ಮಂಡ್ಯ ಜಿಲ್ಲೆಯ ಬಚ್ಚಿಕೊಪ್ಪಲು ಗ್ರಾಮದಲ್ಲಿ ಕ್ಷುಲಕ ಕಾರಣಕ್ಕೆ ಯುವಕನಿಗೆ ಚಾಕು ಇರಿದು ಕೊಲೆ ಮಾಡಲಾಗಿದೆ. ಕಾಳೇನಹಳ್ಳಿ ಗ್ರಾಮದ ಐವರು ಯುವಕರು ಈ ಕೃತ್ಯ ಎಸಗಿದ್ದು, ಗ್ರಾಮಸ್ಥರು ಆರೋಪಿಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಬಚ್ಚಿಕೊಪ್ಪಲು ಗ್ರಾಮದಲ್ಲಿ ಕ್ಷುಲಕ ಕಾರಣಕ್ಕೆ ಯುವಕನಿಗೆ ಚಾಕು ಇರಿದು ಚಿಕಿತ್ಸೆ ಫಲಿಸದೇ ಹಲ್ಲೆಗೊಳಗಾದ ಯುವಕ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಕಾಳೇನಹಳ್ಳಿ ಗ್ರಾಮದ ಐವರು ಯುವಕರು ಈ ಕೃತ್ಯ ಎಸಗಿದ್ದು ಚಾಕು ಇರಿದ ಕಿರಾತಕರಿಗೆ ಗ್ರಾಮಸ್ಥ ಧರ್ಮದೇಟು ನೀಡಿದ್ದಾರೆ. ಐವರನ್ನು ಹಿಗ್ಗಾಮುಗ್ಗ ಥಳಿಸಿದ ಬಳಿಕ ಪೊಲೀಸರಿಗೊಪ್ಪಿಸಿದ್ದು, ನಾಗಮಂಗಲ ಗ್ರಾಮಾಂತರ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.