ ಗೃಹ ಬಂಧನದಲ್ಲಿಟ್ಟಿದ್ದಾರೆ. ಹನುಮಂತನ ಕೈ-ಕಾಲುಗಳಿಗೆ ಕೋಳ ಹಾಕಲಾಗಿದೆ. ಈತನನ್ನ ಮನೆಯ ಒಂದು ಕೋಣೆಯಲ್ಲಿರಿಸಿದ್ರೆ, ತಾಯಿ ನೀಲಮ್ಮ, ತಂದೆ ರಂಗಪ್ಪ ಹಾಗೂ ತಮ್ಮ ವೆಂಕಟೇಶ್ ಮತ್ತೊಂದು ಕೋಣೆಯಲ್ಲಿರ್ತಾರೆ. ಕಳೆದ ಕೆಲ ವರ್ಷಗಳ ಹಿಂದೆ ಹನುಮಂತ ಮರದ ಮೇಲಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದನಂತೆ. ಇದಾದ ಬಳಿಕ ಮಾನಸಿಕವಾಗಿ ನೊಂದು ಹೋಗಿದ್ದ ಈತ, ಸಿಕ್ಕ ಸಿಕ್ಕವರ ಮೇಲೆ ಎರಗುತ್ತಿದ್ದನಂತೆ. ಅದೇ ಕಾರಣಕ್ಕೆ ಕೈಗೆ ಕೋಳ ತೊಡಿಸಿದ ಪೋಷಕರು, ಕಳೆದ 6 ವರ್ಷಗಳಿಂದಲೂ ಹೀಗೆ ಗೃಹಬಂಧನದಲ್ಲಿ(House Arrest) ಇಟ್ಟಿದ್ದಾರೆ. ಹಾಗಂತ ಹನುಮಂತನಿಗೆ ವಿವಿಧ ಆಸ್ಪತ್ರೆಗಳಿಗೆ ತೋರಿಸಿ ಚಿಕಿತ್ಸೆ ಕೂಡ ಕೊಡಿಸಿದ್ದಾರಂತೆ. ಆದ್ರೆ ದುರದೃಷ್ಟವಶಾತ್ ಆತ ಮಾತ್ರ ಚೇತರಿಕೆಯಾಗಿಲ್ಲ. ಹನುಮಂತ ಕೆಲವೊಮ್ಮೆ ಕಲ್ಲು, ಗಾಜು, ಕಟ್ಟಿಗೆಗಳನ್ನ ತಿನ್ನುತ್ತಾನಂತೆ. ಹೀಗಾಗಿ ಈತನನ್ನು ಕಟ್ಟಿಹಾಕಿದ್ದಾರೆ. ಇಳಿವಯಸ್ಸಲ್ಲಿ ತಂದೆ-ತಾಯಿ ಸಲುಹಬೇಕಿದ್ದ ಮಗ ಗೃಹ ಬಂಧನದಲ್ಲಿ ನರಳುತ್ತಿರೋದು ದುರಂತ.
ಇದನ್ನೂ ವೀಕ್ಷಿಸಿ: ಈಡೇರದ ಭರವಸೆ, ಸರ್ಕಾರದ ವಿರುದ್ಧ ಸಿಡಿದೆದ್ಧ ನೇಕಾರರು: ಉಚಿತ ವಿದ್ಯುತ್‌ಗೆ ಆಗ್ರಹ..!