ಮಂಡ್ಯದ ಅನ್ನದಾತನ ಬದುಕು ಮೂರಾಬಟ್ಟೆ: ಯುವ ರೈತನನ್ನು ಕಳೆದುಕೊಂಡು ಬೀದಿಗೆ ಬಿದ್ದ ಹೆತ್ತವರು !

Aug 10, 2023, 12:52 PM IST

ಆತ 25 ವರ್ಷದ ಯುವ ರೈತ. ಕೃಷಿ ಮಾಡಿ ಬದುಕು ಕಟ್ಟಿಕೊಳ್ಳುವ ಕನಸು ಕಂಡಿದ್ದ. ಆದರೆ ಸಾಲ, ಸೋಲ ಮಾಡಿ ಬೆಳೆದಿದ್ದ ಬೆಳೆ ಕೈ ಕೊಟ್ಟಿತ್ತು. ಲಕ್ಷಾಂತರ ರೂಪಾಯಿ ಸಾಲದ ಸುಳಿಗೆ ಸಿಲುಕಿದ ಆತ ಕಡೆಗೆ ಆತ್ಮಹತ್ಯೆಗೆ(suicide) ಶರಣಾಗಿದ್ದ. ಇತ್ತ ಮಗನನ್ನು ಕಳೆದುಕೊಂಡು ಸಾಲದ ಹೊರೆ ಹೊತ್ತ ಇಡೀ ಕುಟುಂಬ ಬೀದಿಗೆ ಬಿದ್ದಿದೆ. ಮೃತ ರೈತನ(Farmer) ಕುಟುಂಬಕ್ಕೆ ಪರಿಹಾರ ಕೊಡಬೇಕಿದ್ದ ಅಧಿಕಾರಗಳು ವಿಳಂಬ ಅರ್ಜಿ ಎಂಬ ಕಾರಣ ನೀಡಿ ಮಾನವೀಯತೆ ಮರೆತಿದ್ದಾರೆ. ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಮೃತ ರೈತನ ಪೋಷಕರು ಕಚೇರಿಯಿಂದ ಕಚೇರಿಗೆ ಅಲೆಯುತ್ತಾ ಪರಿಹಾರಕ್ಕಾಗಿ ಅಂಗಲಾಚುತ್ತಿದ್ದಾರೆ. ರೈತನ ಮನೆ ಬಾಗಿಲಿಗೆ ಅಧಿಕಾರಗಳು ಹೋಗಬೇಕು, ಸರ್ಕಾರದ ಸೌಲಭ್ಯಗಳು ನಿರಾಯಾಸವಾಗಿ ಅನ್ನದಾತನಿಗೆ ತಲುಪಬೇಕು ಅನ್ನೋದು ಕೇವಲ ಭಾಷಣಕ್ಕೆ ಸೀಮಿತವಾಗಿದೆ. ಯಾವೊಬ್ಬ ಅಧಿಕಾರಿ ಕೂಡ ಸರ್ಕಾರದ ಯೋಜನೆಗಳನ್ನು ರೈತನಿಗೆ ತಲುಪಿಸುವ ಕೆಲಸ ಮಾಡೋದಿಲ್ಲ. ಅದೇ ರೀತಿ ಮಂಡ್ಯದಲ್ಲೂ(Mandya) ಕೂಡ ಆತ್ಮಹತ್ಯೆಗೆ ಶರಣಾದ ರೈತನ ಕುಟುಂಬಕ್ಕೆ ಸಾಂತ್ವನ ಪರಿಹಾರ ನೀಡಲು ಅಧಿಕಾರಗಳು ಹಿಂದೇಟು ಹಾಕ್ತಿದ್ದಾರೆ. ವಿಳಂಬ ಅರ್ಜಿ ಎಂಬ ಕಾರಣಕ್ಕೆ ನೊಂದ ಕುಟುಂಬವನ್ನ ಕಣ್ಣೀರಲ್ಲಿ ಮುಳುಗಿಸಿದ್ದಾರೆ.

2022ರ ಮೇ 8ರಂದು ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಮಲ್ಲನಾಯಕನಹಳ್ಳಿ ಗ್ರಾಮದ 25 ವರ್ಷದ ಯುವ ರೈತ ಸಂದೇಶ್ ಸಾಲಬಾಧೆ ತಾಳಲಾರದೆ ಆತ್ಮಹತ್ಯೆಗೆ ಶರಣಾಗಿದ್ದರು. ಬೆಂಗಳೂರು ಬಿಟ್ಟು ತಮಗಿದ್ದ 3.5 ಎಕರೆ ಜಮೀನಿನಲ್ಲಿ ವ್ಯವಸಾಯ ಮಾಡಿ ಬದುಕು ಕಟ್ಟಿಕೊಳ್ಳಲು ಸಂದೇಶ್ ಮುಂದಾಗಿದ್ದ. ಸಾಲ ಮಾಡಿ ಕೊರೆಸಿದ್ದ ಬೋರ್ವೆಲ್ ಕೈಕೊಟ್ಟಿತ್ತು. ಮತ್ತೊಂದೆಡೆ ರೇಷ್ಮೆ, ರಾಗಿ, ಜೋಳದ ಬೆಳೆ ಕೈಗೆ ಬಾರದೇ ತೀವ್ರ ನಷ್ಟವಾಗಿತ್ತು. ಸಂದೇಶ್ ವ್ಯವಸಾಯಕ್ಕಾಗಿ ಕಳೆದ 4 ವರ್ಷಗಳಲ್ಲಿ ವಿವಿಧ ಬ್ಯಾಂಕ್ಗಳಲ್ಲಿ  6-7 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು. ಇತ್ತ ಕೃಷಿಯೂ ಕೈ ಹಿಡಿಯದೆ, ಸಾಲದ ಹೊರೆ ಹೆಚ್ಚಾಗಿದ್ದರಿಂದ ಆರ್ಥಿಕವಾಗಿ ಹಿನ್ನಡೆ ಅನುಭವಿಸಿದ್ದ ಸಂದೇಶ್ ಜಮೀನಿನಲ್ಲಿದ್ದ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ರು. ಒಂದು ತಿಂಗಳ ಕಾಲ ಆಸ್ಪತ್ರೆಯಲ್ಲಿದ್ದರು ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದರು.

ಇದನ್ನೂ ವೀಕ್ಷಿಸಿ:  ತದ್ವನಂ ಸಂಸ್ಥೆಯ ಹಿಂದಿನ ರೂವಾರಿ ಯಾರು ಗೊತ್ತಾ ?: ಹಳ್ಳಿಯಿಂದ ದೆಲ್ಲಿವರೆಗೆ ಆಹಾರೋತ್ಷನ್ನಗಳ ಮಾರಾಟ !